Advertisement

ರಾಜರ ಗೆಲುವು ಕಸಿದ ಧೋನಿ, ರಾಯುಡು

12:24 PM Apr 13, 2019 | keerthan |

ಜೈಪುರ: ಬ್ಯಾಟಿಂಗ್‌ಗೆ ಭಾರೀ ಸವಾಲಾಗಿ ಪರಿಣಮಿಸಿದ ಜೈಪುರ ಪಿಚ್‌ನಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವು ಆತಿಥೇಯ ರಾಜಸ್ಥಾನ್‌ ರಾಯಲ್ಸ್‌ ವಿರುದ್ಧ 4 ವಿಕೆಟ್‌ ರೋಚಕ ಜಯ ಸಾಧಿಸಿದೆ.

Advertisement

ಗುರುವಾರ ರಾತ್ರಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ್ದ ರಾಜಸ್ಥಾನ್‌ ತಂಡವು ಚೆನ್ನೈ ಬಿಗು ದಾಳಿಗೆ ಸಿಲುಕಿ 20 ಓವರ್‌ಗೆ 7 ವಿಕೆಟ್‌ ನಷ್ಟಕ್ಕೆ 151 ರನ್‌ಗಳಿಸಿತು. ಗೆಲುವಿಗೆ 152 ರನ್‌ ಗುರಿ ಪಡೆದ ಚೆನ್ನೈ ಸೂಪರ್‌ ಕಿಂಗ್ಸ್‌ ಆರಂಭದಲ್ಲಿ 24 ರನ್ನಿಗೆ 4 ವಿಕೆಟ್‌ ಕಳೆದುಕೊಂಡು ಸಂಕಟಕ್ಕೆ ಸಿಲುಕಿತು. ಈ ಹಂತದಲ್ಲಿ ಒಂದಾದ ಅಂಬಾಟಿ ರಾಯುಡು (57 ರನ್‌)ಹಾಗೂ ನಾಯಕ ಎಂ.ಎಸ್‌.ಧೋನಿ (58 ರನ್‌) ಭರ್ಜರಿ ಜತೆಯಾಟವಾಡಿ ತಂಡದ ಗೆಲುವನ್ನು ಚಿಗುರಿಸಿದರು. ಕೊನೆಯ ಎಸೆತಗಳಲ್ಲಿ ರವೀಂದ್ರ ಜಡೇಜ (ಅಜೇಯ 9 ರನ್‌) ಹಾಗೂ ಸ್ಯಾಂಟ್ನರ್‌ (ಅಜೇಯ 10 ರನ್‌) ನೆರವಿನಿಂದ ಚೆನ್ನೈ 20 ಓವರ್‌ಗೆ 6 ವಿಕೆಟ್‌ಗೆ 155 ರನ್‌ ಗೆಲುವು ಸಾರಿತು.

ಚೆನ್ನೈ ಆಕ್ರಮಣಕಾರಿ ದಾಳಿ: ಇದಕ್ಕೂ ಮೊದಲು ಬ್ಯಾಟಿಂಗ್‌ ಮಾಡಿದ ರಾಜಸ್ಥಾನ್‌ ಚೆನ್ನೈ ಬೌಲಿಂಗ್‌ ದಾಳಿಯನ್ನು ಬಹಳ ಕಷ್ಟದಿಂದಲೇ ನಿಭಾಯಿಸಿತು. ಟಾಸ್‌ ಗೆದ್ದು ಬೌಲಿಂಗ್‌ ಆಯ್ದುಕೊಂಡ ಧೋನಿ ಪಡೆ ಆರಂಭದಿಂದಲೇ ಯಶಸ್ಸು ಕಾಣುತ್ತ ಹೋಯಿತು. ದೀಪಕ್‌ ಚಹರ್‌, ಶಾದೂìಲ್‌ ಠಾಕೂರ್‌, ರವೀಂದ್ರ ಜಡೇಜ ಸೇರಿಕೊಂಡು ರಹಾನೆ ಬಳಗಕ್ಕೆ ಕಡಿವಾಣ ಹಾಕುವಲ್ಲಿ ಯಶಸ್ವಿಯಾದರು. 28 ರನ್‌ ಮಾಡಿದ ಬೆನ್‌ ಸ್ಟೋಕ್ಸ್‌ ಅವರದೇ ಹೆಚ್ಚಿನ ಗಳಿಕೆ. ಇದಕ್ಕೆ ಅವರು 26 ಎಎಸೆತ ಎದುರಿಸಿದರು.
ಹೊಡೆದದ್ದು ಒಂದೇ ಬೌಂಡರಿ.

ಬಟ್ಲರ್‌ ಫೇಲ್‌:ಆರಂಭಿಕ ಬ್ಯಾಟ್ಸ್‌ಮನ್‌ ಜಾಸ್‌ ಬಟ್ಲರ್‌ ಬಿರುಸಿನ ಆಟಕ್ಕೆ ಮುಂದಾದಾಗ ರಾಜಸ್ಥಾನ್‌ ದೊಡ್ಡ ಮೊತ್ತ ಪೇರಿಸುವ ನಿರೀಕ್ಷೆ ಇತ್ತು. ಆದರೆ ಅವರ ಆಟ 23 ರನ್ನಿಗೆ ಮುಗಿಯಿತು. 10 ಎಸೆತಗಳ ಈ ಇನಿಂಗ್ಸ್‌ನಲ್ಲಿ 4
ಬೌಂಡರಿ ಹಾಗೂ 1 ಸಿಕ್ಸರ್‌ ಸೇರಿತ್ತು. ಬಟ್ಲರ್‌-ರಹಾನೆ ಕೇವಲ 2.5 ಓವರ್‌ಗಳಲ್ಲಿ 31 ರನ್‌ ಪೇರಿಸಿದರು. ಆದರೆ ನಾಯಕ ಅಜಿಂಕ್ಯ ರಹಾನೆ ಮತ್ತೂಂದು ಬ್ಯಾಟಿಂಗ್‌ ವೈಫ‌ಲ್ಯ ಅನುಭವಿಸಿ (11 ಎಸೆತ, 14 ರನ್‌) ಕುಸಿತಕ್ಕೆ ಚಾಲನೆ ನೀಡಿದರು. ಸಂಜು ಸ್ಯಾಮ್ಸನ್‌ ಎಸೆತಕ್ಕೊಂದರಂತೆ 6 ರನ್‌ ಮಾಡಿ ವಾಪಸಾದರೆ, ಸ್ಟೀವನ್‌ ಸ್ಮಿತ್‌ 15 ರನ್ನಿಗೆ 22 ಎಸೆತ ತೆಗೆದು ಕೊಂಡರು. ರಾಹುಲ್‌ ತ್ರಿಪಾಠಿ (10 ರನ್‌), ರಿಯಾನ್‌ ಪರಾಗ್‌ (16 ರನ್‌) ಕೂಡ ನಿಲ್ಲಲಿಲ್ಲ.
ಶಾದೂìಲ್‌ ಠಾಕೂರ್‌ ಎಸೆದ ಅಂತಿಮ ಓವರ್‌ನಲ್ಲಿ ಶ್ರೇಯಸ್‌ ಗೋಪಾಲ್‌ ಮತ್ತು ಆರ್ಚರ್‌ ಸೇರಿಕೊಂಡು 18 ರನ್‌ ಬಾರಿಸಿದ್ದರಿಂದ ತಂಡದ ಮೊತ್ತ ನೂರೈವತ್ತರ ಗಡಿ ದಾಟಿತು. ಗೋಪಾಲ್‌ 7 ಎಸೆತಗಳಿಂದ 19 ರನ್‌ ಮಾಡಿ
ಅಜೇಯರಾಗಿ ಉಳಿದರೆ (2 ಬೌಂಡರಿ, 1 ಸಿಕ್ಸರ್‌), ಆರ್ಚರ್‌ 12 ಎಸೆತಗಳಿಂದ 13 ರನ್‌ ಮಾಡಿದರು.

ರಾಜಸ್ಥಾನ್‌ 20 ಓವರ್‌ಗೆ 151/7
*ಅಜಿಂಕ್ಯ ರಹಾನೆ ಎಲ್‌ಬಿಡಬ್ಲೂ ಬಿ ಚಹರ್‌ 14
*ಜೋಸ್‌ ಬಟ್ಲರ್‌ ಸಿ ರಾಯುಡು ಬಿ ಠಾಕೂರ್‌ 23
*ಸ್ಯಾಮ್ಸನ್‌ ಸಿ ಸಬ್‌ (ಶೋರೆ) ಬಿ ಸ್ಯಾಂಟ್ನರ್‌ 6
* ಸ್ಟೀವ್‌ ಸ್ಮಿತ್‌ ಸಿ ರಾಯುಡು ಬಿ ಜಡೇಜ 15
* ರಾಹುಲ್‌ ತ್ರಿಪಾಠಿ ಸಿ ಜಾಧವ್‌ ಬಿ ಜಡೇಜ 10
* ಬೆನ್‌ ಸ್ಟೋಕ್ಸ್‌ ಬಿ ಚಹರ್‌ 28
* ಪರಾಗ್‌ ಸಿ ಧೋನಿ ಬಿ ಠಾಕೂರ್‌ 16
* ಆರ್ಚರ್‌ ಅಜೇಯ 13
* ಶ್ರೇಯಸ್‌ ಅಜೇಯ 19
* ಇತರೆ 7
ವಿಕೆಟ್‌ ಪತನ: 1-31, 2-47, 3-53, 4-69, 5-78, 6-103, 7-126
 ಬೌಲಿಂಗ್‌
* ದೀಪಕ್‌ ಚಹರ್‌ 4 .0 .33 .2
* ಸ್ಯಾಂಟ್ನರ್‌ 4. 0 .25. 1
* ಶಾದೂìಲ್‌ ಠಾಕೂರ್‌ 4. 0 .44 .2
* ರವೀಂದ್ರ ಜಡೇಜ 4 .0. 20. 2
* ಇಮ್ರಾನ್‌ ತಾಹಿರ್‌ 4 .0 .28. 0

Advertisement

ಚೆನ್ನೈ 20 ಓವರ್‌ಗೆ 155/6
* ಶೇನ್‌ ವ್ಯಾಟ್ಸನ್‌ ಬಿ ಕುಲಕರ್ಣಿ 0
* ಡು ಪ್ಲೆಸಿಸ್‌ ಸಿ ತ್ರಿಪಾಠಿ ಬಿ ಉನಾಡ್ಕತ್‌ 7
* ಸುರೇಶ್‌ ರೈನಾ ರನೌಟ್‌ 4
* ರಾಯುಡು ಸಿ ಶ್ರೇಯಸ್‌ ಬಿ ಸ್ಟೋಕ್ಸ್‌ 57
* ಕೇದಾರ್‌ ಜಾಧವ್‌ ಸಿ ಸ್ಟೋಕ್ಸ್‌ ಬಿ ಆರ್ಚರ್‌ 1
* ಎಂ.ಎಸ್‌.ಧೋನಿ ಬಿ ಸ್ಟೋಕ್ಸ್‌ 58
* ರವೀಂದ್ರ ಜಡೇಜ ಅಜೇಯ 9
* ಸ್ಯಾಂಟ್ನರ್‌ ಅಜೇಯ 10
* ಇತರೆ 9
* ವಿಕೆಟ್‌ ಪತನ: 1-0, 2-5, 3-15, 4-24, 5-119, 6-144
ಬೌಲಿಂಗ್‌
* ಧವಳ್‌ ಕುಲಕರ್ಣಿ 3. 1 .14 .1
* ಜೈದೇವ್‌ ಉನಾಡ್ಕತ್‌ 3. 0 .23 .1
* ಆರ್ಚರ್‌ 4. 1 .19 .1
* ಪರಾಗ್‌ 3 .0 .24. 0
* ಶ್ರೇಯಸ್‌ 4. 0. 31. 0
* ಬೆನ್‌ ಸ್ಟೋಕ್ಸ್‌ 3 .0. 39. 2

Advertisement

Udayavani is now on Telegram. Click here to join our channel and stay updated with the latest news.

Next