Advertisement
ಯೋಜನೆಯ ಸದ್ಯದ ಪ್ರಗತಿ ಏನು?ಫೆಬ್ರವರಿಯಿಂದ ಟನೆಲ್ ಬೋರಿಂಗ್ ಮಷಿನ್ ಕಾರ್ಯಾರಂಭ ಮಾಡಿದೆ. ಇದುವರೆಗೆ 20 ಮೀಟರ್ ಸುರಂಗ ಕೊರೆಯುವ ಕಾರ್ಯ ಮುಕ್ತಾಯಗೊಂಡಿದೆ. ಜುಲೈ ವೇಳೆಗೆ ನದಿಯ ಕೆಳಭಾಗದ ಸುರಂಗ ನಿರ್ಮಾಣ ಕಾರ್ಯ ಮುಕ್ತಾಯವಾಗುವ ನಿರೀಕ್ಷೆ ಇರಿಸಿಕೊಳ್ಳಲಾಗಿದೆ. ನವೆಂಬರ್ ವೇಳೆಗೆ ಅಡ್ಯಾರ್ ಜಂಕ್ಷನ್‌ಗೆ ಕಾಮಗಾರಿ ಮುಕ್ತಾಯಗೊಳ್ಳುವ ಸಾಧ್ಯತೆ ಇದೆ.
ಈ ಹಂತದಲ್ಲಿ ಒಟ್ಟು 3 ಕಾರಿಡಾರ್‌ಗಳು ನಿರ್ಮಾಣವಾಗಲಿವೆ. ಒಟ್ಟು 118.9 ಕಿಮೀ ಮಾರ್ಗ ನಿರ್ಮಾಣವಾಗಲಿದೆ. ಸದ್ಯದ ಯೋಜನೆ ಮಾಹಿತಿ ಪ್ರಕಾರ ಕಾರಿಡಾರ್ 3 ನೇರಳೆ ಮಾರ್ಗದಲ್ಲಿ 44 ನಿಲ್ದಾಣಗಳು ಇರಲಿವೆ. 19 ಕಿಮೀ ಎತ್ತರಿಸಿದ ಮಾರ್ಗ ಮತ್ತು 26.72 ಕಿಮೀ ಭೂಮಿಯ ಒಳಗೆ ರೈಲು ಮಾರ್ಗ ಇರಲಿದೆ. ಯೋಜನೆಯ ಪಕ್ಷಿ ನೋಟ
45.8 ಕಿಮೀ- ಹೊಸ ಮೆಟ್ರೋದ ಉದ್ದ
400 ಮೀಟರ್- ಅಡ್ಯಾರ್ ನದಿಯ ಕೆಳಭಾಗದಲ್ಲಿ ನಿರ್ಮಾಣಗೊಳ್ಳಲಿರುವ ಸುರಂಗದ ಉದ್ದ
20 ಮೀಟರ್- ನದಿ ಪಾತ್ರದಿಂದ ಕೆಳಗೆ ನಿರ್ಮಾಣ
32 ಮೀಟರ್- ಹೂಗ್ಲಿ ನದಿಯ ನೀರಿನ ಮಟ್ಟದಿಂದ ಕೆಳಗೆ ಟನೆಲ್ ನಿರ್ಮಾಣ
69, 180 ಕೋಟಿ ರೂ.- ಯೋಜನೆಯ ಒಟ್ಟು ವೆಚ್ಚ