Advertisement
ರಾಣಿ ಚೆನ್ನಭೈರಾದೇವಿ ಹೊನ್ನಾವರ ತಾಲೂಕಿನ ಗೇರುಸೊಪ್ಪೆಯವಳು, ಜಿಲ್ಲೆಯವಳು ಎಂಬುದು ಹೆಮ್ಮೆಯ ಸಂಗತಿ. ಅವಳ ಚರಿತ್ರೆಗೆ ಕಳಂಕ ಬಳಿದ ಇತಿಹಾಸಕಾರರ ದಾಖಲೆಗಳನ್ನು ಅಳಿಸಿ ಅವಳ ಅಕಳಂಕ ಚರಿತ್ರೆ ಸಾರುವ ಈ ಕಾದಂಬರಿಯಿಂದ ಚೆನ್ನಭೈರಾದೇವಿ ಕುರಿತು ದೇಶ ಹೆಮ್ಮೆಪಡಬೇಕು. ಅಂತಹ ಐತಿಹಾಸಿಕ ಕೃತಿ ಕೊಟ್ಟ ಡಾ| ಗಜಾನನ ಶರ್ಮರು ಅಭಿನಂದನಾರ್ಹರು.
Related Articles
Advertisement
ಈ ಕೃತಿಯ ಬೆನ್ನುಡಿಯಲ್ಲಿ ಹೆಸರಾಂತ ಲೇಖಕ ಜೋಗಿ ಹೀಗೆ ಬರೆದಿದ್ದಾರೆ. ಸಂಕಷ್ಟದಲ್ಲಿರುವವರಿಗೆ ದೂರದಲ್ಲಿದ್ದು ಕಾಪಾಡುವ ಅವ್ವರಸಿ, ಹತ್ತಿರದಿಂದ ಕಂಡವರಿಗೆ ಸಣ್ಣಮ್ಮ, ಶತ್ರುಗಳ ಪಾಲಿಗೆ ಎದೆನಡುಗಿಸುವ ಚೆನ್ನಭೈರಾದೇವಿ, ಬಂಧುಮಿತ್ರರಿಗೆ ಎಂದೂ ಎಚ್ಚರ ತಪ್ಪದ ನಿರ್ದಾಕ್ಷಿಣ್ಯ ಹೆಣ್ಣು, ಪೋರ್ಚುಗೀಸರ ಪಾಲಿಗೆ ರೈನಾದ ಪಿಮೆಂಟಾ (ಕಾಳು ಮೆಣಸಿನ ರಾಣಿ).
ದಕ್ಷಿಣ, ಕೊಂಕಣ ಹಾಗೂ ಮಲೆನಾಡನ್ನು 54 ವರ್ಷ ಆಳಿದ ಚೆನ್ನಭೈರಾದೇವಿ ಕಥೆಯನ್ನು ವಸ್ತುನಿಷ್ಠವಾಗಿ ಹೇಳಿರುವ ಗಜಾನನ ಶರ್ಮರು ಇದರಲ್ಲಿ ನೂರು ವರ್ಷದ ಶರಾವತಿ ದಂಡೆ ಚರಿತ್ರೆಯನ್ನೂ ವಿವರಿಸಿದ್ದಾರೆ. ಜೈನಧರ್ಮೀಯರ ಸಾಹಸ, ತ್ಯಾಗ ಎಲ್ಲವೂ ಇದೆ. ಪ್ರೇಮ, ಸಾಹಸ,ಸಹೃದಯತೆ, ತ್ಯಾಗಗಳ ಪ್ರತಿರೂಪದಂತಿದ್ದ ರಾಣಿಚೆನ್ನಭೈರಾದೇವಿ ಕಥೆಯಲ್ಲಿ ಇಂದಿನ ಸಾಮಾಜಿಕ ಜೀವನದಲ್ಲಿ ಕಾಣುವ ದೇಶದ್ರೋಹ, ವ್ಯಕ್ತಿದ್ವೇಷ, ಅತಿಕಾಮ, ಸ್ವಾರ್ಥಕ್ಕಾಗಿ ದೇಶವನ್ನು ಬಲಿಕೊಡುವ ಪ್ರವೃತ್ತಿ ಎಲ್ಲದರ ಛಾಯೆಯನ್ನು ಕಾಣಬಹುದು. ಯುದ್ಧ ಕೊನೆಗೂ ದುರಂತದತ್ತ ಕೊಂಡೊಯ್ಯುತ್ತದೆ ಎಂಬುದನ್ನು ವಿವರಿಸಿದ ಶರ್ಮರ ಲೇಖನಿಗೆ ನಮೋ ಎನ್ನಬೇಕು.
ಚೆನ್ನಭೈರಾದೇವಿ ಕುರಿತು ನಾಡು ಅಭಿಮಾನ ಪಡಬೇಕಾಗಿದೆ. ಮುಂದಿನ ಪೀಳಿಗೆಯಲ್ಲಿ ಚೆನ್ನಭೈರಾದೇವಿಯ ಸಾಹಸ, ನಿಷ್ಠೆ,ಪ್ರಾಮಾಣಿಕತೆಗಳು ಮೈಗೂಡಬೇಕಾಗಿದೆ. ಈ ನೆಲದ ಹೆಣ್ಣು ಮಗಳೊಬ್ಬಳು ದೇಶಾಭಿಮಾನ ಮೆರೆದ ಘಟನಾವಳಿಗಳು ಸದಾ ಜನರ ನೆನಪಿನಲ್ಲಿಉಳಿಯಬೇಕು. ಅಂತಹ ಕೆಲಸವೊಂದುಆಗಲೇಬೇಕು ಎನ್ನುತ್ತಾರೆ ಜಿಲ್ಲೆಯ ಹಿರಿಯ ಉದ್ಯಮಿ, ಹೊನ್ನಾವರ ಮೂಲದ ಚಿಂತಕ ಮುರಳೀಧರ ಪ್ರಭು, ಕುಮಟಾ.ಅದಕ್ಕಾಗಿ ರಾಣಿಯ ಕರ್ಮಭೂಮಿ ಗೇರುಸೊಪ್ಪಾ ನಗರಬಸ್ತಿಕೇರಿಯಲ್ಲಿ ಒಂದು ದಿನದ ವಿಚಾರ ಸಂಕಿರಣ ನಡೆಸಬೇಕು. ಇತಿಹಾಸಕಾರರು, ಚಿಂತಕರು ಮತ್ತು ಆಳುವ ಪ್ರಭುಗಳು ಪಾಲ್ಗೊಳ್ಳುವಂತಾಗಬೇಕು. ವಿವಿಧ ಮಾಧ್ಯಮಗಳಲ್ಲಿರಾಣಿಯ ಹಿರಿಮೆ, ಜಾಣ್ಮೆ, ದೇಶಭಕ್ತಿ ಪ್ರಕಟವಾಗಬೇಕು ಎನ್ನುತ್ತಾರೆ. ಇದಕ್ಕೆ ಗಜಾನನ ಶರ್ಮ ಕೂಡ ಸಂತೋಷದಿಂದ ಒಪ್ಪಿದ್ದಾರೆ. ನಿಮ್ಮ ವಿಚಾರಗಳಿದ್ದರೆ ತಿಳಿಸಿ.
-ಜೀಯು, ಹೊನ್ನಾವರ