Advertisement

100 ಸಿಬ್ಬಂದಿಗೆ ಕಾರು ಗಿಫ್ಟ್ ಕೊಟ್ಟ ಸಂಸ್ಥೆ

06:50 PM Apr 12, 2022 | Team Udayavani |

ಚೆನ್ನೈ: ಯಾವುದಾದರೂ ಕಂಪನಿ ನಿರೀಕ್ಷೆಗೂ ಮೀರಿ ಲಾಭ ಗಳಿಸಿದರೆ, ಸಿಬ್ಬಂದಿಗೆ ಪಾರ್ಟಿಯೋ ಅಥವಾ ಸಣ್ಣ ಪುಟ್ಟ ಉಡುಗೊರೆ ಕೊಡುವುದನ್ನು ಕೇಳಿರುತ್ತೀರಿ. ಆದರೆ ತಮಿಳುನಾಡಿನ ಚೆನ್ನೈನ ಐಡಿಯಾಸ್‌2ಐಟಿ (Ideas2IT) ಹೆಸರಿನ ಸಂಸ್ಥೆ ತನ್ನ ಲಾಭವನ್ನು ಸಿಬ್ಬಂದಿಯೊಂದಿಗೆ ಬೇರೆ ರೀತಿಯಲ್ಲೇ ಹಂಚಿಕೊಂಡಿದೆ.

Advertisement

ಸಂಸ್ಥೆಯ ಅಭಿವೃದ್ಧಿಗಾಗಿ 10 ವರ್ಷಕ್ಕೂ ಹೆಚ್ಚು ಕಾಲ ದುಡಿದ 100 ಸಿಬ್ಬಂದಿಗೆ 100 ಮಾರುತಿ ಸುಜುಕಿ ಕಾರುಗಳನ್ನು ಉಡುಗೊರೆಯಾಗಿ ಕೊಟ್ಟಿದೆ.

ಇದನ್ನೂ ಓದಿ:ಗೋವಾ: ಸರ್ಕಾರದ ಸಮಾಜ ಕಲ್ಯಾಣ ಯೋಜನೆಗಳನ್ನು ನಿಲ್ಲಿಸಿಲ್ಲ: ಸಿಎಂ ಸಾವಂತ್ ಸ್ಪಷ್ಟನೆ

“ನಾವು ಲಾಭವನ್ನು ಸಿಬ್ಬಂದಿಯೊಂದಿಗೆ ಹಂಚಿಕೊಳ್ಳುವುದಾಗಿ ಏಳೆಂಟು ವರ್ಷದ ಹಿಂದೆಯೇ ಮಾತು ಕೊಟ್ಟಿದ್ದೆವು. ಅದರ ಮೊದಲ ಹೆಜ್ಜೆಯಾಗಿ ಈಗ ಕಾರು ಕೊಟ್ಟಿದ್ದೇವೆ. ಇದು ಉಡುಗೊರೆಯಲ್ಲ, ಅವರ ದುಡಿಮೆಗೆ ಸಿಕ್ಕ ಪ್ರತಿಫ‌ಲ’ ಎಂದು ಹೇಳಿದ್ದಾರೆ ಸಂಸ್ಥೆಯ ಸಂಸ್ಥಾಪಕ ಮುರಳಿ ವಿವೇಕಾನಂದನ್‌.

Advertisement

Udayavani is now on Telegram. Click here to join our channel and stay updated with the latest news.

Next