Advertisement

ಇಪ್ಪತ್ತೈದು ವರ್ಷದಿಂದ ಹಾಳಾಗಿಲ್ಲ ಬರ್ಗರ್‌

09:50 AM Nov 12, 2019 | Hari Prasad |

ಜಗತ್ತಿನಲ್ಲಿ ನಮಗೆ ನಿಮಗೆ ಗೊತ್ತಿಲ್ಲದ ಹಲವು ಅದ್ಭುತಗಳು ನಡೆಯುತ್ತವೆ. ಕೆಲವೊಮ್ಮೆ ಅವುಗಳು ನಮ್ಮ ತಿಳಿವಳಿಕೆಯ ಮಿತಿಯನ್ನೂ ಮೀರಿರುತ್ತವೆ ಎನ್ನುವುದು ಹಲವು ಬಾರಿ ಗೊತ್ತಾಗಿರುವ ಅಂಶ.

Advertisement

ಯಾವುದಕ್ಕೆ ಇಂಥ ಪೀಠಿಕೆ ಎಂದರೆ 1995ರಲ್ಲಿ ಆಸ್ಟ್ರೇಲಿಯಾದಲ್ಲಿ ಕ್ಯಾಸೇ ಡೀನ್‌ ಎಂಬಾತ ಖರೀದಿ ಮಾಡಿದ್ದ ಬರ್ಗರ್‌ ಇನ್ನೂ ಕೂಡ ತೆಗೆದ ಸಮಯದಲ್ಲಿ ಹೇಗಿದೆಯೋ ಹಾಗೆಯೇ ಇದೆಯಂತೆ ಎಂದು ಹೇಳಿಕೊಂಡಿದ್ದಾನೆ. ಅಂದ ಹಾಗೆ ಈ ಅಂಶವನ್ನು ಹಿಂದೊಮ್ಮೆ ಕೂಡ ಹಲವು ಬಾರಿ ಹೇಳಿಕೊಂಡಿದ್ದರಂತೆ. ಇದೀಗ ಆ ಬರ್ಗರ್‌ ಅನ್ನು ಗಾಜಿನ ಪರದೆಯ ಹಿಂದೆ ಇರಿಸಿ ಅದರ ಬಗ್ಗೆ ಹೇಳಿಕೊಂಡಿದ್ದಾರೆ.

1999ರಲ್ಲಿ ಖರೀದಿಸಿದ್ದ ಬರ್ಗರ್‌ ಅನ್ನು ಮನೆಯ ಗ್ಯಾರೇಜ್‌ನಲ್ಲಿ ಇರಿಸಿದ್ದನಂತೆ. ಬಳಿಕ ಐಸ್‌ಲ್ಯಾಂಡ್‌ನ‌ ನ್ಯಾಷನಲ್‌ ಮ್ಯೂಸಿಯಂಗೆ ತೆಗೆದುಕೊಂಡು ಹೋಗಲಾಯಿತು. ಇದೀಗ ದಕ್ಷಿಣ ಐಸ್‌ಲ್ಯಾಂಡ್‌ನ‌ ಹಾಸ್ಟೆಲ್‌ ಒಂದರಲ್ಲಿ ಗಾಜಿನ ಪರದೆಯ ಹಿಂದೆ ಇರಿಸಲಾಗಿದೆ. ಯಾಕೆ ಈ ರೀತಿಯಾಗಿದೆ ಎನ್ನುವುದಕ್ಕೆ ಟಿಮ್‌ ಕ್ರೋವ್‌ ಎಂಬುವರು ಹೇಳುವ ಪ್ರಕಾರ ಉಪ್ಪಿನ ಅಂಶ ಹೆಚ್ಚು ಇರುವ ಬರ್ಗರ್‌ ಹಾಳಾಗುವುದಕ್ಕೆ ಹೆಚ್ಚು ಸಮಯ ಬೇಕಾಗುತ್ತದೆ ಎನ್ನುತ್ತಾರೆ. ಅದೇನೇ ಇರಲಿ ವಿಶ್ವಾದ್ಯಂತ ಇದೊಂದು ಸುದ್ದಿಯಾದದ್ದಂತೂ ಸತ್ಯ.

Advertisement

Udayavani is now on Telegram. Click here to join our channel and stay updated with the latest news.

Next