ಚೆನ್ನೈ: ಮಲಯಾಳಂ ಚಿತ್ರರಂಗದಲ್ಲಿ ನಟ ಮತ್ತು ನಿರ್ದೇಶಕನಾಗಿ ತೊಡಗಿಸಿಕೊಂಡಿರುವ ನಟ ಪ್ರತಾಪ್ ಪೋಥೆನ್ (69) ಚೆನ್ನೈ ಅಪಾರ್ಟ್‌ಮೆಂಟ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಎಂದಿನಂತೆ ಮನೆ ಕೆಲಸ ಮಾಡಲು ಕೆಲಸದವರು ಬಂದಾಗ ಘಟನೆ ಬೆಳಕಿಗೆ ಬಂದಿದ್ದು, ಪ್ರತಾಪ್ ಪೋಥೆನ್ ಮೃತ ದೇಹ ಬೆಡ್‌ರೂಮ್‌ನಲ್ಲಿ ಪತ್ತೆಯಾಗಿದೆ.
100ಕ್ಕೂ ಹೆಚ್ಚು ಮಲಯಾಳಂ, ಹಿಂದಿ, ತೆಲುಗು ಮತ್ತು ತಮಿಳು ಸಿನಿಮಾಗಳಲ್ಲಿ ಪ್ರತಾಪ್ ಪೋಥೆನ್ ಅಭಿನಯಿಸಿದ್ದು, ಸುಮಾರು 12 ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ.
ಇದನ್ನೂ ಓದಿ: ದೆಹಲಿ: ಬೃಹತ್ ಗೋದಾಮಿನ ಗೋಡೆ ಕುಸಿದು ಬಿದ್ದು 5 ಸಾವು, 9 ಜನರಿಗೆ ಗಾಯ: ಆಸ್ಪತ್ರೆಗೆ ದಾಖಲು
1952 ಆಗಸ್ಟ್ 13ರಂದು ಪ್ರತಾಪ್ ಜನನವಾಯಿತು. ಮದ್ರಾಸ್‌ನಲ್ಲಿ ಪ್ರತಾಪ್ ಶಿಕ್ಷಣ ಪಡೆದರು. ಸಿನಿಮಾದಲ್ಲಿ ನಟಿಸುವ ಮುನ್ನ ಪ್ರತಾಪ್ ಅವರು ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು. 1979ರಲ್ಲಿ ಆರವ್ ಸಿನಿಮಾ ಮೂಲಕ ಪ್ರತಾಪ್ ಪೋಥೆನ್ ಚಿತ್ರರಂಗಕ್ಕೆ ಕಾಲಿಟ್ಟರು. 1980ರಲ್ಲಿ ಲೋರಿ ಮತ್ತು ಚಮರಮ್ ಸಿನಿಮಾದಲ್ಲಿ ಪ್ರತಾಪ್ ಹೆಚ್ಚಿನ ಗಮನ ಸೆಳೆದ್ದರು. ತಮಿಳು, ತೆಲುಗು, ಮಲಯಾಳಂ, ಹಿಂದಿ ಸೇರಿದಂತೆ ನೂರಕ್ಕೂ ಅಧಿಕ ಚಿತ್ರಗಳಲ್ಲಿ ಪ್ರತಾಪ್ ಬಣ್ಣ ಹಚ್ಚಿದ್ದಾರೆ.