ಚೇಳೂರು: ತಮ್ಮಗಳ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಲ್ಲಿ ಇರುವ ಗೃಹಗಳ ರಕ್ಷಣೆ ಮಾಡುವ ಪೊಲೀಸ್ ಇಲಾಖೆಯ ಸಿಬ್ಬಂದಿಗಳ ಕುಟುಂಬಗಳಿಗೆ ರಕ್ಷಣೆ ನೀಡುವ ವಸತಿಗೃಹ ಜಿಲ್ಲಾ ಉಸ್ತುವಾರಿ ಹಾಗೂ ಗೃಹ ಸಚಿವರಾದ ಅರಗ ಜ್ಞಾನೇಂದ್ರ ವ್ಯಾಪ್ತಿಯಲ್ಲಿ ಬರುವ ಚೇಳೂರು ಪೊಲೀಸ್ ಠಾಣೆಯ ಸಿಬ್ಬಂದಿಗಳಿಗೆ ಇಲ್ಲ ವಸತಿ ಗೃಹದ ಸೌಲಭ್ಯ.
ಗುಬ್ಬಿ ತಾಲೂಕಿನಲ್ಲಿ ಅತ್ಯಂತ ದೊಡ್ಡ ವ್ಯಾಪ್ತಿಯ ಪೋಲಿಸ್ ಠಾಣೆ ಚೇಳೂರು ಆಗಿದೆ. ಈ ಠಾಣೆಗೆ ಸುಮಾರು 165 ಹಳ್ಳಿಗಳಿಗಿಂತ ಹೆಚ್ಚಿಗೆ ಇವೆ. ಈ ಠಾಣೆಯೋ ಗುಬ್ಬಿ, ಶಿರಾ, ತುಮಕೂರು,ತುರುವೇಕೆರೆ ಗಡಿ ಭಾಗದ ವರೆಗೂ ವ್ಯಾಪ್ತಿಯನ್ನು ಹೊಂದಿರುವ ದೊಡ್ಡ ಠಾಣೆಯಾಗಿದೆ. ಈ ಠಾಣೆಯಲ್ಲಿ ಒಬ್ಬರು ಪಿಎಸ್ಐ, ನಾಲ್ಕು ಜನ ಎ ಎಸ್ ಐ, 11 ಜನ ಹೆಡ್ ಕಾನ್ಸ್ಟೇಬಲ್ ಗಳು, ಮಹಿಳಾ ಸಿಬ್ಬಂದಿಯೊಂದಿಗೆ 20 ಜನ ಪೊಲೀಸರು ಕರ್ತವ್ಯವನ್ನು ನಿರ್ವಹಿಸುತ್ತಿದ್ದಾರೆ.
ಇವರಿಗೆ ಸರಿಯಾದ ರೀತಿಯ ವಸತಿಗೃಹ ಇಲ್ಲ ಸುಮಾರು ವರ್ಷಗಳ ಹಿಂದೆ ಕಟ್ಟಿದ್ದ 12 ವಸತಿಗೃಹಗಳ ಶಿಥಿಲವಾದ ಕಾರಣ ಈ ಕಟ್ಟಡಗಳನ್ನು ಕೆಡವಿ ಹಾಕಿ ಸುಮಾರು ಎರಡು ವರ್ಷಗಳೇ ಆಗುತ್ತಿವೆ. ಇದುವರೆಗೂ ಹೊಸ ವಸತಿಗೃಹ ಕಟ್ಟುವ ಗೋಜಿಗೆ ಇಲಾಖೆ ಹೋದಂತೆ ಕಾಣುತ್ತಿಲ್ಲ ಪೋಲಿಸ್ ಸಿಬ್ಬಂದಿಗಳಿಗೆ ಸರ್ಕಾರದಿಂದ ಬರುವ ಬಾಡಿಗೆ ಭತ್ಯೆಯಾದ ಮೂರರಷ್ಟು ಹಣ ಬಾಡಿಗೆ ಕಟ್ಟಿಕೊಂಡು ಬೇರೆ ಮನೆಗಳಲ್ಲಿ ವಾಸ ಮಾಡುತ್ತಿರುವುದನ್ನು ಕಾಣುತ್ತಿವೆ.
ಇಷ್ಟು ದೊಡ್ಡ ವ್ಯಾಪ್ತಿಯ ಪೋಲಿಸ್ ಠಾಣೆಗೆ ಸಾರ್ವಜನಿಕರು ತಮ್ಮಗಳ ರಕ್ಷಣೆಗೆ ಅದರಲ್ಲೂ ಮನೆಗಳ ಬಿಡಿಸಿಕೊಳ್ಳುವುದು ಹಾಗೂ ಇನ್ನಿತರ ವ್ಯಾಜ್ಯಗಳ ಬಗ್ಗೆ ದೂರುಗಳನ್ನು ನೀಡಿಕೊಂಡು ಪರಿಹಾರವನ್ನು ಪಡೆದುಕೊಳ್ಳುತ್ತಿದ್ದಾರೆ. ಆದರೆ ವಿಪರ್ಯಾಸ ಎಂದರೆ ಇಲ್ಲಿ ಕೆಲಸ ಮಾಡುವ ಸಿಬ್ಬಂದಿಗಳಿಗೆ ವಾಸ ಮಾಡುವ ಅದರಲ್ಲೂ ತಮ್ಮ ಕುಟುಂಬದ ರಕ್ಷಣೆಗೆ ಇರುವ ವಸತಿಗೃಹವೇ ಇಲ್ಲ. ಹೇಗಿದೆ ನಮ್ಮ ರಕ್ಷಣಾ ಇಲಾಖೆಯ ವೈಪರ್ಯ ಎಂಬುದಕ್ಕೆ ಸಾಕ್ಷಿಯಾಗಿದೆ.
ಸಿಬ್ಬಂದಿಗಳು ವಸತಿಗೃಹ ನಿರ್ಮಾಣ ಮಾಡುವ ಬಗ್ಗೆ ಇಲಾಖೆಯ ಗಮನಕ್ಕೆ ನೇರವಾಗಿ ಆಗಲಿ. ಗಟ್ಟಿಯಾಗಿ ಹೇಳಿಕೊಳ್ಳಲು ಆಗುತ್ತಿಲ್ಲ. ಇವರ ಕಷ್ಟ ಯಾರ ಹತ್ತಿರ ಹೇಳಿಕೊಳ್ಳಬೇಕು ಎನ್ನುವ ಗೋಜಿನಲ್ಲಿ ಇರುವಂತೆ ಮೇಲ್ನೋಟಕ್ಕೆ ಕಾಣುತ್ತಿದೆ.
ವಿಪರ್ಯಾಸವೆಂದರೆ ಗೃಹ ಸಚಿವರಾದ ಅರಗ ಜ್ಞಾನೇಂದ್ರ ರವರು ತುಮಕೂರು ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದು ಇಲಾಖೆಯ ಸಿಬ್ಬಂದಿಗಳಿಗೆ ರಕ್ಷಣೆ ನೀಡುವ ವಸತಿಗೃಹಗಳ ಬಗ್ಗೆ ಗಮನ ಇದೆಯೋ ಇಲ್ಲವೋ ಎಂಬುದು ಗೊತ್ತಾಗುತ್ತಿಲ್ಲ ಎಂದು ಸಾರ್ವಜನಿಕರು ದೋರುತಿದ್ದಾರೆ ಆದರೆ ಇಲಾಖೆಯ ಮೇಲಧಿಕಾರಿಗಳಿಗೆ ನೇರವಾಗಿ ಹೇಳಲು ಆಗುತ್ತಿಲ್ಲ ಎಂಬುದು ಮೇಲ್ನೋಟಕ್ಕೆ ಕಾಣುತ್ತಿದೆ.
ಇಂತಹ ದೊಡ್ಡ ಹೋಬಳಿ ಕೇಂದ್ರದಲ್ಲಿ ಇರುವ ಪೊಲೀಸ್ ಇಲಾಖೆಯ ಎಲ್ಲಾ ಸಿಬ್ಬಂದಿಗಳಿಗೆ ವಸತಿಗೃಹವನ್ನು ನಿರ್ಮಾಣ ಮಾಡಿಕೊಡುವರೇ ಸಂಬಂಧ ಪಟ್ಟವರು ಕಾದು ನೋಡಬೇಕಾಗಿದೆ.
ಇದನ್ನೂ ಓದಿ: ಜಗತ್ತೇ ಬಿಕ್ಕಟ್ಟಿನಲ್ಲಿದೆ; ಸವಾಲುಗಳ ಬೆಟ್ಟವೇ ಮುಂದಿದೆ – ಗ್ಲೋಬಲ್ ಸೌತ್ ಶೃಂಗದಲ್ಲಿ ಪ್ರಧಾನಿ ಮೋದಿ