Advertisement
ಚಿಕ್ಕಬಳ್ಳಾಪುರ ಜಿಲ್ಲೆಯ ದೊಡ್ಡ ಕೆರೆಗಳಲ್ಲಿ ಒಂದಾದ, ಭಾರತದ ಭೂಪಟವನ್ನು ಹೋಲುವ ಅಮಾನಿಬೈರಸಾಗರ ಕೆರೆ 2022ನೇ ವರ್ಷದಲ್ಲಿ ನಿಲ್ಲದೇ ಕೋಡಿ ಹರಿಯುತ್ತಿದ್ದು, ಇದೇ ಕೆರೆಯಲ್ಲಿ ಜೀವ ಜಲಚರಗಳು ವಾಸಸ್ಥಾನವಾಗಿದ್ದು, ಇದೇ ಕೆರೆಯ ನೀರನ್ನು ಸುಮಾರು ಹಳ್ಳಿಗೆ ಕುಡಿಯುವ ನೀರು ಬಳಕೆಗೆ ಬಳಸಲು ಯೋಜನೆ ಸಹ ಸಿದ್ದಪಡಿಸುತ್ತಿದೆ, ಆದರೆ ಈ ಕೆರೆಯ ನೀರು ಕಳೆದ ಶನಿವಾರ ರಾತ್ರಿಯಿಂದ ಬಣ್ಣ ಬದಲಾವಣೆಯಾಗುತ್ತಿದ್ದು, ಭಾನುವಾರ ಬೆಳಿಗ್ಗೆ ಕೆರೆಯ ನೀರು ಕೆಮಿಕಲ್ ಮಿಶ್ರಣದ ಬಣ್ಣದ ರೂಪಕ್ಕೆ ತಿರುಗಿದ್ದು, ಬೆಳಿಗಿನ ಜಾವ ವಾಯು ವಿವಹಾರಕ್ಕೆ ತೆರಳಿದ್ದು, ಸಾರ್ವಜನಿಕರು ಕೆರೆಯ ನೀರಿನ ಬಣ್ಣ ಬದಲಾಗಿರುವುದನ್ನು ಕಂಡು, ಕೆಮಿಕಲ್ ಮಿಶ್ರಣವಾಗಿರಬಹುದು ಎಂದು ಅನುಮಾನ ವ್ಯಕ್ತ ಪಡಿಸಿದ್ದಾರೆ, ಹೆಚ್ಚಿನ ಅನಾಹುತ ಸಂಬಂವಿಸುವ ಮೊದಲೆ ಸಂಬಂಧ ಪಟ್ಟ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ಮಾಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
Advertisement
ಗುಡಿಬಂಡೆ: ಕೆಮಿಕಲ್ ಮಿಶ್ರಿತ ಬಣ್ಣವಾದ ಕೆರೆ ನೀರು
03:15 PM Oct 09, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.