Advertisement

ಸರಕಾರಿ ನೌಕರ ಆತ್ಮಹತ್ಯೆ ಪ್ರಕರಣ: ಉನ್ನತ ಮಟ್ಟದ ತನಿಖೆ ನಡೆಸಲಿ… ಶಾಸಕ ಚನ್ನಬಸಪ್ಪ

02:58 PM May 27, 2024 | Team Udayavani |

ಶಿವಮೊಗ್ಗ: ತನ್ನ ನಿವಾಸದಲ್ಲೇ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾದ ವಾಲ್ಮೀಕಿ ನಿಗಮದ ಅಧೀಕ್ಷರಾಗಿ ಕೆಲಸ ಮಾಡುತ್ತಿದ್ದ ಚಂದ್ರಶೇಖರ ಅವರ ಆತ್ಮಹತ್ಯೆ ಕುರಿತು ಶಾಸಕ ಚನ್ನಬಸಪ್ಪ ಪ್ರತಿಕ್ರಿಯೆ ನೀಡಿದ್ದಾರೆ.

Advertisement

ಚಂದ್ರಶೇಖರ ಅವರು ಬರೆದಿದ್ದರೆನ್ನಲಾದ ಡೆತ್ ನೋಟ್ ನಲ್ಲಿ ಮೂವರ ಹೆಸರು ಉಲ್ಲೇಖಿಸಿದ್ದು ಪೊಲೀಸರು ಕೂಡಲೇ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುವಂತೆ ಆಗ್ರಹಿಸಿದ್ದಾರೆ. ಅಲ್ಲದೆ ಪ್ರಕರಣಕ್ಕೆ ಸಂಬಂಧಿಸಿ ಇಲಾಖೆಯ ಮಂತ್ರಿ ಮಹದೇವಪ್ಪ ಅವರನ್ನು ತತಕ್ಷಣ ಸಚಿವ ಸಂಪುಟದಿಂದ ಕೈ ಬಿಡಬೇಕು ಎಂದು ಆಗ್ರಹಿಸಿದರು ಅಲ್ಲದೆ ಚಂದ್ರಶೇಖರ್ ಅವರು ಮೂವರು ಶಿಕಾರಿಗಳ ಹೆಸರನ್ನೂ ಉಲ್ಲೇಖ ಮಾಡಿದ್ದಾರೆ, ಇಲಾಖೆಯಲ್ಲಿ ನಡೆದಿರುವ ಹಗರಣದ ಕುರಿತು ಕೂಲಂಕುಷವಾಗಿ ತನಿಖೆ ನಡೆಸಬೇಕು ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

187 ಕೋಟಿ ಹಣಕ್ಕೆ ಸಂಬಂಧಿಸಿದ ಹಣದ ಅವ್ಯವಹಾರವನ್ನು ತನಿಖೆಗೆ ಒಳಪಡಿಸಬೇಕು, ಎಸ್ಟಿ ಸಮುದಾಯಕ್ಕೆ ಅನುಕೂಲ ಆಗಲು ಈ ನಿಗಮ‌ ಸ್ಥಾಪಿಸಲಾಗಿದೆ, ಹಣ ವರ್ಗಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ, 85 ಕೋಟಿ ಅವ್ಯವಹಾರ ಆಗಿದೆ ಅಂತ ಆರೋಪ ಮಾಡಿದ್ದಾನೆ, ಹಣ ವರ್ಗಾವಣೆಯ ದಿನಾಂಕವನ್ನು ಸಹ ಡೆತ್ ನೋಟ್ ನಲ್ಲಿ ನಮೂದಿಸಲಾಗಿದೆ. ಸರ್ಕಾರ ಅಧಿಕಾರಿಗಳ ಮೇಲೆ ಒತ್ತಡ ತರುವ ಮೂಲಕ ಅಧಿಕಾರಿಗಳ ಸಾವಿಗೆ ಕಾರಣವಾಗುತ್ತಿದೆ, ಈ ಬಗ್ಗೆ ರಾಜ್ಯಪಾಲರಿಗೂ ಪತ್ರ ಬರೆಯುತ್ತೇವೆ, ಸರ್ಕಾರಿ ಅಧಿಕಾರಿಗಳ ಮರಣ ಶಾಸನವನ್ನು ಈ ಸರ್ಕಾರ ಬರೆಯುತ್ತಿದೆ ಎಂದು ಕಿಡಿಕಾರಿದರು.

ಇದನ್ನೂ ಓದಿ: Accident: ಬೈಕ್-ಕ್ಯಾಂಟರ್ ಮುಖಾಮುಖಿ ಢಿಕ್ಕಿ: ಸವಾರ ಸ್ಥಳದಲ್ಲೇ ಸಾವು, ಯುವತಿಯ ನಾಲಿಗೆ ಕಟ್

Advertisement

Udayavani is now on Telegram. Click here to join our channel and stay updated with the latest news.

Next