ಚೆನ್ನೈ: ತಾಯಿ ತನ್ನ ಕ್ಯಾನ್ಸರ್ ಚಿಕಿತ್ಸೆಗೆಂದು ಕಷ್ಟಪಟ್ಟು ಕೂಡಿಟ್ಟ ಹಣವನ್ನು ಮಗ ರಮ್ಮಿ (ಆನ್ ಲೈನ್ ಗೇಮ್) ಆಡಲು ಬಳಸಿದ ಕಾರಣಕ್ಕೆ ತಾಯಿ ಹಾಗೂ ಸಹೋದರ ಬೈದ ಕಾರಣಕ್ಕೆ ಸಿಟ್ಟುಗೊಂಡು ಆತ್ಮಹತ್ಯೆಗೆ ಶರಣಾಗಿರುವ ವಿಚಿತ್ರ ಘಟನೆಯೊಂದು ಚೆನ್ನೈ ನಲ್ಲಿ ನಡೆದಿದೆ.
ಚೆನ್ನೈನ ಚಿನ್ನಮಲೈನ ಎರಡನೇ ಸ್ಟ್ರೀಟ್‌ನ ನಿವಾಸಿಯಾಗಿರುವ ಈತ ಸಣ್ಣ ಪುಟ್ಟ ಕೆಲಸ ಮಾಡಿಕೊಂಡಿದ್ದ ಅಲ್ಲದೆ ಈತನ ತಂದೆ ಎಂಟು ವರ್ಷಗಳ ಹಿಂದೆ ನಿಧನರಾದರು, ಮೃತ ವ್ಯಕ್ತಿ ತನ್ನ ತಾಯಿ ಹಾಗೂ ಸಹೋದರನ ಜೊತೆ ಚಿನ್ನಮಲೈನಲ್ಲಿ ವಾಸವಾಗಿದ್ದರು ಎನ್ನಲಾಗಿದೆ.
ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ಕೆಲಸ ಕಡಿಮೆ ಕರಣ ಮೊಬೈಲ್ ನಲ್ಲಿ ಆನ್‌ಲೈನ್ ಆಟಗಳನ್ನು ಆಡಲು ಪ್ರಾರಂಭಿಸಿದ್ದ ಎನ್ನಲಾಗಿದೆ ಇದಾದ ಬಳಿಕ ಈತ ಗೇಮಿಂಗ್ ವ್ಯಸನಿಯಾಗಿಡ್ಡ ಈ ನಡುವೆ ತಾಯಿಗೆ ಕ್ಯಾನ್ಸರ್ ಕಾಡಿತ್ತು ಹಾಗಾಗಿ ತಾಯಿ ಚಿಕಿತ್ಸೆಗೆಂದು ಕಷ್ಟಪಟ್ಟು 30,000 ರೂಪಾಯಿ ಉಳಿಸಿದ್ದರು ಆದರೆ ಮಗ ಆನ್ ಲೈನ್ ಗೇಮ್ ವ್ಯಸನಿಯಾಗಿದ್ದರಿಂದ ಆಟವಾಡಲು ತನ್ನ ಬಳಿ ಹಣವಿಲ್ಲದೆ ಹಣಕ್ಕಾಗಿ ಹುಡುಕಾಟ ನಡೆಸುತ್ತಿದ್ದ ಈ ನಡುವೆ ತಾಯಿ ತನ್ನ ಚಿಕಿತ್ಸೆಗೆ ತೆಗೆದಿಟ್ಟ ಹಣ ಕಣ್ಣಿಗೆ ಬಿದ್ದಿದೆ ಹಿಂದೆ ಮುಂದೆ ನೋಡದೆ ಹಣವನ್ನು ಆಟಕ್ಕೆ ಉಪಯೋಗಿಸಲು ಮುಂದಾಗಿದ್ದಾನೆ.
ಇದಾದ ಬಳಿಕ ತಾಯಿ ಹಣ ಹುಡುಕಿದ ವೇಳೆ ಸಿಗದೇ ಇದ್ದಾಗ ಮಗನನ್ನು ವಿಚಾರಿಸಿದಾಗ ಆತ ತೆಗೆದಿರುವುದಾಗಿ ಹೇಳಿದ್ದಾನೆ ಇದರಿಂದ ಸಿಟ್ಟಿಗೆದ್ದ ತಾಯಿ ಹಾಗೂ ಸಹೋದರ ಮನಸ್ಸಿಗೆ ಬಂದಂತೆ ಬೈದಿದ್ದಾರೆ ಇದರಿಂದ ಕುಪಿತಗೊಂಡ ಮಗ ಮನೆ ಬಿಟ್ಟು ಹೋಗಿದ್ದಾನೆ ಮನೆಯವರು ಅದಕ್ಕೆ ಹೆಚ್ಚು ತಲೆ ಕೆಡಿಸಿಕೊಳ್ಳಲಿಲ್ಲ ಸಂಜೆ ಮನೆಗೆ ಬರುತ್ತಾನೆ ಎಂದುಕೊಂಡಿದ್ದರು ಆದರೆ ರಾತ್ರಿಯಾದರೂ ಮನೆಗೆ ಬರದೇ ಇರುವುದನ್ನು ಕಂಡ ಮನೆಯವರು ಆತನ ಸ್ನೇಹಿತರಿಗೆ ಕರೆ ಮಾಡಿ ವಿಚಾರಿಸಿದ್ದಾರೆ ಆದರೆ ಎಲ್ಲೂ ಪತ್ತೆಯಾಗಿಲ್ಲ, ಮೊಬೈಲ್ ಗೆ ಕರೆ ಮಾಡಿದಾಗ ಸ್ವಿಚ್ ಆಫ್ ಆಗಿತ್ತು, ಬಳಿಕ ಕಾರ್ಯಾಚರಣೆ ನಡೆಸಿದ ಮನೆಮಂದಿ ಬೆಳಿಗ್ಗೆ ಸುಮಾರು ಮೂರೂ ಗಂಟೆಯ ವೇಳೆ ಮನೆಯ ಟೆರೇಸ್ ನಲ್ಲಿ ಪರಿಶೀಲನೆ ನಡೆಸಿದ ವೇಳೆ ಮಗನ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಈ ಕುರಿತು ಪೋಷಕರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಲು ಆಸ್ಪತ್ರೆಗೆ ಸಾಗಿಸಿದ್ದು ತನಿಖೆ ನಡೆಸುತ್ತಿದ್ದಾರೆ.