Advertisement

Karkala ಚೆಕ್‌ ಬೌನ್ಸ್‌ ಪ್ರಕರಣ: ಆರೋಪಿ ದೋಷಮುಕ್ತ

12:48 AM Sep 07, 2024 | Team Udayavani |

ಕಾರ್ಕಳ: ಕೈ ಸಾಲ ಮರು ಪಾವತಿ ವಿಚಾರಕ್ಕೆ ಸಂಬಂಧಿಸಿ ಚೆಕ್‌ ಬೌನ್ಸ್‌ ಪ್ರಕರಣದಲ್ಲಿ ಆರೋಪಿ ಶ್ರೀನಿವಾಸ ಎಂಬವರನ್ನು ದೋಷಮುಕ್ತಗೊಳಿಸಿ ಬೆಳ್ತಂಗಡಿಯ ಪ್ರಥಮ ದರ್ಜೆ ನ್ಯಾಯಾಲಯದ ಮ್ಯಾಜಿಸ್ಟ್ರೇಟ್‌ ತೀರ್ಪು ನೀಡಿದ್ದಾರೆ.

Advertisement

ಬೆಳ್ತಂಗಡಿಯ ಗುರುವಾಯನಕೆರೆಯ ಶಿವಾಜಿ ನಗರದ ಪಡಿವೇಲು ಎಂಬ ವ್ಯಕ್ತಿ ಕಾರ್ಕಳದ ಕುಕ್ಕುಂದೂರು ಗ್ರಾಮದ ಅಯ್ಯಪ್ಪನಗರದ ಶ್ರೀನಿವಾಸ್‌ ವಿರುದ್ಧ ಚೆಕ್‌ ಬೌನ್ಸ್‌ ಕ್ರಿಮಿನಲ್‌ ಪ್ರಕರಣ ದಾಖಲಿಸಿದ್ದರು. ಆರೋಪಿಯು ತನಗೆ ನೀಡಿದ ರೂಪಾಯಿ 10 ಲಕ್ಷ ರೂ. ಮೊತ್ತದ ಚೆಕ್‌ ಅನ್ನು ತಾನು ಬ್ಯಾಂಕಿಗೆ ನಗದೀಕರಣಕ್ಕಾಗಿ ಹಾಜರುಪಡಿಸಿದಾಗ ಅದು ಅಮಾನ್ಯಗೊಂಡಿರುವುದಾಗಿ ಪಡಿವೇಲು ಬೆಳ್ತಂಗಡಿ ಹಿರಿಯ ಸಿವಿಲ್‌ ನ್ಯಾಯಾಲಯ ಹಾಗೂ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದರು.

ಶ್ರೀನಿವಾಸ ತಾನು ಪಡಿವೇಲುರವರಿಂದ ಯಾವುದೇ ಹಣ ಕಾಸು ವ್ಯವಹಾರ ನಡೆಸಿರುವುದಿಲ್ಲ ಮತ್ತು ಆತನಿಂದ ಯಾವುದೇ ಸಾಲವನ್ನು ಪಡೆದಿಲ್ಲ ಹಾಗೂ ಸಾಲ ಮರು ಪಾವತಿ ಬಗ್ಗೆ ಚೆಕ್‌ ನೀಡಿರುವುದಿಲ್ಲ. ಅವರು ಮೋಸದಿಂದ ನನ್ನ ಸಹಿ ಇರುವ ಖಾಲಿ ಚೆಕ್‌ ಅನ್ನು ದುರ್ಬಳಕೆ ಮಾಡಿ ಸುಳ್ಳು ಪ್ರಕರಣ ದಾಖಲಿಸಿರುತ್ತಾರೆ. ಮಾತ್ರವಲ್ಲದೆ ಪಡಿವೇಲು ತನಗೆ 10 ಲಕ್ಷ ರೂ.ಸಾಲ ನೀಡುವಷ್ಟು ಆರ್ಥಿಕವಾಗಿ ಸದೃಢರಾಗಿಲ್ಲ ಎಂದು ನ್ಯಾಯಾಲಯಕ್ಕೆ ಮನದಟ್ಟು ಮಾಡಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶ ಮನು ಬಿ.ಕೆ. ಅವರು ಪ್ರಕರಣವನ್ನು ವಜಾಗೊಳಿಸಿ ಆರೋಪಿಯನ್ನು ಖುಲಾಸೆಗಳಿಸಿದ್ದಾರೆ. ಆರೋಪಿ ಪರ ಕಾರ್ಕಳದ ಹಿರಿಯ ನ್ಯಾಯವಾದಿ ಕೆ. ವಿಜೇಂದ್ರ ಕುಮಾರ್‌ ವಾದ ಮಂಡಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next