Advertisement

ಮಾದರಿ ತಾಲೂಕು ಮಾಡುವ ಗುರಿ

07:43 PM Feb 15, 2020 | Naveen |

ಚನ್ನಗಿರಿ: ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಯಿಂದ ದೇಶದ ಪ್ರಗತಿ ಎನ್ನುವ ಚಿಂತನೆಯೊಂದಿಗೆ ಕ್ಷೇತ್ರಕ್ಕೆ ಕೋಟಿಗಟ್ಟಲೆ ಅನುದಾನ ತಂದು ಅಭಿವೃದ್ಧಿ ಕೈಗೊಳ್ಳಲಾಗುತ್ತಿದೆ. ಈ ಕಾರ್ಯಕ್ಕೆ ಪ್ರತಿಯೊಬ್ಬರ ಸಹಕಾರ ಬೇಕಿದೆ ಎಂದು ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ ಹೇಳಿದರು.

Advertisement

ತಾಲೂಕಿನ ಇಟ್ಟಿಗೆ ಗ್ರಾಮದಲ್ಲಿ 2.20 ಕೋಟಿ ವೆಚ್ಚದಲ್ಲಿ ಕಾಂಕ್ರೀಟ್‌ ರಸ್ತೆ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಅವರು ಮಾತನಾಡಿದರು. ಚನ್ನಗಿರಿಯನ್ನು ರಾಜ್ಯದಲ್ಲಿಯೇ ಮಾದರಿ ತಾಲೂಕಾಗಿಸುವ ಗುರಿ ಇದ್ದು, ಹಲವಾರು ಅಭಿವೃದ್ಧಿ ಚಿಂತನೆಗಳಿವೆ. ಅವುಗಳ ಸಾಕಾರಕ್ಕೆ ಕ್ಷೇತ್ರದಲ್ಲಿ ಪ್ರತಿಯೊಬ್ಬರು ಪಕ್ಷಭೇದ ಮರೆತು ಕೈಜೋಡಿಸಿದರೆ ಇಡಿ ರಾಜ್ಯವೇ ನಮ್ಮ ತಾಲೂಕಿನತ್ತ ತಿರುಗಿ ನೋಡುವಂತಹ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮೂಲಭೂತ ಸೌಕರ್ಯವಿಲ್ಲದಂತಹ ಯಾವುದೇ ಹಳ್ಳಿಗಳು ಕಂಡುಬಂದರೆ ಆ ಕುರಿತು ಮಾಹಿತಿ ಒದಗಿಸಬೇಕು. ಈಗಾಗಲೇ ಕುಡಿಯುವ ನೀರು, ರಸ್ತೆ, ಚರಂಡಿಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು ಈ ಸೌಕರ್ಯಗಳಿದ ಹಳ್ಳಿ ತಿಳಿಸಿದರೆ ಅಭಿವೃದ್ಧಿಪಡಿಸಲಾಗುವುದು. ಶಾಸಕರು ಎನ್ನುವ ಹಿಂಜರಿಕೆ ಯಾರಿಗೂ ಬೇಡ. ಯಾರೇ ಬಂದರು ಸ್ಪಂದಿಸಲಾಗುವುದು. ಯಾವುದೇ ಕೆಲಸವಾಗಬೇಕಿದ್ದರೂ ನನ್ನನ್ನು ಸಂಪರ್ಕಿಸಿ ಎಂದು ಜನತೆಗೆ ತಿಳಿಸಿದರು.

ತಾಪಂ ಅಧ್ಯಕ್ಷೆ ಉಷಾ ಶಶಿಕುಮಾರ್‌ ಮಾತನಾಡಿ, ಕೇಂದ್ರ-ರಾಜ್ಯ ಸರ್ಕಾರದಿಂದ ಸಾಕಷ್ಟು ಅನುದಾನ ತಂದು ಕ್ಷೇತ್ರದ ಅಭಿವೃದ್ಧಿಗೆ ಶಾಸಕರು ಸಾಕಷ್ಟು ಶ್ರಮವಹಿಸುತ್ತಿದ್ದಾರೆ. ಅವರಿಗೆ ನಾವೆಲ್ಲರೂ ಶಕ್ತಿ ತುಂಬುವ ಕೆಲಸ ಮಾಡಿದರೆ ಯಾವುದೇ ಗ್ರಾಮದಲ್ಲಿ ಸಮಸ್ಯೆಗಳಿವೆ ಎನ್ನುವ ಮಾತುಗಳೇ ಕೇಳಿ ಬರುವುದಿಲ್ಲ. ಆದ್ದರಿಂದ ಪ್ರತಿಯೊಬ್ಬರು ಕೈಜೋಡಿಸಬೇಕು ಎಂದು ಮನವಿ ಮಾಡಿದರು. ಬಿಜೆಪಿ ಮುಖಂಡ ಇಟ್ಟಿಗೆ ಹೇಮಂತ್‌, ಮಂಟರಘಟ್ಟ ಬಸವರಾಜ್‌, ಗ್ರಾಪಂ ಅಧ್ಯಕ್ಷೆ ರೇಣುಕ ಬಸವರಾಜ್‌, ಗ್ರಾಮಸ್ಥರು ಮತ್ತು ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next