Advertisement
ಜಲಕ್ಷಾಮ ಪರಿಹರಿಸಲು ಆರಂಭಿಸಲಾದ ಯೋಜನೆಗಳೆಲ್ಲ ಈಗ ವ್ಯರ್ಥಗೊಂಡಿವೆ. ಇದರಿಂದಾಗಿ ಅನ್ಯ ದಾರಿ ಕಾಣದ ಜೈಲು ಅಧಿಕಾರಿಗಳು ರೇಶನ್ ಸಂಪ್ರದಾಯದಲ್ಲಿ ಕೆೈದಿಗಳಿಗೆ ನೀರು ಪೂರೈಸುವ ಬಗ್ಗೆ ಚಿಂತನೆ ನಡೆಸಿದ್ದಾರೆ.
ಕಳೆದ ವರ್ಷ ಜೈಲು ಆವರಣದೊಳಗೆ ದೊಡ್ಡ ಕೆರೆ ನಿರ್ಮಿಸಲಾಗಿತ್ತು. ಅದರಲ್ಲಿ ಈಗ ನೀರು ಬರಿದಾಗಿದೆ. ಕೈದಿಗಳಿಗೆ ಅಗತ್ಯದ ನೀರು ಪೂರೈಸಲು ಈಗ ಕಾಕಡವು ಹೊಳೆಯಿಂದ ಲಾರಿಗಳಲ್ಲಿ ನೀರು ತರಲಾಗುತ್ತಿದೆ. ಈಗ ಕಾಕಡವು ಹೊಳೆಯಲ್ಲಿ ನೀರು ಬರಿದಾಗತೊಡಗಿದೆ. ಇದರಿಂದಾಗಿ ಕೈದಿಗಳಿಗೆ ಮುಂದಿನ ದಿನಗಳಲ್ಲಿ ತೀವ್ರ ನೀರಿನ ಕ್ಷಾಮ ಎದುರಿಸುವ ಸಾಧ್ಯತೆ ಉಂಟಾಗಲಿದೆ. ನೀರು ಸಂಗ್ರಹಕ್ಕಾಗಿ ಎರಡು ವರ್ಷಗಳ ಹಿಂದೆ ಎರಡು ಲಕ್ಷ ರೂ. ವ್ಯಯಿಸಿ ಮಳೆ ನೀರು ದಾಸ್ತಾನು ಕೇಂದ್ರವನ್ನು ನಿರ್ಮಿಸಲಾಗಿತ್ತು. ಈ ಯೋಜನೆಯೂ ಸಫಲವಾಗಿಲ್ಲ.