Advertisement

Sandalwood: ಶೆಫ್ ಜೊತೆ ರೆಚೆಲ್‌ ಡೇವಿಡ್‌

02:08 PM Dec 27, 2023 | Team Udayavani |

“ಶೆಫ್ ಚಿದಂಬರ’ ಚಿತ್ರದ ಹೊಸ ಪೋಸ್ಟರ್‌ ಬಿಡುಗಡೆಯಾಗಿದೆ. ಈ ಚಿತ್ರದಲ್ಲಿ ಅನು ಎಂಬ ಪಾತ್ರದಲ್ಲಿ ರೆಚೆಲ್‌ ಡೇವಿಡ್‌ ಕಾಣಿಸಿಕೊಂಡಿದ್ದಾರೆ. ರೆಚೆಲ್‌ ಅವರ ಪಾತ್ರವನ್ನು ಪರಿಚಯಿಸುವ ಪೋಸ್ಟರ್‌ ಅನ್ನು ಇತ್ತೀಚೆಗೆ ಚಿತ್ರತಂಡ ಬಿಡುಗಡೆ ಮಾಡಿದೆ. ಸದ್ಯ ಚಿತ್ರ ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ಬಿಝಿಯಾಗಿದೆ.

Advertisement

ದಮ್ತಿ ಪಿಕ್ಚರ್ಸ್‌ ಲಾಂಛನದಲ್ಲಿ ರೂಪ ಡಿ.ಎನ್‌ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ನಿರ್ದೇಶಕರೆ ಕಥೆ ಬರೆದಿದ್ದು, ಚಿತ್ರಕಥೆ ಹಾಗೂ ಸಂಭಾಷಣೆ ಗಣೇಶ್‌ ಪರಶುರಾಮ್‌ ಬರೆದಿದ್ದಾರೆ.

ಉದಯಲೀಲ ಛಾಯಾಗ್ರಹಣ, ರಿತ್ವಿಕ್‌ ಮುರಳಿಧರ್‌ ಸಂಗೀತ ನಿರ್ದೇಶನ, ವಿಜೇತ್‌ ಚಂದ್ರ ಸಂಕಲನ, ವಿಕ್ರಾಂತ್‌ ರೋಣ ಖ್ಯಾತಿಯ ಆಶಿಕ್‌ ಕುಸುಗೊಳ್ಳಿ ಡಿ.ಐ, ನರಸಿಂಹಮೂರ್ತಿ ಸಾಹಸ ನಿರ್ದೇಶನ ಹಾಗೂ ಮಾಧುರಿ ಪರಶುರಾಮ್‌ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ಅನಿರುದ್ಧ್ ಅವರಿಗೆ ನಾಯಕಿಯರಾಗಿ ನಿಧಿ ಸುಬ್ಬಯ್ಯ ಹಾಗೂ ರೆಚೆಲ್‌ ಡೇವಿಡ್‌ ಅಭಿನಯಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next