Advertisement

ಸಾಹಿತ್ಯಕ್ಕೂ ಬೇಕಿದೆ ಆಧುನಿಕ ರೂಪ

03:03 PM Aug 25, 2019 | Team Udayavani |

ಚನ್ನಗಿರಿ: ಆಧುನಿಕ ಭರಾಟೆಯಲ್ಲಿ ಎಲ್ಲವೂ ಕೂಡ ಮಾಡರ್ನ್ ಆದಂತೆ ಸಾಹಿತ್ಯ ಕ್ಷೇತ್ರವು ಆಧುನಿಕ ರೂಪ ಪಡೆದುಕೊಳ್ಳಬೇಕಿದೆ ಎಂದು ಸಾಹಿತಿ ಪೈಜ್ನಟ್ರಜ್‌ ಅಭಿಪ್ರಾಯಪಟ್ಟರು.

Advertisement

ತಾಲೂಕಿನ ಸಂತೆಬೆನ್ನೂರಿನ ಸರ್ಕಾರಿ ಪ್ರಾಥಮಿಕ ಪಾಠಶಾಲೆಯಲ್ಲಿ ಏರ್ಪಡಿಸಿದ್ದ ಮಾಸದ ಮಾತು ಕಾರ್ಯಕ್ರಮದಲ್ಲಿ ಭಾರತಾಂಬೆ ಫೋಟೋಗೆ ಪುಷ್ಪನಮನ ಸಲ್ಲಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಾಹಿತ್ಯದಲ್ಲಿ ದೇಶದಲ್ಲಿನ ಅವಿಸ್ಮರಣೀಯ ಘಟನೆಗಳು, ಸಂದೇಶಗಳು, ನಾಡು, ನುಡಿ, ಐತಿಹಾಸಿಕತೆ, ಧಾರ್ಮಿಕತೆ, ಪರಂಪರೆ, ಇತಿಹಾಸ ಸೇರಿದಂತೆ ಹಲವಾರು ಅಂಶಗಳನ್ನು ತಿಳಿದುಕೊಳ್ಳುವ ಶಕ್ತಿ ಸಾಹಿತ್ಯಕ್ಕಿದೆ. ಆದರೆ ಇಂದು ಸಾಹಿತ್ಯವನ್ನು ಎಷ್ಟು ಜನ ಅಭ್ಯಸುತ್ತಿದ್ದಾರೆ ಎಂದರೆ ನಿಜಕ್ಕೂ ಬೇಸರವನ್ನುಂಟು ಮಾಡುತ್ತದೆ ಎಂದರು.

ಸಾಹಿತ್ಯವನ್ನು ಅವಲೋಕಿಸುವ ಶಕ್ತಿ ಕುಂದುತ್ತಿದೆ. ಸಾಹಿತ್ಯಕ್ಕೆ ಜೀವ ನೀಡಬೇಕಾದ ಯುವ ಸಮೂಹವು ಬೇರೆ ದಿಕ್ಕಿನಡೆ ಸಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಸಾಹಿತ್ಯವನ್ನು ಪ್ರತಿಯೊಬ್ಬರಿಗೂ ಪ್ರೇರಣೆ ಆಗುವ ನಿಟ್ಟಿನಲ್ಲಿ ಹಾಗೂ ಯುವಕರನ್ನು ಸಾಹಿತ್ಯ ದಿಕ್ಕಿನಡೆಗೆ ತರಲು ಸಾಹಿತ್ಯಾತ್ಮಕ ಕಾರ್ಯಕ್ರಮಗಳು ಹೆಚ್ಚು ನಡೆಯಬೇಕಿದೆ ಎಂದರು. ರಾಮಾಯಣ, ಮಹಾಭಾರತ, ಭಗವದ್‌ಗೀತೆ, ನಂತರದಲ್ಲಿ ನಾವುಗಳು ರಾಷ್ಟ್ರೀಯ ನಾಲ್ಕನೇ ಗ್ರಂಥವನ್ನು ದಾಂಪತ್ಯ ಎನ್ನಬಹುದು. ದಂಪತಿ ಒಟ್ಟುಗೂಡಿ ನಡೆಸುವ ಸಾರಥ್ಯವೇ ದಾಂಪತ್ಯ. ಧರ್ಮೆಚಾ ಅಂದರೆ ಧರ್ಮಬಿಟ್ಟು ಹೋಗುವುದಿಲ್ಲ, ಆರ್ಥೆಚಾ ಎಂದರೆ ಸಂಪತ್ತಿಗೆ ಆಸೆ ಪಡುವುದಿಲ್ಲ, ಕಾಮೆಚಾ ಎಂದರೆ ಅನ್ಯರಲ್ಲಿ ಕಾಮಕ್ಕೆ ಆಸಕ್ತರಾಗುವುದಿಲ್ಲ. ನಾತೆಚಾರಮಿ ಎಂದರೆ ಸುಖ-ದುಃಖದಲ್ಲ್ಲಿ ಸದಾಕಾಲ ಇರುವೆ ಎನ್ನುವ ನಾಲ್ಕು ಅಂಶಗಳಿಂದ ಹಸೆಮಣೆ ಏರಿ ಮದುವೆ ಬಂಧನವಾಗುತ್ತೇವೆ. ಆದರೆ ಪ್ರಸ್ತುತ ದಾಂಪತ್ಯ ಎಂಬುದು ಪತಿ-ಪತ್ನಿ ನಡುವೆಯಲ್ಲಿ ಕೆಲ ಬಂಧನಗಳೊಂದಿಗೆ ಜೀವನ ಸಾಗಿಸುವ ಪ್ರವೃತ್ತಿಯಾಗಿದೆ. ಇದೊಂದು ದುರಂತದ ಸಂಗತಿ ಎಂದರು.

ದಾಂಪತ್ಯದಲ್ಲಿ ಪ್ರೀತಿಸುವ ಮನೋಭಾವ ಇದ್ದರೆ ಮಾತ್ರ ಜೀವನ ಯಶಸ್ವಿ ಆಗಲಿದೆ. ಕಷ್ಟು ಸುಖಗಳಲ್ಲಿ ಭಾಗಿಯಾಗುವ ಶಕ್ತಿ ಅವರಿಬ್ಬರಿಗೂ ಇರಬೇಕು. ಆಗ ಮಾತ್ರ ನೈತಿಕ ದಾಂಪತ್ಯ ಜೀವನಕ್ಕೆ ಪರಿಪೂರ್ಣ ಆಗಲಿದೆ ಎಂದರು.

ಕನ್ನಡ ಸಾಹಿತ್ಯ ಪರಿಷತ್‌ ಮಾಜಿ ಅಧ್ಯಕ್ಷ ಕೆ.ಸಿದ್ದಲಿಂಗಪ್ಪ, ಎಂ. ಸಿದ್ದಪ್ಪ, ಶಿಕ್ಷಕಿ ಮಮತ ವೀರಯ್ಯ, ವಕೀಲೆ ಸಿ.ಪಿ. ಅನಿತಾ ಚಂದ್ರಶೇಖರ್‌, ಹೊನ್ನಪ್ಪ ಗೌಡರ್‌, ಸಮಾಜ ಸೇವಕ ಸಿದ್ದಿಕ್‌ ಅಹ್ಮದ್‌ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next