Advertisement

ಚೆಂಬೂರ್‌ ಕರ್ನಾಟಕ ಸಂಘದ “ಸಾಹಿತ್ಯ ಸಹವಾಸ-2018′ 

05:31 PM Dec 23, 2018 | Team Udayavani |

ಮುಂಬಯಿ: ಮಹಾನಗರ ಮುಂಬಯಿಯ ಪ್ರತಿಷ್ಠಿತ ಶಿಕ್ಷಣ ಹಾಗೂ ಸಾಮಾಜಿಕ ಸಂಸ್ಥೆ ಚೆಂಬೂರ್‌ ಕರ್ನಾಟಕ ಸಂಘ ಇದರ ವಾರ್ಷಿಕ ಸಾಹಿತ್ಯ-ಸಂಸ್ಕೃತಿ, ಸಮ್ಮಾನ ಸಂಭ್ರಮ “ಸಾಹಿತ್ಯ ಸಹವಾಸ 2018-19′ ಶನಿವಾರ ಸಂಜೆ ಉದ್ಘಾಟಿಸಲ್ಪಟ್ಟಿತು. ಆ್ಯಡ್‌ಲ್ಯಾಬ್‌ ಮತ್ತು ಇಮ್ಯಾಜಿಕಾ ಸಂಸ್ಥೆಯ ಸಂಸ್ಥಾಪಕ ಹಾಗೂ ಬಾಲಿವುಡ್‌ ನಿರ್ಮಾಪಕ ಮನಮೋಹನ್‌ ಆರ್‌. ಶೆಟ್ಟಿ ಪ್ರಧಾನ ಅಭ್ಯಾಗತರಾಗಿದ್ದು ದೀಪ ಪ್ರಜ್ವಲಿಸಿ ಸಮಾರಂಭ ಉದ್ಘಾಟಿಸಿದರು.

Advertisement

ಸಂಘದ ಅಧ್ಯಕ್ಷ ನ್ಯಾಯವಾದಿ ಎಚ್‌.ಕೆ ಸುಧಾಕರ ಅರಾಟೆ ಅವರ ಮಾರ್ಗದರ್ಶನ ಹಾಗೂ ಸಾರಥ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗೌರವ ಅತಿಥಿಯಾಗಿ ವಿಶ್ವಾತ್‌ ಕೆಮಿಕಲ್ಸ್‌ ಲಿಮಿಟೆಡ್‌ ಸಂಸ್ಥೆಯ ಕಾರ್ಯನಿರ್ವಾಹಕ ಕಾರ್ಯಾಧ್ಯಕ್ಷ ಬಿ.ವಿವೇಕ್‌ ಶೆಟ್ಟಿ, ಸಂಘದ ರಾಷ್ಟ್ರೀಯ ಕನ್ನಡರತ್ನ ಪ್ರಶಸ್ತಿ-2018ಕ್ಕೆ ಆಯ್ಕೆಯಾದ ಕವಿ, ಸಾಹಿತಿ, ಅಧ್ಯಾಪಕ ಪದ್ಮಶ್ರೀ ಡಾ| ಕೆ.ಎಸ್‌.ನಿಸಾರ್‌ ಅಹಮದ್‌, ಸಂಘದ “ದಿ| ವೈ.ಜಿ ಶೆಟ್ಟಿ ಶ್ರೇಷ್ಠ ಶಿಕ್ಷಕ ಪ್ರಶಸ್ತಿ’ಗೆ ಆಯ್ಕೆಯಾದ ನಿವೃತ್ತ ಶಿಕ್ಷಕಿ ಅಂಜಲಿ ಎ. ಶಿಧೋರೆ, “ಸುಬ್ಬಯ್ಯ ಶೆಟ್ಟಿ ದತ್ತಿ’ ಗೌರವ ಪುರಸ್ಕಾರಕ್ಕೆ ಆಯ್ಕೆಯಾದ ಸಮಾಜ ಸೇವಕ ಜಯರಾಮ್‌ ಶೆಟ್ಟಿ, “ಅರಾಟೆ ನಾಗಮ್ಮ ಶೇಷಪ್ಪ ಪೂಜಾರಿ ಮೆಮೋರಿಯಲ್‌’ ಪ್ರಶಸ್ತಿಗೆ ಭಾಜನರಾದ ಉದ್ಯಮಿ ಸುರೇಂದ್ರ ಎ. ಪೂಜಾರಿ (ಸಾಯಿಕೇರ್‌), ಸಂಘದ ಉಪಾಧ್ಯಕ್ಷ ಪ್ರಭಾಕರ ಬಿ. ಬೋಳಾರ್‌, ಗೌರವ ಪ್ರಧಾನ ಕಾರ್ಯದರ್ಶಿ ದೇವದಾಸ್‌ ಕೆ.ಶೆಟ್ಟಿಗಾರ್‌, ಗೌರವ ಕೋಶಾಧಿಕಾರಿ ಟಿ. ಆರ್‌ ಶೆಟ್ಟಿ, ಸಾಂಸ್ಕೃತಿಕ ಉಪ ಸಮಿತಿ ಕಾರ್ಯದರ್ಶಿ ದಯಾಸಾಗರ್‌ ಚೌಟ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ  ಸಂಘದ  ಜತೆ ಕೋಶಾಧಿಕಾರಿ ಸುಂದರ್‌ ಎನ್‌. ಕೋಟ್ಯಾನ್‌, ಕಾರ್ಯಕಾರಿ ಸಮಿತಿ ಸದಸ್ಯರಾದ ವಿಶ್ವನಾಥ ಎಸ್‌. ಶೇಣವ, ಗುಣಾಕರ ಎಚ್‌.ಹೆಗ್ಡೆ, ಯೋಗೇಶ್‌ ವಿ.ಗುಜರನ್‌, ಮಧುಕರ್‌ ಜಿ. ಬೈಲೂರು, ರಾಮ ಪೂಜಾರಿ, ರಂಜನ್‌ಕುಮಾರ್‌ ಆರ್‌.ಅಮೀನ್‌,  ಮೋಹನ್‌ ಕೆ.ಕಾಂಚನ್‌, ಚಂದ್ರಶೇಖರ ಎ.ಅಂಚನ್‌, ಅಶೋಕ್‌ ಸಾಲ್ಯಾನ್‌, ಕೆ.ಜಯ ಎಂ. ಶೆಟ್ಟಿ, ಸುಧೀರ್‌ ವಿ.ಪುತ್ರನ್‌, ಚಂದ್ರಶೇಖರ ನಾೖಕ್‌, ಸಂಜೀವ ಎಸ್‌.ಶೆಟ್ಟಿ, ಸೇರಿದಂತೆ ಸಂಘದ ವಿವಿಧ ವಿದ್ಯಾಲಯಗಳ ಶಿಕ್ಷಕರು, ಶಿಕ್ಷಕೇತರ ಸಿಬಂದಿಗಳು, ವಿದ್ಯಾರ್ಥಿಗಳು, ಕನ್ನಡ ಶಿಕ್ಷಣಾಭಿಮಾನಿಗಳು, ಸಂಸ್ಕೃತಿ ಪ್ರಿಯರು, ಕಲಾಸಕ್ತರು, ಉಪಸ್ಥಿತರಿದ್ದು, ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಬಾಯ್‌ ಝೋನ್‌ ಡ್ಯಾನ್ಸ್‌ ಆಕಾಡೆಮಿ ಮಂಗಳೂರು ತಂಡವು  ವರ್ಣರಂಜಿತ ನೃತ್ಯ ಸಂಗೀತ, ನಾದ ನಿನಾದ ವೈಭವ  ಪ್ರದರ್ಶಿಸಿದರು.

ಚಿತ್ರ-ವರದಿ: ರೋನ್ಸ್‌ ಬಂಟ್ವಾಳ್‌

Advertisement

Udayavani is now on Telegram. Click here to join our channel and stay updated with the latest news.

Next