Advertisement

ಕ್ವಾರಂಟೈನ್‌ ಪಾಲನೆ ಪರಿಶೀಲಿಸಿ: ಮಹೇಶ್ವರ ರಾವ್‌

12:30 AM Apr 13, 2020 | Sriram |

ಉಡುಪಿ : ಜಿಲ್ಲೆಯಲ್ಲಿ ಕೋವಿಡ್‌-19 ರೋಗ ಲಕ್ಷಣಕ್ಕೆ ಸಂಬಂಧಿಸಿದಂತೆ ಮನೆ ಹಾಗೂ ಆಸ್ಪತ್ರೆಗಳಲ್ಲಿ ಕ್ವಾರಂಟೈನ್‌ನಲ್ಲಿರುವವರು ಸರಕಾರದ ಮಾರ್ಗಸೂಚಿ ಅನ್ವಯ ನಿಯಮಗಳನ್ನು ಪಾಲಿಸುತ್ತಿರುವ ಬಗ್ಗೆ ಪರಿಶೀಲಿಸುವಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮಹೇಶ್ವರ ರಾವ್‌ ಸೂಚಿಸಿದ್ದಾರೆ.

Advertisement

ಜಿ.ಪಂ. ಸಭಾಂಗಣದಲ್ಲಿ ರವಿವಾರ ನಡೆದ ಕೋವಿಡ್‌-19 ನಿಯಂತ್ರಣ ಪರಿಶೀಲನ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಕ್ವಾರಂಟೈನ್‌ ನಿಯಮಗಳನ್ನು ಸರಿಯಾಗಿ ಪಾಲಿಸುತ್ತಿರುವ ಬಗ್ಗೆ ದಾಖಲೆಗಳನ್ನು ಪರಿಶೀಲನೆ ನಡೆಸಿದರು. ಜಿಲ್ಲೆಯ ಗಡಿ ಪ್ರದೇಶಗಳನ್ನು ಬಿಗಿಗೊಳಿಸುವಂತೆ ಸೂಚಿಸಿದ ಅವರು, ಸರಕು ಸಾಗಣೆ ಮತ್ತುತುರ್ತು ವೈದ್ಯಕೀಯ ನೆರವು ಅಗತ್ಯವಿರುವವರಿಗೆ ಮಾತ್ರ ಜಿಲ್ಲೆಯೊಳಗೆ ಪ್ರವೇಶಕ್ಕೆ ಅನುಮತಿ ನೀಡಿ ಎಂದು ಸೂಚಿಸಿದರು.

ಅನುಮತಿಗೆ ಮನವಿ
ಜಿಲ್ಲೆಯ ಕೋವಿಡ್‌-19 ಸಂಶಯದ ಮಾದರಿಗಳನ್ನು ಪ್ರಸ್ತುತ ಮಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸುತ್ತಿದ್ದು, ವರದಿ ಬರಲು ವಿಳಂಬವಾಗುತ್ತಿದೆ. ಈ ಹಿಂದಿನಂತೆ ಹಾಸನದ ಪ್ರಯೋಗಾಲಯಕ್ಕೆ ಕಳುಹಿಸಲು ಹಾಗೂ ಕೆಎಂಸಿಯಲ್ಲಿ ಪ್ರಯೋಗಾಲಯಕ್ಕೆ ಅನುಮತಿ ದೊರಕಿಸುವಂತೆ ಜಿಲ್ಲಾಧಿಕಾರಿ ಜಿ. ಜಗದೀಶ್‌ ಕೋರಿದರು.ಜಿ.ಪಂ. ಸಿಇಒ ಪ್ರೀತಿ ಗೆಹೊÉàಟ್‌, ಎಸ್ಪಿ ವಿಷ್ಣುವರ್ಧನ್‌, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಕುಂದಾಪುರ ಉಪ ವಿಭಾಗಾಧಿಕಾರಿ ರಾಜು ಉಪಸ್ಥಿತರಿದ್ದರು.

ಸಮಸ್ಯೆಗಳಿದ್ದರೆ ಸಂಪರ್ಕಿಸಿ
ಕಂಟೈನ್‌ಮೆಂಟ್‌ ಯೋಜನೆ ಕುರಿತು ಎಲ್ಲ ಸಿಬಂದಿಗೆ ತರಬೇತಿ ನೀಡುವ ಜತೆಗೆ ಅಗತ್ಯವಿರುವ ಸಿಬಂದಿ ಹಾಗೂ ಇತರ ವ್ಯವಸ್ಥೆಯನ್ನು ಸಿದ್ಧಪಡಿಸಿಕೊಳ್ಳಬೇಕು. ಯಾವುದೇ ತುರ್ತು ಸಮಸ್ಯೆಗಳಿದ್ದಲ್ಲಿ ತಮ್ಮನ್ನು ಸಂಪರ್ಕಿಸುವಂತೆ ಜಿಲ್ಲಾಧಿಕಾರಿಗೆ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next