Advertisement
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಎಕ್ಸ್ ಪೋಸ್ಟ್ ಮಾಡಿ ಅಭಿನಂದನೆ ಸಲ್ಲಿಸಿದ್ದು ” ಕಂಚಿನ ಪದಕದೊಂದಿಗೆ ಭಾರತದ ಪದಕ ಪಟ್ಟಿಯಲ್ಲಿ ಖಾತೆ ತೆರೆದಿದ್ದಕ್ಕಾಗಿ ಮನು ಭಾಕರ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ಶೂಟಿಂಗ್ ಸ್ಪರ್ಧೆಯಲ್ಲಿ ಒಲಿಂಪಿಕ್ ಪದಕ ಗೆದ್ದ ಮೊದಲ ಭಾರತೀಯ ಮಹಿಳೆ. ಮನು ಭಾಕರ್ ಬಗ್ಗೆ ಭಾರತ ಹೆಮ್ಮೆಪಡುತ್ತದೆ. ಆಕೆಯ ಸಾಧನೆಯು ಅನೇಕ ಕ್ರೀಡಾಪಟುಗಳಿಗೆ, ವಿಶೇಷವಾಗಿ ಮಹಿಳೆಯರಿಗೆ ಸ್ಫೂರ್ತಿ ನೀಡಲಿದೆ. ಭವಿಷ್ಯದಲ್ಲಿ ಅವರು ಸಾಧನೆಯ ಹೆಚ್ಚಿನ ಎತ್ತರವನ್ನು ತಲುಪಬೇಕೆಂದು ನಾನು ಬಯಸುತ್ತೇನೆ” ಎಂದು ಶುಭ ಕೋರಿದ್ದಾರೆ.
Related Articles
Advertisement
ಕ್ರೀಡಾ ಸಚಿವ ಡಾ. ಮನ್ಸುಖ್ ಮಾಂಡವಿಯಾ ಎಕ್ಸ್ ಪೋಸ್ಟ್ ಮಾಡಿ ” ಹೆಮ್ಮೆಯ ಕ್ಷಣ, ಮಹಿಳೆಯರ 10m ಏರ್ ಪಿಸ್ತೂಲ್‌ನಲ್ಲಿ ಮೊದಲ ಪದಕವನ್ನು ಗೆದ್ದಿರುವುದಕ್ಕೆ ಮನು ಭಾಕರ್ ಅವರಿಗೆ ಅಭಿನಂದನೆಗಳು, ನೀವು ನಿಮ್ಮ ಕೌಶಲ್ಯ ಮತ್ತು ಸಮರ್ಪಣೆಯನ್ನು ಪ್ರದರ್ಶಿಸಿದ್ದೀರಿ, ನೀವು ಭಾರತಕ್ಕಾಗಿ ಒಲಿಂಪಿಕ್ ಪದಕವನ್ನು ಗೆದ್ದ 1 ನೇ ಮಹಿಳಾ ಶೂಟರ್ ಆಗಿದ್ದೀರಿ!” ಎಂದು ಪೋಸ್ಟ್ ಮಾಡಿದ್ದಾರೆ.