Advertisement

300 ವಿದ್ಯಾರ್ಥಿಗಳು ಗೈರು

01:30 PM Jul 03, 2020 | Naveen |

ಚಳ್ಳಕೆರೆ: ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಕನ್ನಡ ಭಾಷೆ ವಿಷಯದ ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದ 4724 ವಿದ್ಯಾರ್ಥಿಗಳಲ್ಲಿ 4481 ವಿದ್ಯಾರ್ಥಿಗಳು ಹಾಜರಾಗಿದ್ದರು. 244 ಹಾಗೂ ಹೊರ ರಾಜ್ಯದ 6 ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 300 ವಿದ್ಯಾರ್ಥಿಗಳು ಪರೀಕ್ಷೆಗೆ ಗೈರುಹಾಜರಾಗಿದ್ದಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್‌. ಸುರೇಶ್‌ ತಿಳಿಸಿದ್ದಾರೆ.

Advertisement

ಅನಾರೋಗ್ಯ ಪೀಡಿತ ಒಬ್ಬರು, ಕಂಟೇನ್ಮೆಂಟ್‌ ಪ್ರದೇಶದಿಂದ ಇಬ್ಬರು ಪರೀಕ್ಷೆ ಬರೆದಿದ್ದಾರೆ. ನೆರೆ ರಾಜ್ಯದ ವಿದ್ಯಾರ್ಥಿಗಳಲ್ಲಿ 98 ಜನ ಪರೀಕ್ಷೆ ಬರೆಯಬೇಕಿದ್ದು, 92 ಜನ ಪರೀಕ್ಷೆ ಬರೆದು 6 ವಿದ್ಯಾರ್ಥಿಗಳು ಗೈರಾಗಿದ್ದರು. ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಗಳು ಸುಗಮವಾಗಿ ನಡೆದವು ಎಂದು ಅವರು ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next