Advertisement

25 ವರ್ಷ ಮೀರಿದ ಸೇತುವೆ ಪರಿಶೀಲಿಸಿ 

06:00 AM Jul 01, 2018 | |

ಎಡಪದವು/ ಬಂಟ್ವಾಳ: ಮೂಲರಪಟ್ಣ ಸೇತುವೆ ಕುಸಿತ ಪ್ರದೇಶಕ್ಕೆ ಸಚಿವ ಯು.ಟಿ. ಖಾದರ್‌ ಭೇಟಿ ನೀಡಿ, ಪರಿಶೀಲನೆ ನಡೆಸಿ ಎಂಜಿನಿಯರ್‌ಗಳೊಂದಿಗೆ ಚರ್ಚೆ ನಡೆಸಿದ್ದಾರೆ. 25 ವರ್ಷ ಮೀರಿದ ಎಲ್ಲ ಸೇತುವೆಗಳನ್ನು ಪರಿಶೀಲಿಸಿ, ನಿರ್ವಹಣೆ ಮಾಡಬೇಕು. ಆ ಬಳಿಕ ಪರಿತಪಿಸುವುದು ಸರಿಯಲ್ಲ ಎಂದು ಖಾದರ್‌ ಎಂಜಿನಿಯರ್‌ಗಳಿಗೆ ಸ್ಥಳದಲ್ಲೇ ಸೂಚಿಸಿದ್ದಾರೆ. ನೂರಾರು ವರ್ಷ ಬಾಳಬೇಕಾದ ಸೇತುವೆ 35 ವರ್ಷಗಳಲ್ಲಿ ಕುಸಿದಿರುವುದು ಹೇಗೆ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದ ಸಚಿವರು ತನಿಖೆ ನಡೆಸಿ ವರದಿ ನೀಡುವಂತೆ ಸೂಚಿಸಿದರು.

Advertisement

 ಸ್ಥಳಿಯರ ಅಹವಾಲು
ತೂಗುಸೇತುವೆಗೆ ನಿರ್ಮಾಣವಾಗುತ್ತಿರುವ ಸಂಪರ್ಕ ರಸ್ತೆಯ ಸಮೀಪದ ಸುಂದರ ಶೆಟ್ಟಿ ಅವರ ತೋಟದ 20ಕ್ಕೂ ಮಿಕ್ಕಿದ ಅಡಿಕೆ, ತೆಂಗಿನ ಗಿಡಗಳನ್ನು ಕಳೆದ ರಾತ್ರಿ ಕಿಡಿ ಗೇಡಿಗಳು ಕಡಿದು ಹಾನಿ ಮಾಡಿದ್ದು ಸುಂದರ ಅವರು ಸಚಿವರ ಬಳಿ ಅಳಲು  ತೋಡಿಕೊಂಡರು. ಮೂಲರಪಟ್ಣದಿಂದ ಕೊಳತ್ತ ಮಜಲು ತನಕ ತಾತ್ಕಾಲಿಕ ರಸ್ತೆ ನಿರ್ಮಿಸಲು ಉದ್ದೇಶಿಸಲಾಗಿದ್ದು, ಈ ಬಗ್ಗೆ ಖಾಸಗಿ ಜಾಗದವರ ಜೊತೆ ಚರ್ಚಿಸಿ, ಅವರ ಕೃಷಿ ಭೂಮಿಗೆ ಹಾನಿಯಾಗದಂತೆ ನೋಡ ಲಾಗುವುದು. ತೂಗುಸೇತುವೆಯಲ್ಲಿ ಮಕ್ಕಳಿಗೆ ನಡೆದುಕೊಂಡು ಹೋಗಲು ಭಯಪಡುತ್ತಿದ್ದು, ಸುರಕ್ಷತೆ ದೃಷ್ಟಿ ಯಿಂದ ಹೋಂ ಗಾರ್ಡ್‌ಗಳನ್ನು ನಿಯೋಜಿಸಲಾಗುವುದು ಎಂದರು.

ಡಿಸಿ ಶಶಿಕಾಂತ್‌ ಸೆಂಥಿಲ್‌, ಸಹಾಯಕ ಕಮಿಷನರ್‌ ರೇಣುಕಾ ಪ್ರಸಾದ್‌, ತಹಶೀಲ್ದಾರ್‌ ಜಿ. ಸಂತೋಷ್‌, ಪಿಡಬ್ಲ್ಯುಡಿ  ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ವೈ. ಉಮೇಶ ಭಟ್‌, ಜತೆಗಿದ್ದರು.

ಹೊಸ ಸೇತುವೆ:  ಚರ್ಚಿಸಿ ನಿರ್ಧಾರ
ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಸಚಿವರು ಹಳೇ ಸೇತುವೆ ದುರಸ್ತಿಗೆ ಸದ್ಯಕ್ಕೆ ಆರು ಕೋಟಿ ರೂ.ಗಳ ಅಗತ್ಯವಿದ್ದು, ಇಲ್ಲಿ ಮತ್ತೆ ಹೊಸ ಸೇತುವೆ ನಿರ್ಮಿಸಬೇಕೋ ಬೇಡವೋ ಎಂಬ ಬಗ್ಗೆ ಅ ಧಿಕಾರಿಗಳೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು.            ಸಚಿವ ಖಾದರ್‌

Advertisement

Udayavani is now on Telegram. Click here to join our channel and stay updated with the latest news.

Next