Advertisement

Cheque Bounce; ಸಚಿವ ಮಧು ಅವರಿಗೆ ಕೋರ್ಟ್ ನಿಂದ ಭಾರಿ ದಂಡ,ತೆರದಿದ್ದರೆ ಜೈಲು

06:04 PM Dec 29, 2023 | Team Udayavani |

ಬೆಂಗಳೂರು: ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಶುಕ್ರವಾರ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ 6 ಕೋಟಿ 96 ಲಕ್ಷದ 70 ಸಾವಿರ ರೂ. ದಂಡ ವಿಧಿಸಿದ್ದು, ದಂಡ ತೆರಲು ವಿಫಲವಾದಲ್ಲಿ 6 ತಿಂಗಳು ಸೆರೆಮನೆ ವಾಸ ಅನುಭವಿಸಬೇಕು ಎಂದು ತೀರ್ಪು ನೀಡಿದೆ.

Advertisement

2011 ರಲ್ಲಿ ಮಧು ಬಂಗಾರಪ್ಪ ಅವರು ನೀಡಿದ್ದ ಚೆಕ್ ಬೌನ್ಸ್ ಆಗಿತ್ತು. ಅವರ ವಿರುದ್ಧ ರಾಜೇಶ್ ಎಕ್ಸ್ ಪೋರ್ಟ್ ಸಂಸ್ಥೆ ದೂರು ದಾಖಲಿಸಿತ್ತು. ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜೆ.ಪ್ರೀತ್ ತೀರ್ಪು ನೀಡಿದ್ದಾರೆ. 6 ಕೋಟಿ 96 ಲಕ್ಷದ 6 0 ಸಾವಿರ ರೂ. ದಂಡವನ್ನು ದೂರುದಾರ ಕಂಪೆನಿಗೆ ಮತ್ತು 10 ಸಾವಿರ ರೂ.  ದಂಡವನ್ನು ಸರಕಾರಕ್ಕೆ ತೆರಬೇಕು ಎಂದು ತೀರ್ಪಿನಲ್ಲಿ ಹೇಳಲಾಗಿದೆ.

ಮಧು ಬಂಗಾರಪ್ಪ ಅವರು ಕೋರ್ಟ್ ನಲ್ಲಿ 50 ಲಕ್ಷ ರೂ. ನೀಡಿ ಉಳಿದ ಹಣ ಪಾವತಿಸಿಲ್ಲ. ಜನವರಿ 30 ರೊಳಗೆ ದಂಡ ಪಾವತಿಸುವುದಾಗಿ ಮಧು ಬಂಗಾರಪ್ಪ ಅವರು ಮುಚ್ಚಳಿಕೆ ಬರೆದು ನೀಡಿದ್ದು, ಕೋರ್ಟ್ ನಿರಾಕರಿಸಿದೆ.

ಹೆಚ್ಚಿನ ವಿವರ ನಿರೀಕ್ಷಿಸಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next