ಚೆನ್ನೈ : ಹೆಚ್ಚಿನ ಕಂಪೆನಿಗಳಲ್ಲಿ ದೀಪಾವಳಿಗೆ ಬೋನಸ್ ನೀಡುತ್ತಾರೆ ಅದು ಹೆಚ್ಚಾಗಿ ಹಣದ ರೂಪದಲ್ಲೇ ಇರುತ್ತದೆ ಆದರೆ ಚೆನ್ನೈ ನ ಈ ಕಂಪೆನಿಯ ಮಾಲೀಕ ತನ್ನ ಸಿಬ್ಬಂದಿಗಳಿಗೆ ನೀಡಿದ ಗಿಫ್ಟ್ ನೋಡಿ ಹೌಹಾರಿದ್ದಾರೆ.
ಅಂದಹಾಗೆ ಚೆನ್ನೈನ ಆಭರಣ ಅಂಗಡಿಯ ಮಾಲೀಕರಾದ ಜಯಂತಿ ಲಾಲ್ ಚಲ್ಲಾನಿ ಅವರು ತಮ್ಮ ಉದ್ಯೋಗಿಗಳಿಗೆ ದೀಪಾವಳಿ ಉಡುಗೊರೆಯಾಗಿ ಕಾರುಗಳು ಮತ್ತು ಬೈಕ್‌ಗಳನ್ನು ನೀಡಿದ್ದು ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ.
ಜಯಂತಿ ಲಾಲ್ ಅವರು ತನ್ನ ಸಿಬ್ಬಂದಿಗಳಿಗೆ ಬೋನಸ್ ನೀಡಲು ಬರೋಬ್ಬರಿ 1.2 ಕೋಟಿ ಖರ್ಚು ಮಾಡಿದ್ದಾರೆ.
ಚೆನ್ನೈ ಮೂಲದ ಆಭರಣ ಮಳಿಗೆ ಚಲ್ಲಾನಿ ಜ್ಯುವೆಲ್ಲರಿ ಮಾಲೀಕ ದೀಪಾವಳಿ ಉಡುಗೊರೆಯಾಗಿ 10 ಸಿಬ್ಬಂದಿಗೆ ಕಾರುಗಳು ಮತ್ತು 20 ಬೈಕ್‌ಗಳನ್ನು ಉಡುಗೊರೆಯಾಗಿ ನೀಡಿದ್ದಾರೆ.
ಚಲ್ಲಾನಿ ಜ್ಯುವೆಲ್ಲರಿ ಪ್ರಚಾರ ಮತ್ತು ಮಾರುಕಟ್ಟೆ ಸಹಾಯಕ ಪ್ರಧಾನ ವ್ಯವಸ್ಥಾಪಕ ಎಸ್.ಬಾಲಾಜಿ ಮಾತನಾಡಿ, ಜ್ಯುವೆಲ್ಲರಿ ಮಾಲೀಕರು ಸಿಬ್ಬಂದಿಗೆ ಕಾರು ಮತ್ತು ಬೈಕ್‌ಗಳನ್ನು ಉಡುಗೊರೆಯಾಗಿ ನೀಡಿರುವುದು ಇತ್ತೀಚಿನ ದಿನಗಳಲ್ಲಿ ಇದೇ ಮೊದಲು, ಅಲ್ಲದೆ ಕೋವಿಡ್ ಕಾಲಘಟ್ಟದಲ್ಲೂ ತನ್ನ ಸಿಬ್ಬಂದಿಗಳಿಗೆ ಒಳ್ಳೆಯ ರೀತಿಯಲ್ಲಿ ನೋಡಿಕೊಂಡಿದ್ದಾರೆ ಎಂದು ಹೊಗಳಿದ್ದಾರೆ.
ಏನೇ ಆಗಲಿ ಜಯಂತಿ ಲಾಲ್ ಅವರ ಮಾದರಿ ಕಾರ್ಯ ಇತರ ಕಂಪೆನಿ ಮಾಲೀಕರಿಗೂ ಮಾದರಿಯಾಗಿರುವುದು ಸುಳ್ಳಲ್ಲ.
ಇದನ್ನೂ ಓದಿ : ನ್ಯಾಯ ಸಿಗುವವರೆಗೂ ಕಾಶ್ಮೀರದಲ್ಲಿ ಹತ್ಯೆಗಳು ನಿಲ್ಲುವುದಿಲ್ಲ: ಫಾರೂಕ್ ಅಬ್ದುಲ್ಲಾ