Advertisement

Checkbounce case: ಆರೋಪಿ ಮಹಿಳೆ ಖುಲಾಸೆ

07:46 PM Mar 28, 2024 | Team Udayavani |

ಮಂಗಳೂರು: ಚೆಕ್‌ಬೌನ್ಸ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯ ಮಹಿಳೆಯನ್ನು ಖುಲಾಸೆಗೊಳಿಸಿ ಕಾಸರಗೋಡು ಸಿಜೆಎಂ ನ್ಯಾಯಾಲಯ ಆದೇಶ ನೀಡಿದೆ.

Advertisement

ಕಾಸರಗೋಡು ತಾಲೂಕಿನ ಬೇಕಲ ಅಂಚೆ, ತಿರುವಕೋಳಿ ಎಂಬಲ್ಲಿನ ನಿವಾಸಿ ವಿವೇಕ್‌ ಬೇಕಲ್‌ (42) ಅವರು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಚೀಫ್‌ ಜ್ಯುಡಿಶಿಯಲ್‌ ಫಸ್ಟ್‌ ಕ್ಲಾಸ್‌ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದಲ್ಲಿ ದ್ವಿತೀಯ ದರ್ಜೆ ಕ್ಲಾರ್ಕ್‌ ಆಗಿ ಕೆಲಸ ನಿರ್ವಹಿಸುತ್ತಿರುವ ರಾಜೇಂದ್ರ ಪ್ರಸಾದ್‌ ಎನ್ನುವವರ ಪತ್ನಿ ಸುರೇಖಾ ಗುಣಗಿ ಎಂಬವರಿಗೆ ಪರಿಚಯದ ನೆಲೆಯಲ್ಲಿ ಒಟ್ಟು 12,45,000 ರೂ. ಸಾಲವನ್ನು ವಿವಿಧ ಸಂದರ್ಭಗಳಲ್ಲಿ ನೀಡಿದ್ದರು. ಇದಕ್ಕೆ ಪ್ರತಿಯಾಗಿ 6,20,000 ರೂ. ಮತ್ತು 6,25,000 ರೂ. ಮೌಲ್ಯದ ಎರಡು ಚೆಕ್‌ ಪಡೆದಿದ್ದರು. ಚೆಕ್‌ಗಳು ಬ್ಯಾಂಕ್‌ನಲ್ಲಿ ಬೌನ್ಸ್‌ ಆಗಿದ್ದು, ಹಣ ವಾಪಾಸು ನೀಡುವಂತೆ ಲಾಯರ್‌ ನೋಟಿಸ್‌ ಕಳುಹಿಸಿದ್ದರೂ ವಾಪಾಸು ನೀಡಿರಲಿಲ್ಲ. ಹಾಗಾಗಿ ಕಾಸರಗೋಡು ಸಿಜೆಎಂ ನ್ಯಾಯಾಲಯದಲ್ಲಿ 2 ಚೆಕ್‌ ಬೌನ್ಸ್‌ ಕೇಸ್‌ಗಳನ್ನು ದಾಖಲಿಸಿದ್ದರು.

ವಾದ- ಪ್ರತಿವಾದಗಳನ್ನು ಆಲಿಸಿದ ನ್ಯಾಯಾಧೀಶರಾದ ಎಂ.ಸಿ.ಆಂತೋನಿ ಅವರು ದೂರುದಾರರು ನ್ಯಾಯಯುತವಾಗಿ ಸಾಲವನ್ನು ದೃಢೀಕರಿಸಲು ವಿಫಲವಾಗಿದ್ದಾರೆ ಎಂದು ತೀರ್ಮಾನಿಸಿ ಆರೋಪಿಯನ್ನು ಖುಲಾಸೆಗೊಳಿಸಿ ಆದೇಶ ನೀಡಿದ್ದಾರೆ. ಆರೋಪಿ ಪರವಾಗಿ ಮಂಗಳೂರಿನ ನ್ಯಾಯವಾದಿ ತಲೆಕಾನ ರಾಧಾಕೃಷ್ಣ ಶೆಟ್ಟಿ ಅವರು ವಾದಿಸಿದ್ದಾರೆ.

 

 

Advertisement
Advertisement

Udayavani is now on Telegram. Click here to join our channel and stay updated with the latest news.

Next