ಚೆನ್ನೈ: ಹಲವಾರು ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ್ದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯ ಉಪನ್ಯಾಸಕನನ್ನು ಪೋಕ್ಸೊ ಕಾಯ್ದೆಯಡಿ ಪೊಲೀಸರು ಬಂಧಿಸಿರುವ ಘಟನೆ ಚೆನ್ನೈನಲ್ಲಿ ನಡೆದಿದೆ.
ಇದನ್ನೂ ಓದಿ:ಟೂಲ್ ಕಿಟ್ ಜಟಾಪಟಿ, ಟ್ವಿಟರ್ ಕಚೇರಿಗೆ ಪೊಲೀಸ್; ಇದು ಬಿಜೆಪಿಯ ಹೇಡಿತನದ ದಾಳಿ: ಕಾಂಗ್ರೆಸ್
ತರಗತಿಯಲ್ಲಿ ಹಾಗೂ ಆನ್ ಲೈನ್ ತರಗತಿ ವೇಳೆಯಲ್ಲಿನ ಉಪನ್ಯಾಸಕ ನಡೆಸಿದ ಲೈಂಗಿಕ ದುರ್ನಡತೆ ಮತ್ತು ಅನುಚಿತ ವರ್ತನೆಗಳ ಬಗ್ಗೆ ಚೆನ್ನೈ ಶಾಲೆಯ ಹಲವಾರು ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣದಲ್ಲಿ ಬಹಿರಂಗಪಡಿಸಿದ ನಂತರ ಶಿಕ್ಷಕನನ್ನು ಬಂಧಿಸಿರುವ ಘಟನೆ ನಡೆದಿದೆ ಎಂದು ವರದಿ ತಿಳಿಸಿದೆ.
ಶಿಕ್ಷಕನ ವಿರುದ್ಧ ಪೋಕ್ಸೊ ಕಾಯ್ದೆಯ ಸೆಕ್ಷನ್ 12 ಮತ್ತು ಸೆಕ್ಷನ್ 67, 67(ಎ), 354(ಎ) ಮತ್ತು ಐಟಿ ಕಾಯ್ದೆ 509ರ ಅಡಿಯಲ್ಲಿ ದೂರು ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಚೆನ್ನೈನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯ ವಾಣಿಜ್ಯ ಉಪನ್ಯಾಸಕನನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಅಲ್ಲದೇ ಪೊಲೀಸ್ ವಿಚಾರಣೆಗೆ ಒಪ್ಪಿಸಲು ತಮ್ಮ ವಶಕ್ಕೆ ನೀಡುವಂತೆ ಮಂಗಳವಾರ(ಮೇ 25) ಕೋರ್ಟ್ ಗೆ ಮನವಿ ಸಲ್ಲಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಉಪನ್ಯಾಸಕನ ಮನೆಯನ್ನು ಶೋಧಿಸಿದ ವೇಳೆ ಆತನ ಲ್ಯಾಪ್ ಟಾಪ್ ಮತ್ತು ಮೊಬೈಲ್ ಫೋನ್ ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ವರದಿ ಹೇಳಿದೆ. ಕೆಲವು ವಿದ್ಯಾರ್ಥನಿಯರಿಗೆ ಆನ್ ಲೈನ್ ತರಗತಿ ವೇಳೆ ಮೊಬೈಲ್ ಗೆ ಅಸಂಬದ್ಧ ಮತ್ತು ಅಶ್ಲೀಲ ಸಂದೇಶಗಳನ್ನು ಉಪನ್ಯಾಸಕ ಕಳುಹಿಸುತ್ತಿದ್ದ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದರು. ಅಲ್ಲದೇ ಆಡಳಿತ ಮಂಡಳಿಗೂ ಈ ಬಗ್ಗೆ ದೂರು ನೀಡಿದ್ದರು ಯಾವುದೇ ಕ್ರಮ ತೆಗೆದುಕೊಂಡಿರಲಿಲ್ಲವಾಗಿತ್ತು ಎಂದು
ದೂರಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಉಪನ್ಯಾಸಕನ ಕಾಮಚೇಷ್ಠೆಯ ಪುರಾಣ ಬಹಿರಂಗವಾದ ಮೇಲೆ ಆಡಳಿತ ಮಂಡಳಿ ಈತನನ್ನು ಅಮಾನತುಗೊಳಿಸಿದೆ. ಈ ದೂರಿನ ಬಗ್ಗೆ ತನಿಖೆ ನಡೆಸುವುದಾಗಿಯೂ ತಿಳಿಸಿದೆ ಎಂದು ವರದಿ ಹೇಳಿದೆ.