ಚೆನ್ನೈ : ಇಲ್ಲಿಗೆ ಸಮೀಪದ ಕಾಲೇಜೊಂದರ ಕ್ಯಾಂಪಸ್ ಕೆಲಸಗಾರನೋರ್ವ ಹಾಸ್ಟೆಲ್ ಲಿಫ್ಟ್ ನಲ್ಲಿ ವಿದ್ಯಾರ್ಥಿನಿಯ ಮುಂದೆ ಹಸ್ತಮೈಥುನ ಮಾಡಿಕೊಂಡ ಘಟನೆಯನ್ನು ಖಂಡಿಸಿ ನಿನ್ನೆ ಗುರುವಾರ ರಾತ್ರಿ ಕಾಲೇಜಿನ ಸಾವಿರ ವಿದ್ಯಾರ್ಥಿನಿಯರು ತೀವ್ರ ಪ್ರತಿಭಟನೆ ನಡೆಸಿದರು.
ವಿದ್ಯಾರ್ಥಿನಿಯು ತೊಟ್ಟುಕೊಂಡಿದ್ದ ಕನಿಷ್ಠ ಉಡುಗೆಯೇ ಈ ಘಟನೆಗೆ ಕಾರಣವೆಂದು ಕಾಲೇಜು ಆಡಳಿತೆ ಹೇಳಿರುವುನ್ನು ಖಂಡಿಸಿ ವಿದ್ಯಾರ್ಥಿನಿಯರು ವಿವಿ ಆಡಳಿತೆಯ ವಿರುದ್ಧವೂ ತಮ್ಮ ಆಕ್ರೋಶ ತೋರ್ಪಡಿಸಿದರು.
ಅಂತಿದ್ದರೂ ವಿದ್ಯಾರ್ಥಿನಿ ಮುಂದೆ ಹಸ್ತಮೈಥುನ ಮಾಡಿಕೊಂಡ 28ರ ಹರೆಯದ ಕ್ಯಾಂಪಸ್ ಕೆಲಸಗಾರನನ್ನು ಪೊಲೀಸರು ಇಂದು ಶುಕ್ರವಾರ ಬಂಧಿಸಿದರು.
Related Articles
ಕಾಂಚೀಪುರಂನ ಎಸ್‌ಆರ್‌ಎಂ ಇನ್‌ಸ್ಟಿಟ್ಯೂಟ್ ಆಫ್ ಸಯನ್ಸ್ ಆ್ಯಂಡ್ ಟೆಕ್ನಾಲಜಿಯ ಎರಡನೇ ವರ್ಷದ ಪದವಿ ತರಗತಿಯ ವಿದ್ಯಾರ್ಥಿನಿಯು ನಿನ್ನೆ ಗುರುವಾರ ಮಧ್ಯಾಹ್ನ 28ರ ಹರೆಯದ ಕ್ಯಾಂಪಸ್ ಕೆಲಸಗಾರ ಎಸ್ ಅರ್ಜುನ್ ಎಂಬಾತನೊಂದಿಗೆ ಹಾಸ್ಟೆಲ್ ಲಿಫ್ಟ್ ಹಂಚಿಕೊಂಡ ಸಂದರ್ಭದಲ್ಲಿ ಹಸ್ತಮೈಥುನದ ಘಟನೆ ನಡೆದಿದೆ.
ವಿದ್ಯಾರ್ಥಿನಿಯೋರ್ವಳು ಹೇಳಿರುವ ಪ್ರಕಾರ “ಹುಡುಗಿಯು ಲಿಫ್ಟ್ ಪ್ರವೇಶಿಸಿ ನಾಲ್ಕನೇ ಮಹಡಿಯ ಬಟನ್ ಒತ್ತಿದ್ದಾಳೆ; ಆಗ ಲಿಫ್ಟ್ ನಲ್ಲಿದ್ದ ಕೆಲಸಗಾರ ಆರನೇ ಮಹಡಿಯ ಬಟನ್ ಒತ್ತಿದ್ದಾನೆ. ಆದರೆ ಕೆಲಸಗಾರನು ಎಲ್ಲಿಯೂ ಲಿಫ್ಟ್ ನಿಲ್ಲಿಸದೆ ಎಂಟನೇ ಮಹಡಿಗೆ ಒಯ್ದಿದ್ದಾನೆ. ಹುಡುಗಿ ಬೊಬ್ಬಿಡುವ ತನಕವೂ ಆತ ಆಕೆಯನ್ನು ಲಿಫ್ಟ್ ನಿಂದ ಹೊರ ಹೋಗಲು ಬಿಡಲಿಲ್ಲ’.
ಘಟನೆಯನ್ನು ಪ್ರತಿಭಟಿಸಿ ಬೃಹತ್ ಸಂಖ್ಯೆಯ ವಿದ್ಯಾರ್ಥಿನಿಯರು ಬ್ಯಾರಿಕೇಡ್‌ಗಳನ್ನು ದೂಡಿ ಕ್ಯಾಂಪಸ್ ಪ್ರವೇಶಿಸಿ ಘೋಷಣೆ ಕೂಗುತ್ತಿರುವ ದೃಶ್ಯಾವಳಿಯ ವಿಡಿಯೋಗಳು ವಿದ್ಯಾರ್ಥಿಗಳ ಮೊಬೈಲ್ ನಲ್ಲಿ ಹರಿದಾಡುತ್ತಿರುವುದು ಕಂಡು ಬಂದಿದೆ.
ವಿದ್ಯಾರ್ಥಿನಿಯರು ಹಾಸ್ಟೆಲ್ ಬ್ಲಾಕ್ ನ ಗೇಟುಗಳನ್ನು ದೂಡಿ ತೆರೆದಿದ್ದಾರೆ. ವಿದ್ಯಾರ್ಥಿನಿಯರು ಹಾಸ್ಟೆಲ್ ಬ್ಲಾಕ್ ನಿಂದ ಹೊರಬರದಂತೆ ಈ ಗೇಟುಗಳಿಗೆ ಬೀಗ ಹಾಕಿ ಭದ್ರಪಡಿಸಲಾಗಿತ್ತು ಎನ್ನಲಾಗಿದೆ.
ಈ ನಡುವೆ ವಿವಿ ವೈಸ್ ಚಾನ್ಸಲರ್ ವಿರುದ್ಧ ವಿದ್ಯಾರ್ಥಿಗಳು ನಿಷ್ಕ್ರಿಯತೆಯ ಆರೋಪ ಮಾಡಿದ್ದಾರೆ. ಆದರೆ ವಿಸಿ ಇದನ್ನು ಅಲ್ಲಗಳೆದಿದ್ದಾರೆ. ಕಾಲೇಜು ಆಡಳಿತೆಯು ವಿದ್ಯಾರ್ಥಿಗಳ ದೂರನ್ನು ಪರಿಶೀಲಿಸುವುದಾಗಿ ಹೇಳಿದ್ದಾರೆ.