Advertisement

ಯೋಜನೆಗಳ ಸದುಪಯೋಗವಾಗಲಿ

11:57 AM May 02, 2019 | Naveen |

ಚನ್ನಗಿರಿ: ಕಾರ್ಮಿಕ ವರ್ಗದ ಹಿತಾಸಕ್ತಿ ಕಾಪಾಡುವುದಕ್ಕಾಗಿ ಕಾರ್ಮಿಕರ ದಿನವನ್ನು ವಿಶ್ವಾದ್ಯಂತ ಆಚರಿಸಲಾಗುತ್ತದೆ. ಈ ದಿನವನ್ನು ಸಂಭ್ರಮ ಸಡಗರದಿಂದ ಆಚರಿಸಲು ಕಾರ್ಮಿಕ ಇಲಾಖೆ ಮುಂದಾಗಬೇಕು ಎಂದು ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ ಹೇಳಿದರು.

Advertisement

ತಾಲೂಕಿನ ನಲ್ಲೂರಿನಲ್ಲಿ ಬುಧವಾರ ಡಾ| ಅಬ್ದುಲ್ ಕಲಾಂ ದ್ವಿಚಕ್ರವಾಹನ ದುರಸ್ತಿದಾರರ ಸಂಘ ಹಮ್ಮಿಕೊಂಡಿದ್ದ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಾರ್ಮಿಕ ವರ್ಗಗಳ ಶ್ರಯೋಭಿವೃದ್ಧಿಗೆ ಸರ್ಕಾರಗಳಲ್ಲಿ ಸಾಕಷ್ಟು ಯೋಜನೆಗಳಿವೆ. ಅವುಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಮುಂದಾಗಬೇಕು. ಗ್ರಾಮೀಣ ಮಟ್ಟದಿಂದ ನಗರ ಮಟ್ಟದಲ್ಲಿ ಅನಕ್ಷರಸ್ಥ ಕಾರ್ಮಿಕರಿದ್ದಾರೆ. ಅವರಿಗೆ ಸರ್ಕಾರದ ಸವಲತ್ತಿನ ಬಗ್ಗೆ ಅರಿವು ಮೂಡಿಸಬೇಕು. ಸರ್ಕಾರದಲ್ಲಿನ ಯೋಜನೆಗಳನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರು ಮುನ್ನಡೆಯಬೇಕು ಎಂದು ಸಲಹೆ ನೀಡಿದರು.

ಯಾವುದೇ ಸರ್ಕಾರವಿರಲಿ. ನಿಮ್ಮ ಅಭಿವೃದ್ಧಿಗಾಗಿ ಯೋಜನೆಗಳನ್ನು ಜಾರಿಗೆ ತರುತ್ತವೆ. ಆದರೆ ಅವುಗಳು ಸದುಪಯೋಗವಾಗದೇ ಹಾಗೆಯೇ ಉಳಿಯುತ್ತವೆ. ಅಂತಹ ಯಾವುದೇ ಯೋಜನೆಗಳು ಸರಿಯಾಗಿ ಬಳಕೆಯಾಗಿಲ್ಲ ಎಂದು ನಮ್ಮ ಗಮನಕ್ಕೆ ತಂದರೆ ಸೂಕ್ತ ಕ್ರಮವಹಿಸಿ ಅರ್ಹ ಫಲಾನುಭವಿಗಳಿಗೆ ತಲುಪಿಸಲು ಶ್ರಮಿಸಲಾಗುವುದು ಎಂದು ತಿಳಿಸಿದರು.

ಕಾಲ ಬದಲಾದಂತೆ ಪರಿಸ್ಥಿತಿಗಳು ಬದಲಾಗಿವೆ. ಶ್ರಮಿಕ ವರ್ಗ ಆಚರಿಸಬೇಕಾಗಿದ್ದ ಈ ದಿನ ಕೇವಲ ಕಚೇರಿ ಕೆಲಸಗಾರರಿಗೆ ಸೀಮಿತವಾಗಿದೆ. ಯಾರು ದಿನಪೂರ್ತಿ ಬಿಸಿಲಿನಲ್ಲಿ ಒಣಗುತ್ತಾರೋ, ಯಾರು ಬೆವರು ಸುರಿಸಿ, ದೈಹಿಕ ಶ್ರಮದೊಂದಿಗಿನ ಬದುಕನ್ನು ನೆಚ್ಚಿಕೊಂಡಿದ್ದಾರೋ ಅವರು ದಿನದ 365 ದಿನವೂ ದುಡಿದು ಜೀವನ ನಡೆಸಬೇಕಾದ ಸ್ಥಿತಿಯಿದೆ ಎಂದರು.

Advertisement

ಜಿಪಂ ಸದಸ್ಯ ಲೋಕೇಶ್ವರ, ತಾಪಂ ಮಾಜಿ ಸದಸ್ಯ ಉಸ್ಮಾನ್‌ ಷರೀಫ್‌, ಕಾರ್ಮಿಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next