Advertisement

ಚೀನಿ ಕಮ್‌

07:30 AM Jul 31, 2017 | Harsha Rao |

ಚೀನಾದೇಶದೊಂದಿಗೆ  ಠೂ ಬಿಟ್ಟರೆ ಹೇಗೆ? ಹೀಗಂತ ಯೋಚನೆ ಮಾಡುವಂತೆಯೇ ಇಲ್ಲ.  ನಾವು ಬಳಸುತ್ತಿರುವ ಮೊಬೈಲ್‌, ಅದರ ಚಿಪ್ಪು, ಕಾರುಗಳು- ಅದರ ಎಂಜಿನ್‌ ಎಲ್ಲವೂ ಚೀನಾದಲ್ಲಿ, ಚೀನಾ ಹುಟ್ಟುಹಾಕಿದ ತಂತ್ರಜ್ಞಾನದಿಂದ ನಡೆಯುತ್ತಿರುವುದು. ಹೀಗಾಗಿ  ನಮ್ಮ ಆರ್ಥಿಕ ವ್ಯವಸ್ಥೆಯ  ವೇಗದ  ಓಟದಲ್ಲಿ  ಚೀನಾದ ಪಾಲೂ ಇದೆ. ಅರೆರೆ, ಹೀಗೂ ಉಂಟು ಎಂದಿರಾ ? ಇಲ್ಲಿದೆ ಮಾಹಿತಿ. 

Advertisement

ಚೀನಾದೇಶದ ವಸ್ತುಗಳನ್ನು ಖರೀದಿಸಬೇಡಿ ಎಂದು ಸ್ವದೇಶಿ ಆಂದೋಲನದ ಕೂಗು ಎಲ್ಲೆಡೆ ಕೇಳಿಬರುತ್ತಿದೆ. ಅತ್ತ ಚೀನಾ, ಭಾರತ-ಭೂತಾನ್‌ ಗಡಿ ಭಾಗದ ದೋಕ್ಲಾನ್‌ನಲ್ಲಿ ಸೈನ್ಯದೊಡನೆ ಮುಖಾಮುಖೀಯಾಗಿ ಸೆಣೆಸಾಡುತ್ತಾ ಯುದ್ಧದ ಬೆದರಿಕೆಯನ್ನು ಒಡ್ಡುತ್ತಿದೆ.  ಇದರ ಜೊತೆಗೆ ಭಾರತದಲ್ಲಿ ಬಂಡವಾಳ ಹೂಡಬೇಡಿ ಎಂದು ಚೀನಾ ಮೂಲದ ಕಂಪನಿಗಳಿಗೆ ಕರೆ ಕೊಡುತ್ತಿದೆ. 

ಆದರೆ ನಾವೂ ಬಂಡವಾಳ ಹೂಡಿಕೆಗೆ ರತ್ನಗಂಬಳಿ ಹಾಸಿ ಕುಳಿತಿದ್ದೇವೆ. ಭಾರತ ಹೊರದೇಶದಿಂದ ಸುಮಾರು 100 ಬಿಲಿಯನ್‌ ಡಾಲರ್‌ನಷ್ಟು ಅಂದರೆ ಸುಮಾರು ಆರೂವರೆ ಲಕ್ಷ ಕೋಟಿಯಷ್ಟು ಹೆಚ್ಚು ವಸ್ತು ಮತ್ತು ಸೇವೆಯನ್ನು (ನಾವು ಬೇರೆ ದೇಶಗಳಿಗೆ ರಫ್ತು ಮಾಡುವುದಕ್ಕಿಂತ ಹೆಚ್ಚು) ಆಮದು ಮಾಡಿಕೊಳ್ಳುತ್ತಿದ್ದೇವೆ. ಇದರಿಂದಾಗಿ ನಮಗೆ ಸುಮಾರು 100 ಬಿಲಿಯನ್‌ ಡಾಲರ್‌ ವ್ಯಾಪಾರದ ಕೊರತೆ ನಮ್ಮ ಆರ್ಥಿಕತೆಗೆ ಹೊಡೆತವೇ ಸರಿ. ಈ ಕೊರತೆಯನ್ನು ನೀಗಿಸಲು ನಾವು ದೇಶದ ಆಂತರಿಕ ಹಣಕಾಸು ಕೊರತೆಯನ್ನು ನೀಗಿಸುವಂತೆ ರಿಸರ್ವ್‌ ಬ್ಯಾಂಕ್‌ ಮೂಲಕ ನಾವು ಹಣ ಮುದ್ರಿಸುವಂತಿಲ್ಲ. ಇದನ್ನು ಸರಿದೂಗಿಸಲು ವಿಶ್ವ ಮಾರುಕಟ್ಟೆಯಲ್ಲಿ ಸಾಲ ಮಾಡಬೇಕು, ಇಲ್ಲವೆ ದೇಶಿ ಬಂಡವಾಳ ಹರಿದು ಬರಬೇಕು ಅಥವಾ ನಮ್ಮ ಕೂಲಿ ಕಾರ್ಮಿಕರು ಅರಬ್‌ ದೇಶಗಳಿಂದ ನಮ್ಮ ದೇಶಕ್ಕೆ ಹಣ ಸಂದಾಯ ಮಾಡಬೇಕು. ಸುಮಾರು 70 ಬಿಲಿಯನ್‌ ಡಾಲರ್‌ ಹಣ ಹೆಚ್ಚಾಗಿ ಅರಬ್‌ ರಾಷ್ಟ್ರಗಳಿಂದಲೇ ಇಲ್ಲಿಗೆ ಸಂದಾಯವಾಗುತ್ತಿದೆ. ಇದು ಇಲ್ಲವಾಗಿದ್ದಲ್ಲಿ ನಮ್ಮ ಅಂತಾರಾಷ್ಟ್ರೀಯ ವ್ಯಾಪಾರದಲ್ಲಿನ ಕೊರತೆಯನ್ನು ನೀಗಿಸುವಲ್ಲಿ ಹರಸಾಹಸ ಪಡಬೇಕಾಗಿತ್ತು. 

ಇದರ ಜೊತೆಗೆ ಆಮದು  ಕೊರತೆಗೆ ನಮ್ಮ ಚಿನ್ನದ ವ್ಯಾಮೋಹ ಇನ್ನೊಂದು ಕಾರಣವೂ ಹೌದು. ಇದಾಗಲೇ ಭಾರತ ಸುಮಾರು 575 ಟನ್‌ ಚಿನ್ನವನ್ನು ಈ ವರ್ಷದಲ್ಲಿಯೇ ಆಮದು ಮಾಡಿಕೊಂಡಿದೆ. ಇದು ಕಳೆದ ವರ್ಷದ ಒಟ್ಟು ಆಮದನ್ನು ಮೀರಿನಿಂತಿದೆ. ಇದರಿಂದಾಗಿ ನಾವು ಸ್ವಿಟ್ಜರ್‌ ಲ್ಯಾಂಡ್‌ನೊಂದಿಗೆ ಅಪಾರವಾದ ವ್ಯಾಪಾರದ ಕೊರತೆ ಅನುಭಸುತ್ತಿದ್ದೇವೆ. ಆದರೆ ಇದೆಲ್ಲವನ್ನೂ ಮೀರಿದ್ದು ಚೀನಾದೇಶದೊಂದಿಗೆ ಹೊಂದಿರುವ ಟ್ರೇಡ್‌ ಡೆಫಿಸಿಟ್‌. ಕಳೆದ ವರ್ಷ ಚೀನಾದೊಂದಿಗೆ ಮಾತ್ರ ನಮ್ಮ ರಫ್ತು ಆಮದಿಗಿಂತ ಸುಮಾರು 3 ಲಕ್ಷ 30 ಸಾವಿರ ಕೋಟಿ ಕಮ್ಮಿಯಾಗಿತ್ತು.

ನಾವು ಅಲ್ಲಿಂದ ಆಮದು ಮಾಡಿಕೊಳ್ಳುತ್ತಿರುವ ವಸ್ತುಗಳಲ್ಲಿ ಹೊರನೋಟಕ್ಕೆ ಎದ್ದು ಕಾಣುವುದು ಮೊಬೈಲ್‌ ಫೋನ್‌ಗಳು, ಎಲೆಕ್ಟ್ರಿಕ್‌ ಐಟಂಗಳು. ಹಾಗೆಯೇ ದೀಪಾವಳಿಯ ಹಣತೆ, ನಮ್ಮ ಗಣಪ ಮತ್ತು ಚನ್ನಪಟ್ಟಣದ ಗೊಂಬೆಗಳು ರಫ್ತು ಪಟ್ಟಿಯಲ್ಲಿವೆ. ಆದರೆ ಇಂತಹ ಗ್ರಾಹಕರು ಉಪಯೋಗಿಸುವ ವಸ್ತುಗಳು ನಾವು ಒಟ್ಟು ಚೀನಾದಿಂದ ತರಿಸುವ ಸುಮಾರು 61 ಬಿಲಿಯನ್‌ ಡಾಲರ್‌ ಅಂದರೆ ಸುಮಾರು 4 ಲಕ್ಷ ಕೋಟಿಯಲ್ಲಿ ಶೇ.15 ರಷ್ಟು ಮಾತ್ರ.  ಅಂದರೆ ಸುಮಾರು 60 ಸಾವಿರ ಕೋಟಿಯಷ್ಟಾಗಿರುತ್ತದೆ. ಸುಮಾರು 2 ಲಕ್ಷ ಕೋಟಿಯಷ್ಟು ನಾವು ಚೀನಾದಿಂದ ಆಮದು ಮಾಡಿಕೊಳ್ಳುತ್ತಿರುವ ವಸ್ತುಗಳು, ಯಂತ್ರೋಪಕರಣಗಳು. ವಿವಿಧ ತಯಾರಿಕಾ ಘಟಕಗಳಲ್ಲಿ ಬಳಸುವ ಬಂಡವಾಳ ರೂಪದ ವಸ್ತುಗಳಾಗಿರುತ್ತವೆ. ಇಂದು ಭಾರತದ ಅನೇಕ ದೈತ್ಯ ಕಾರ್ಖಾನೆಗಳಿಂದ ಹಿಡಿದು ಸಾಮಾನ್ಯ ಕಾರ್ಖಾನೆಗಳವರೆಗೂ ಚೀನಾದಲ್ಲಿ ತಯಾರಾದ  ಯಂತ್ರೋಪಕರಣಗಳೇ ಬಳಸುತ್ತಿರುವುದು. ಅತಿ ಕಡಿಮೆ ಬೆಲೆಗೆ ಸಿಗುವುದು ಇದಕ್ಕೆ ಕಾರಣ. ಅದು ಅಂಬಾನಿಯ ಅವರ ಕಚ್ಚಾ ತೈಲ ಶುದ್ಧೀಕರಿಸುವ ದೈತ್ಯ ಕಾರ್ಖಾನೆಯಾಗಿರಬಹುದು, ನಮ್ಮದೇ ಎನ್ನುವ ಮಹೆಂದ್ರ ಕಂಪನಿಯ ಜೀಪುಗಳಿಗೆ ಬರುವ ಬಿಡಿಭಾಗಗಳಾಗಿರಬಹುದು ಅಥವಾ ಔಷಧ ಕಂಪನಿಗಳಿಗೆ ಬರುವ ಔಷಧಿಗಳ ಮೂಲ ರಾಸಾಯನಿಕಗಳಿರಬಹುದು. ಕಳೆದ ಒಂದು ದಶಕದಲ್ಲಿ ನಮ್ಮ ಮೊಬೈಲ್‌ ಕಂಪನಿಗಳು ಸರ್ಕಾರಕ್ಕೆ ಮನವಿ ಸಲ್ಲಿಸಿ ತೆರಿಗೆ ತಗ್ಗಿಸಿ ಕೋಟ್ಯಂತರ ರೂಪಾಯಿಯ ಸರಕನ್ನು ಮೊಬೈಲ್‌ ಟವರ್‌ ಮತ್ತು ಇತರೆ ತಂತ್ರಜಾnನಗಳಿಗೆ ಚೈನಾದಿಂದ ಆಮದು ಮಾಡಿಕೊಂಡಿದ್ದಾರೆ. ಈ ಕಂಪನಿಗಳ ಬೇಡಿಕೆಗೆ ಓಗೊಟ್ಟು ಸರ್ಕಾರ ತನ್ನ ಆಮದು ನೀತಿಯನ್ನು ಚೀನಾದ ಪರ ವಹಿಸಿದ್ದು,  ಸ್ಥಳೀಯ ಕಾರ್ಖಾನೆಗಳು ಮುಂದೆ ಬರಲು ತೊಂದರೆಯಾಯಿತು ಎನ್ನುವುದು ಕೆಲವರ ಅಭಿಪ್ರಾಯ. 

Advertisement

ಇದೇ ನಿಟ್ಟಿನಲ್ಲಿ ಭಾರತಕ್ಕೆ ಕ್ಯಾಪಿಟಲ್‌ ಗೂಡ್ಸ್‌ ಕಡಿಮೆ ದರದಲ್ಲಿ ತಂತ್ರಜಾnನದಲ್ಲೂ ಕೊರತೆ ಇಲ್ಲದೆ ಚೀನಾ ಒದಗಿಸಿದ್ದರಿಂದ ಇಲ್ಲಿ ಉದ್ಯಮ ಮತ್ತು ಉದ್ಯೋಗ ಬೆಳೆಯಿತು ಎನ್ನುವ ವಾದವಿದೆ. ಆದರೆ ಕೆಲವು ಮಾಹಿತಿ ತಂತ್ರಜಾnನದ ಸೂಕ್ಷ್ಮ ಯಂತ್ರೋಪಕರಣಗಳನ್ನು ಚೀನಾದೇಶದಿಂದ ಆಮದು ಮಾಡಿ, ಬಳಸುವುದರಿಂದ ದೇಶದ ಆಂತರಿಕ ಭದ್ರತೆಗೆ ಕೊರತೆ ಇದೆ ಎಂಬುದನ್ನು ಅಲ್ಲಗೆಳೆಯುವಂತಿಲ್ಲ. ಇತ್ತೀಚೆಗೆ ಒಂದು ಔಷಧ ಕಂಪನಿಗೆ ಭೇಟಿ ಕೊಟ್ಟಾಗ ಅಲ್ಲಿನ ಸಿಸಿ ಟಿ ಕ್ಯಾಮರಾಗಳೆಲ್ಲ ಚೀನಾದಲ್ಲಿ ತಯಾರಾಗಿದ್ದನ್ನು ಕಂಡು ನಮ್ಮ ತಂತ್ರಜಾnನ ರಹಸ್ಯವನ್ನು ನಾವು ನಿಜವಾಗಿಯೂ ಕಾಪಾಡಿಕೊಳ್ಳುತ್ತಿದ್ದೇವೆಯೇ ಎನ್ನುವ ಸಂದೇಹಕ್ಕೆ ಎಡೆ ಮಾಡಿಕೊಟ್ಟಿತು. ಇತ್ತೀಚೆಗೆ ಬಿಎಸ್‌ಎನ್‌ಎಲ್‌ ಕಂಪನಿಯು ಅಂಡಮಾನ್‌ ನಿಕೋಬಾರ್‌ ದ್ವೀಪದಿಂದ ಚೆನ್ನೈ ನಗರಕ್ಕೆ ಸಮುದ್ರದ ಮೂಲಕ ಸಬ್‌ಮರೈನ್‌ ಕೇಬಲ್‌ ಎಳೆಯುವ ಟೆಂಡರ್‌ನಲ್ಲಿ ಚೀನಾ ಕಂಪನಿಗಳು ಭಾಗವಹಿಸಿದ್ದಾಗ, ಭಾರತ ಸರ್ಕಾರ ಇಂತಹ ವಿಚಾರಗಳಲ್ಲಿ ಎಚ್ಚರ ವಹಿಸುವತ್ತ ಕಾರ್ಯನಿರತವಾಗಿದೆ. ಈ ಕೇಬಲ್‌ ವ್ಯವಸ್ಥೆಯ ಮೂಲಕ ಭಾರತದ ಸೂಕ್ಷ್ಮ ಭದ್ರತೆಯ ವಿಚಾರ ಪಡೆದುಕೊಳ್ಳಬಹುದೆಂಬ ಶಂಕೆಯನ್ನು ತಳ್ಳಿಹಾಕುವಂತಿಲ್ಲ. 

ಭಾರತ ಸುಮಾರು 138 ಕೋಟಿ ಜನಸಂಖ್ಯೆ ಇರುವ ದೇಶ. ಇದು ಹೆಗ್ಗಳಿಕೆಯೂ ಹೌದು, ಸಮಸ್ಯೆಯೂ ಹೌದು.  ಇಂಥ ದೇಶದಿಂದ ಚೀನಾದೇಶಕ್ಕೆ ರಫ್ತಾಗುತ್ತಿರುವುದು ಕೇವಲ 10 ಬಿಲಿಯನ್‌ ಡಾಲರ್‌ ಅಷ್ಟೆ. ಆದರೆ ಚೀನಾದಿಂದ ನಾವು ಆಮದು ಮಾಡಿಕೊಳ್ಳುತ್ತಿರುವುದು 61 ಬಿಲಿಯನ್‌ ಡಾಲರ್‌. ಇದರೊಂದಿಗೆ  ತುಲನೆ ಮಾಡಿದರೆ ಶೇ. 16 ಅಷ್ಟೆ. ಕೆಲವು ಅಂದಾಜಿನ ಪ್ರಕಾರ ಭಾರತ ಚೀನಾಕ್ಕೆ ರಫ್ತು ಮಾಡಬಹುದಾದ ಸಾಮರ್ಥ್ಯ ಸುಮಾರು 100 ಬಿಲಿಯನ್‌ ಡಾಲರ್‌ ಇದೆಯಂತೆ.  ಅದರಲ್ಲಿ ಮುಖ್ಯವಾಗಿ ಚಿನ್ನಾಭರಣಗಳು, ಮಾಹಿತಿ ತಂತ್ರಜಾnನ, ವಜಾÅಭರಣಗಳು, ಔಷಧಗಳು ಮುಖ್ಯವಾಗಿವೆ. ಇದೇಕೆ ಸಾಧ್ಯವಿಲ್ಲ ಎನ್ನಬಹುದು. ನಾವು ಈ ವಿಚಾರದಲ್ಲಿ ಇನ್ನೂ ಅಪ್‌ಡೇಟ್‌ ಆಗಿಲ್ಲ.  ಇಂದೂ ಕೂಡ ನಾವು ಬ್ರಿಟಿಷ್‌ ವಸಾಹತುಶಾಹಿ ಸರ್ಕಾರದೊಂದಿಗೆ ವ್ಯವಹರಿಸುವ ರೀತಿಯಲ್ಲಿ ಚೀನಾದ ಜೊತೆ ವ್ಯವಹಾರ ಮಾಡುತ್ತಿದ್ದೇವೆ. ಕಚ್ಚಾವಸ್ತುವನ್ನು ಕಳುಹಿಸಿ, ಸಿದ್ಧವಸ್ತುವನ್ನು ಆಮದು ಮಾಡಿಕೊಳ್ಳುವುದು. ಬಳ್ಳಾರಿಯಿಂದ ಗಣಿಗಾರಿಕೆ ಮಾಡಿ ಚೀನಾಕ್ಕೆ ಕಳುಹಿಸಿ, ಅಲ್ಲಿಂದ ಅದೇ ವಸ್ತುನಿಂದ ತಯಾರಿಸಿದ ಯಂತ್ರೋಪಕರಣಗಳನ್ನು ಆಮದು ಮಾಡಿಕೊಳ್ಳುವುದು. ಹೀಗೆ ನಡೆಯುತ್ತಲೇ ಇದೆ.   ಇದಕ್ಕೆ ಕಾರಣ ನಾವು ಚೀನಾದೊಂದಿಗಿನ ವ್ಯಾಪಾರ ಸಂಬಂಧವನ್ನು ಸರಿಯಾಗಿ ಹದಗೊಳಿಸದಿರುವುದು. ವಿಶ್ವ ವ್ಯಾಪಾರ ಒಡಂಬಡಿಕೆಯನ್ನು ಸರಿಯಾಗಿ ಬಳಸಿಕೊಳ್ಳದೇ ಇರುವುದು.

ಜೊತೆಗೆ ಚೀನಾದ ವ್ಯವಸ್ಥೆಯಲ್ಲಿರುವ ಭದ್ರವಾದ ವ್ಯಾಪಾರ ಬಂಧನಗಳು ಮತ್ತು ಸರ್ಕಾರವೇ ತನ್ನ ಹಣಕಾಸಿನ ಮೌಲ್ಯ ಕುಸಿತದಲ್ಲಿಟ್ಟುಕೊಳ್ಳುವುದಾಗಿದೆ.

ಇವೆಲ್ಲದ ನಡುವೆ, ಭಾರತ ತನ್ನ ತಯಾರಿಕಾ ಆರ್ಥಿಕ ವ್ಯವಸ್ಥೆಯಲ್ಲಿ ಇನ್ನೂ ಬಹಳ ಕೆಳಮಟ್ಟದಲ್ಲಿದ್ದು ಕೇವಲ ಸೇವೆಯಲ್ಲಿ ಮಾತ್ರ ಮುನ್ನುಗ್ಗುತ್ತಿದ್ದೇವೆ. ಚೀನಾದ ಆರ್ಥಿಕತೆಯ ಶೇ.35 ರಷ್ಟು ವಸ್ತುಗಳನ್ನು ತಯಾರಿಸುವಲ್ಲಿ ಮತ್ತು  ದೇಶದೇಶಗಳಿಗೆ ಮಾರಾಟ ಮಾಡುವಲ್ಲಿ ಯಶಸ್ಸು ಕಂಡಿದೆ. ಚೀನಾದ ಒಟ್ಟು ಆರ್ಥಿಕತೆಯೇ ಭಾರತಕ್ಕಿಂತ ಸುಮಾರು 5 ಪಟ್ಟು ದೊಡ್ಡದಾಗಿದೆ. ವಿಜಾnನ ಮತ್ತು ತಂತ್ರಜಾnನದಲ್ಲಿ ತನ್ನದೇ ದೊಡ್ಡ ಸಾಧನೆ ಮಾಡಿ ಅಮೇರಿಕಾಕ್ಕೆ ಸೆಡ್ಡು ಹೊಡೆಯಲು ನಿಂತಿದೆ. ಅಲ್ಲಿ ತಯಾರಿಕಾ ಘಟಕಗಳಲ್ಲಿ ಕೆಲಸ ಮಾಡುವವರು ಅಲ್ಲಿಯೇ ತಂಗಿದ್ದು ದುಡಿಯುವವರಾಗಿದ್ದಾರೆ. ಭಾರತದಲ್ಲಿ ಕಾರ್ಖಾನೆಗಳಿಗೆ ಅಥವಾ ಮಾಹಿತಿ ತಂತ್ರಜಾnನದಲ್ಲಿ ಕೆಲಸ ಮಾಡುವವರು ಮನೆಯಿಂದ ಆಫೀಸಿಗೆ ಹೋಗಿ ಬರಲು  ಸುಮಾರು 3 ರಿಂದ 4 ಗಂಟೆ ವ್ಯಯಿಸುತ್ತಾರೆ. ಆದರೆ ಅದೇ ಚೀನಾದಲ್ಲಿ ಅಲ್ಲಿಯೇ ವಾಸ ಮಾಡಿ ದುಡಿಯುವ ವರ್ಗವೇ ಹೆಚ್ಚು. ಆ್ಯಪೆಲ್‌ ಕಂಪನಿಯ ಐಪ್ಯಾಡ್‌ ಮತ್ತು ಐಫೋನ್‌ ತಯಾರಿಸುವ ಫಾಕ್ಸ್‌ಕಾರ್ನ್ ಕಂಪನಿಯು 10 ಲಕ್ಷ ಜನರನ್ನು ಒಂದೇ ಕಡೆ ಇರಿಸಿ ದುಡಿಮೆಯಲ್ಲಿ ತೊಡಗಿಸಿಕೊಳ್ಳುತ್ತದೆ. 

ಚೀನಾದ ಕಾರ್ಖಾನೆಯಲ್ಲಿ ದುಡಿಯುವವನ ಸರಾಸರಿ ವಿದ್ಯಾಭ್ಯಾಸ ಕನಿಷ್ಟ 10 ವರ್ಷ ಎಂದಾದರೆ, ಭಾರತದಲ್ಲಿ ಇದು 4 ವರ್ಷವಾಗಿದೆ. ಚೀನಾದೇಶದ ಆರ್ಥಿಕತೆಯ ಶೇ.2 ರಷ್ಟು ಹಣವನ್ನು ಸಂಶೋದನೆಗೆ ( ಆರ್‌ಎನ್‌ಡಿ) ತೊಡಗಿಸುತ್ತದೆ. ಭಾರತದಲ್ಲಿ ಇದು ಕೇವಲ 1% ಕ್ಕಿಂತ ಕಡಿಮೆಯಾಗಿರುವುದು ನಮ್ಮ ತಂತ್ರಜಾnನದ ತೊಡಕಿಗೆ ಕಾರಣವಾಗಿದೆ. ಚೈನಾ ಇದಾಗಲೇ ಜಗತ್ತಿನ ಶ್ರೇಷ್ಟ ವೈಜಾnನಿಕ ಸಂಶೋಧನಾ ಕೇಂದ್ರಗಳನ್ನೂ, ವಿಶ್ವವಿದ್ಯಾಲಯಗಳನ್ನೂ ಹೊಂದಿದೆ. ಬೀಜಿಂಗ್‌ ಜಿನಾಮಿಕ್ಸ್‌ನಂಥ ಕೇಂದ್ರಗಳು ಜೈವಿಕ ತಂತ್ರಜಾnನದಲ್ಲಿ ಅಮೇರಿಕವನ್ನೇ ಮೀರಿಸುವ ಹಂತದಲ್ಲಿದೆ. ಯುದ್ಧ ಸಾಮಗ್ರಿಗಳನ್ನು ಯುದ್ಧವಿಮಾನಗಳನ್ನು ಮತ್ತು ಯುದ್ಧದ ಹಡಗನ್ನು ತಾವೇ ಕಟ್ಟಿಕೊಳ್ಳುವುದಾಗಿದೆ. ಭಾರತ ಈ ಎಲ್ಲಾ ವಿಚಾರಗಳಲ್ಲಿಯೂ ಇನ್ನೂ ಆಮದನ್ನೇ ಅವಲಂಬಿಸಿದೆ. ನಮ್ಮ ಆರ್ಥಿಕತೆಯ ಶೇ.2 ರಷ್ಟಾದರೂ ಸಂಶೋಧನೆಯಲ್ಲಿ ತೊಡಗಿಸಿ, ನಮ್ಮೊಳಗಿರುವ ಅಪಾರವಾದ ಆಂತರಿಕ ಶಕ್ತಿ ಮತ್ತು ಯುವ ಪೀಳಿಗೆಯನ್ನು ಸರಿಯಾಗಿ ಬಳಸಿಕೊಂಡಲ್ಲಿ ಇನ್ನು ಒಂದೇ ದಶಕದಲ್ಲಿ ನಾವು ವಿಜಾnನ ತಂತ್ರಜಾnನ ಮತ್ತು ತಯಾರಿಕೆಯಲ್ಲಿ ಮುಂದುವರಿಯಬಹುದು. ತಂತ್ರಜಾnನದ ಆವಿಷ್ಕಾರವನ್ನು ಪದಾರ್ಥದ ರೂಪದಲ್ಲಿ ಹೊರತಂದಲ್ಲಿ ಜಗತ್ತೇ ನಮಗೆ ಮಾರುಕಟ್ಟೆಯಾಗುವುದರಲ್ಲಿ ಸಂದೇಹಲ್ಲ. 

ವಿದೇಶಾಂಗ ನೀತಿ, ಮಾರುಕಟ್ಟೆ ನೀತಿ ಒಂದೇ..
ಚೀನಾದ ವಿದೇಶಾಂಗ ನೀತಿ, ಮಾರುಕಟ್ಟೆಯ ನೀತಿಗೂ ಸಾಮ್ಯವಿದೆ. ಆದರೆ ನಮ್ಮಲ್ಲಿ ಈ ರೀತಿ ಇಲ್ಲ.  ಪ್ರತಿಯೊಂದ ದೇಶದಲ್ಲಿ ಈ ವಿಚಾರದಲ್ಲಿ ಗೊಂದಲ ಇರುತ್ತದೆ.  ಇದು ಎಕಾನಮಿಗೆ ಪೂರಕವಾಗಿರುವುದು ಅಪರೂಪ.  ಹೇಗೆಂದರೆ- ಪಾಕಿಸ್ತಾನದ ಜೊತೆ ಯುದ್ಧ ಮಾಡುವುದಾದರೆ ಅದರೊಂದಿಗಿನ  ವ್ಯವಹಾರ ಏನು ಮಾಡಬೇಕು? ಆಮದು, ರಫ್ತುಗಳನ್ನು ಏನು ಮಾಡಬೇಕು. ಈ ವಿಚಾರವಾಗಿ ಗೊಂದಲ ಇರುತ್ತದೆ.  ಚೀನಾಕ್ಕೆ  ಈ ರೀತಿಯ ಗೊಂದಲವಿಲ್ಲ.  ಇದು ಹೇಗೆಂದರೆ ಚೀನಾ ಭಾರತದಿಂದ ಆಮದು ಮಾಡಿಕೊಳ್ಳುವ ವಸ್ತುಗಳನ್ನು ಬಾಯ್ಕಟ್‌ ಮಾಡಬಹುದು. ಆದರೆ ಭಾರತಕ್ಕೆ ಈ ರೀತಿ ಇಲ್ಲ. ನಮ್ಮ ಇಡೀ ಎಕಾನಮಿಯ ವೇಗದಲ್ಲಿ ಚೀನಾದ ಪಾಲೂ ಇದೆ. ಜಗತ್ತು ಬ್ರಾಂಡೆಡ್‌ ವಸ್ತುಗಳನ್ನು ಕೊಂಡು ಬದುಕಿದರೆ, ಚೀನಾ ಅಂತಹುದೇ ಕಡಿಮೆ ಬೆಲೆಯ ವಸ್ತುಗಳನ್ನು ಮಾರಾಟ ಮಾಡಿ ಬದುಕುತ್ತಿದೆ ಎಂದರೆ ಇದರ ಸಂಶೋಧನೆ ಮತ್ತು ಅಭಿವೃದ್ಧಿಯ ತಾಕತ್ತು ಹೇಗಿದೆ ಅನ್ನೋದನ್ನು ಗಮನಿಸಬಹುದು. 

ಚೀನಾ ಅಮೇರಿಕಾದ ಅಮೇಜಾನ್‌ ಕಂಪೆನಿಗೆ ಪರ್ಯಾಯ ಎಂಬಂತೆ ಅಲಿಬಾಬ ಶುರುಮಾಡಿದ್ದಾರೆ. ಚೀನಾದಲ್ಲಿರುವ ಇಂಡಂಟ, ವಾಂಡ, ಎಚ್‌ಎಸ್‌ಎನ್‌ ಮುಂತಾದ ಮಲ್ಟಿನ್ಯಾಷನಲ್‌ ಕಂಪೆನಿಗಳು ಜಗತ್ತಿನ ದೈತ್ಯ ಕಂಪೆನಿ ಎಂದೇ ಹೆಸರಾಗಿದೆ. ಯಾವ ಮಟ್ಟಕ್ಕೆ ಎಂದರೆ ಅಮೇರಿಕಾದಲ್ಲಿರುವ ಸೈಂಟಿಫಿಕ್‌ ಆರ್ಗನೈಸೇಷನ್‌ಗಳನ್ನು ಕೊಳ್ಳುತ್ತಿವೆ. ಟ್ರಂಪ್‌ಗೆ ಇದು ದೊಡ್ಡ ತಲೆನೋವಾಗಿದೆ. 

ಇಂಥ ಶಕ್ತಿಯುತ ಚೀನಾ ನಮ್ಮ ಆರ್ಥಿಕ ವ್ಯವಸ್ಥೆಯನ್ನು ಪ್ರತ್ಯಕ್ಷವಾಗಿಯೋ, ಪರೋಕ್ಷವಾಗಿಯೋ ಡ್ರೈವ್‌ ಮಾಡುತ್ತಿದೆ. 

– ಡಾ. ಕೆ.ಸಿ. ರಘು

Advertisement

Udayavani is now on Telegram. Click here to join our channel and stay updated with the latest news.

Next