ಮುಂಬಯಿ: ಬೃಹನ್ಮುಂಬಯಿ ಯಲ್ಲಿ ಸುಮಾರು ಆರೂವರೆ ದಶಕ ಗಳಿಂದ ಶೈಕ್ಷಣಿಕ, ಸಾಮಾಜಿಕ, ಸಾಂಸ್ಕೃತಿಕ ಸೇವೆಗಳ ಮುಖಾಂತರ ಸೇವಾ ನಿರತ ಕರ್ನಾಟಕ ಸಂಘವು ಸ್ವಂತಿಕೆಯ ಆಸ್ತಿತ್ವ ರೂಪಿಸಿರುವುದೇ ನಮ್ಮ ಅಭಿಮಾನ ವಾಗಿದೆ. ಸಂಘದ ಚೆಂಬೂರು ಜೂನಿ ಯರ್ ಕಾಲೇಜ್, ನೈಟ್ ಕಾಲೇಜು, ಪ್ರಾಥಮಿಕ ಮತ್ತು ಪ್ರೌಢಶಾಲೆ, ಲಾ ಕಾಲೇಜ್ ಮೊದಲಾದವು ನಮ್ಮಲ್ಲಿನ ಶೈಕ್ಷಣಿಕ ಸೇವೆಗೆ ಹೊಸತನ ನೀಡುತ್ತಿವೆ. ಈ ಮೂಲಕ ಈ ಸಂಸ್ಥೆಯನ್ನು ಸ್ವಂತಿಕೆಯ ಅಸ್ತಿತ್ವದೊಂದಿಗೆ ಉತ್ತುಂಗಕ್ಕೆ ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಚೆಂಬೂರು ಕರ್ನಾಟಕ ಸಂಘದ ಅಧ್ಯಕ್ಷ, ನ್ಯಾಯವಾದಿ ಎಚ್.ಕೆ. ಸುಧಾಕರ ಆರಾಟೆ ಹೇಳಿದರು.
ರವಿವಾರ ಪೂರ್ವಾಹ್ನ ಇಲ್ಲಿನ ಚೆಂಬೂರು ವಿದ್ಯಾಸಾಗರ ಸಂಕೀರ್ಣದ ಸಭಾಗೃಹದಲ್ಲಿ ನಡೆದ ಚೆಂಬೂರು ಕರ್ನಾಟಕ ಸಂಘದ 66ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, 66 ವರ್ಷಗಳ ಸುಧೀರ್ಘಾವಧಿಯಲ್ಲಿ ಸೇವಾನಿರತ ಈ ಸಂಸ್ಥೆಯನ್ನು ನಮ್ಮ ಹಿರಿಯರು ಸ್ಥಾಪಿಸಿ ತುಳು – ಕನ್ನಡಿಗರೆಲ್ಲರೂ ಒಗ್ಗಟ್ಟಿನಿಂದ ಬೆಳೆಸಿದರು. ಸಮಾಜಪರ ಚಟುವಟಿಕೆ ನಡೆಸುವ ಉದ್ದೇಶದಿಂದ ಕಟ್ಟಿ ಬೆಳೆಸಿದ ಈ ಸಂಸ್ಥೆಯನ್ನು ನಾವು ಪ್ರಾಮಾಣಿಕವಾಗಿ ಮುನ್ನಡೆಸುತ್ತಿದ್ದೇವೆ. ಇಲ್ಲಿ ನಮ್ಮವರು ನಮ್ಮ ಮಾತೃಭಾಷೆಯಲ್ಲಿಯೇ ಮಾತನಾಡಿದಾಗ ನಮ್ಮತನದ ಅರಿವು ಆಗುತ್ತದೆ ಎಂದರು.
ಉಪಾಧ್ಯಕರಾದ ಪ್ರಭಾಕರ ಬಿ. ಬೋಳಾರ್ ಮತ್ತು ಚಂದ್ರಕಾಂತ್ ಎಸ್. ನಾೖಕ್, ಗೌರವ ಪ್ರಧಾನ ಕಾರ್ಯದರ್ಶಿ ದೇವದಾಸ ಕೆ. ಶೆಟ್ಟಿಗಾರ್, ಗೌರವ ಕೋಶಾಧಿಕಾರಿ ಟಿ. ಆರ್. ಶೆಟ್ಟಿ, ಗೌರವ ಜತೆ ಕಾರ್ಯದರ್ಶಿ ಸುಧಾಕರ್ ಎಚ್. ಅಂಚನ್, ಜತೆ ಕೋಶಾಧಿಕಾರಿ ಸುಂದರ್ ಎನ್. ಕೋಟ್ಯಾನ್, ಕಾರ್ಯಕಾರಿ ಸಮಿತಿ ಸದಸ್ಯರಾದ ಗುಣಾಕರ್ ಎಸ್. ಹೆಗ್ಡೆ, ಯೋಗೇಶ್ ವಿ. ಗುಜರನ್, ವಿಶ್ವನಾಥ ಎಸ್. ಶೇಣವ, ಅರುಣ್ ಕುಮಾರ್ ಶೆಟ್ಟಿ, ಸಂದೇಶ್ ಡಿ. ಮಧೂರು, ಸುಂದರ್ ಎನ್. ಕೋಟ್ಯಾನ್, ಚಂದ್ರಶೇಖರ್ ಅಂಚನ್, ರಾಮ ಪೂಜಾರಿ, ಮೋಹನ್ ಎಸ್. ಕಾಂಚನ್, ಅಶೋಕ್ ಸಾಲ್ಯಾನ್, ದಯಾಸಾಗರ್ ಚೌಟ, ಸುಧೀರ್ ವಿ. ಪುತ್ರನ್, ಶಬರಿ ಶೆಟ್ಟಿ ಮತ್ತು ಮಾಲತಿ ಆರ್. ಮೊಲಿ ಉಪಸ್ಥಿತರಿದ್ದರು.
ಕಾರ್ಯಕಾರಿ ಸಮಿತಿ ಸದಸ್ಯರುಸಹಿತ ಅನೇಕ ಸದಸ್ಯರು ಸಭೆಯಲ್ಲಿ ಭಾಗವಹಿ ಸಿದ್ದರು. ಸಭಿಕರ ಪರವಾಗಿ ಜಯ ಎ. ಶೆಟ್ಟಿ, ಗಿರೀಶ್ ಶ್ಯಾನ್‌ಭಾಗ್, ದಯಾಸಾಗರ್ ಚೌಟ, ರಘು ಎ. ಮೊಲಿ ಜೆರ್‌ನೊಲ್ಡ್ ಜೆ. ಕ್ಲೇವಿಯರ್, ರವಿ ಹೆಗ್ಡೆ ಮತ್ತಿತರು ಮಾತನಾಡಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಸಭೆಯ ಆರಂಭದಲ್ಲಿ ಪದಾಧಿಕಾರಿ ಗಳು ಶ್ರೀ ಗಣಪತಿ, ಸರಸ್ವತಿ ದೇವಿಗೆ ಪೂಜೆ ನೆರೆವೇರಿಸಿದರು. ಚೈತನ್ಯಾ ಶೆಟ್ಟಿ, ಹೇಮಲತಾ ಗೌಡ, ರಮ್ಯಾ ಪೂಜಾರಿ ಪಾರ್ಥನೆಗೈದರು. ಟಿ. ಆರ್. ಶೆಟ್ಟಿ ಗತ ವಾರ್ಷಿಕ ಲೆಕ್ಕಪತ್ರ ಮಂಡಿಸಿದರು. ದೇವದಾಸ್ ಕೆ. ಶೆಟ್ಟಿಗಾರ್ ಗತ ಮಹಾ ಸಭೆಯ ವರದಿ ವಾಚಿಸಿ, ವಂದಿಸಿದರು.