ಚೆನ್ನೈ: ಮನುಷ್ಯರಿಗೆ 2 ಕಿಡ್ನಿ ಇದ್ದರೆ ಸಾಮಾನ್ಯ. ಚೆನ್ನೈನಲ್ಲಿರುವ ವ್ಯಕ್ತಿಗೆ ಐದು ಕಿಡ್ನಿಗಳಿವೆ. 14ನೇ ವರ್ಷದಲ್ಲೇ ಕಸಿ ಮಾಡಿಸಿಕೊಂಡಿದ್ದ 41 ವರ್ಷದ ಅವರಿಗೆ ಮೂರನೇ ಬಾರಿಗೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದಾರೆ.
1994ರಲ್ಲಿ ಮೊದಲ ಕಿಡ್ನಿ ಕಸಿ ಮಾಡಿಸಿಕೊಂಡಿದ್ದ ಆತನಿಗೆ 2004ರ ವೇಳೆಗೆ ಅದು ಕೆಲಸ ನಿಲ್ಲಿಸಿತ್ತು. ಅದೇ ವರ್ಷ ಮತ್ತೊಂದು ಕಿಡ್ನಿಯನ್ನು ಆತನಿಗೆ ಕಸಿ ಮಾಡಿಸಲಾಗಿತ್ತು. ಒಂದು ಹಂತದಲ್ಲಿ ಎರಡನೇ ಶಸ್ತ್ರಚಿಕಿತ್ಸೆಯಲ್ಲಿ ಅಳವಡಿಸಿದ್ದೂ ಕೆಲಸ ಮಾಡುತ್ತಿರಲಿಲ್ಲ. ಜು.10ರಂದು ಚೆನ್ನೈನ ಮದ್ರಾಸ್ ಮೆಡಿಕಲ್ ಮಿಷನ್ ನಲ್ಲಿ ಮೂರನೇ ಬಾರಿಗೆ ಕಿಡ್ನಿ ಕಸಿ ಮಾಡಲಾಯಿತು. ಕಾರ್ಯ ಮಾಡದ ಕಿಡ್ನಿಗಳನ್ನು ಹೊರ ತೆಗೆದರೆ ಅಧಿಕ ರಕ್ತಸ್ರಾವ ಉಂಟಾಗುವ ಸಾಧ್ಯತೆ ಇರುತ್ತದೆ.
ಇದನ್ನೂ ಓದಿ:ಪ್ರೇಮ ವಿವಾಹ ತಿರಸ್ಕರಿಸಿದ್ದಕ್ಕೆ ಕಿರುಕುಳ ನೀಡಿದರೆ ಕಠಿಣ ಕ್ರಮ: ಸಿಎಂ ಪಿಣರಾಯಿ ವಿಜಯನ್
ಹಾಗಾಗಿ ಹಳೆ ಕಿಡ್ನಿ ತೆಗೆಯದೆ ಆಪರೇಷನ್ ಮಾಡಲಾಗಿದೆ ಎಂದು ಡಾ. ಶರವಣನ್ ತಿಳಿಸಿದ್ದಾರೆ. ಮೂರನೇ ಕಿಡ್ನಿ ಕಸಿ ಮಾಡಲು ಆತನ ದೇಹದಲ್ಲಿ ಜಾಗವೇ ಇಲ್ಲದ ಕಾರಣ ಸಾಕಷ್ಟು ಸಮಸ್ಯೆ ಉಂಟಾಗಿದ್ದಾಗಿ ಅವರು ತಿಳಿಸಿದ್ದಾರೆ. ಕಸಿ ಸಂದರ್ಭದಲ್ಲಿ ದಾನಿಯಿಂದ ಪಡೆದುಕೊಂಡಿರುವ ಕಿಡ್ನಿಯನ್ನು ದೇಹ ಹೊಂದಿರುವ ಕಿಡ್ನಿ ಜತಗೆ ಇರಿಸಲಾಗುತ್ತದೆ.