ಚೆನ್ನೈ: ಇಂದಿನ ತಂತ್ರಜ್ಞಾನ ಲೋಕದಲ್ಲಿ ಎಲ್ಲಾ ಪುಟಾಣಿಗಳು ಮಾಸ್ಟರ್ ಮೈಂಡ್‌ಗಳೇ. ಹಸ್ತ ತೋರಿಸಿದರೆ ಅಂಗೈಯನ್ನೇ ನುಂಗಿ ಬಿಡುತ್ತಾರೆ ಎಂಬ ಮಾತಿನ ಸ್ವರೂಪ ಇಂದಿನ ಮಕ್ಕಳು. ಅಂತಹ ಚಾಣಕ್ಯ ಮಕ್ಕಳ ಪೈಕಿ ಚೆನ್ನೈನ ಆರರ ಪೋರಿಯೊಬ್ಬಳು ವರ್ಲ್ಡ್ ರೆಕಾರ್ಡ್ ಮಾಡುವ ಮೂಲಕ ದೇಶದ ಗಮನವನ್ನು ತನ್ನತ್ತ ಸೆಳೆದುಕೊಂಡಿದ್ದಾಳೆ.
ವಿಶ್ವದ ಅತಿ ಕಿರಿಯ ಪ್ರತಿಭೆ ಎಂಬ ಹಿರಿಮೆ
ತಮಿಳುನಾಡಿನ ಆರು ವರ್ಷದ ಬಾಲಕಿ ಸರಾ 2 ನಿಮಿಷ 7 ಸೆಕೆಂಡುಗಳಲ್ಲಿ ಅತಿ ಹೆಚ್ಚು 2/2 ರುಬಿಕ್ಸ್ ಕ್ಯೂಬ್ ಗಳನ್ನು ಸರಿಯಾಗಿ ಹೊಂದಿಸುವ ಮೂಲಕ ‘ವರ್ಲ್ಡ್ಸ್ ಯಂಗೆಸ್ಟ್ ಜೀನಿಯಸ್’ ಎಂಬ ಪ್ರಶಂಸೆಗೆ ಪಾತ್ರವಾಗಿದ್ದಾಳೆ.
ಕಣ್ಣು ಮುಚ್ಚಿಕೊಂಡು ಅತಿ ಹೆಚ್ಚು ರುಬಿಕ್ಸ್ ಕ್ಯೂಬ್‌ಗಳನ್ನು ಹೊಂದಿಸುತ್ತ, ಅತ್ಯಂತ ಕಡಿಮೆ ಕಾಲಾವಧಿಯಲ್ಲಿ ಕವನಗಳನ್ನು ಸಹ ವಾಚಿಸಿ ತಮಿಳುನಾಡು ಕ್ಯೂಬ್ ಅಸೋಸಿಯೆಶನ್‌ನಿಂದ ವಿಶ್ವದ ಅತಿ ಕಿರಿಯ ಪ್ರತಿಭೆ ಎಂಬ ಹೆಗ್ಗಳಿಕೆ ಪಡೆದಿದ್ದಾಳೆ.
ಗಿನ್ನಿಸ್ ದಾಖಲೆಯ ಹಂಬಲ
ಸದ್ಯ ವಲ್ಡ್ ಯಂಗೆಸ್ಟ್ ಜೀನಿಯಸ್ ಎಂಬ ಬಿರುದು ಪಡೆದುಕೊಂಡಿರುವ ಈ ಬಾಲೆಗೆ ಗಿನ್ನೆಸ್ ವಿಶ್ವ ದಾಖಲೆಯನ್ನು ಮಾಡುವ ಆಸೆ ಇದ್ದು, ಅದಕ್ಕೆ ಬೇಕಾದ ತಯಾರಿ ಮತ್ತು ಪ್ರಯತ್ನದಲ್ಲಿ ನಿರತಳಾಗಿದ್ದಾಳೆ.