Advertisement
ಶನಿವಾರ ಚೆನ್ನೈನ “ಎಂ.ಎ. ಚಿದಂಬರಂ ಸ್ಟೇಡಿಯಂ’ನಲ್ಲಿ 12ನೇ ಐಪಿಎಲ್ ಕೂಟ ಆರಂಭವಾಗಲಿದ್ದು, ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ ಬೆಂಗಳೂರು ತಂಡಗಳು ಮುಖಾಮುಖೀಯಾಗಲಿವೆ. ಪಂದ್ಯದ ಟಿಕೆಟ್ ಮೊದಲ ದಿನವೇ “ಸೋಲ್ಡ್ ಔಟ್’ ಆಗಿದೆ.
ಅದ್ದೂರಿ ಆರಂಭ ಇಲ್ಲ ಪುಲ್ವಾಮಾ ಘಟನೆಯಿಂದಾಗಿ ಈ ಬಾರಿಯ ಐಪಿಎಲ್ ಅದ್ದೂರಿಯ ಆರಂಭ ಕಾಣದು. ಇದಕ್ಕೆ ತಗಲುವ ಮೊತ್ತವನ್ನು ಬಿಸಿಸಿಐ ಹುತಾತ್ಮರ ನಿಧಿಗೆ ಅರ್ಪಿಸಲಿದೆ. ಹುತಾತ್ಮ ಯೋಧರಿಗೆ ಗೌರವ ಸಲ್ಲಿಸುವ ಸಲುವಾಗಿ ಆಸ್ಟ್ರೇಲಿಯ ವಿರುದ್ಧದ 3ನೇ ಏಕದಿನ ಪಂದ್ಯದ ವೇಳೆ ಭಾರತದ ಕ್ರಿಕೆಟಿಗರು ಮಿಲಿಟರಿ ಕ್ಯಾಪ್ ಧರಿಸಿ ಆಡಲಿಳಿದಿದ್ದನ್ನು ಸ್ಮರಿಸಬಹುದು. ಜತೆಗೆ ಪಂದ್ಯದ ಸಂಭಾವನೆಯನ್ನು “ರಾಷ್ಟ್ರೀಯ ರಕ್ಷಣಾ ನಿಧಿ’ಗೆ ಸಲ್ಲಿಸಿದ್ದರು.