Advertisement

ವಾಷಿಂಗ್ಟನ್‌: ಭಾರತೀಯ ದೂತಾವಾಸದ ಟೆಲಿಫೋನ್‌ ಮೂಲಕ ಹಣ ವಂಚನೆ

04:23 PM Mar 05, 2018 | Team Udayavani |

ವಾಷಿಂಗ್ಟನ್‌ : ಇಲ್ಲಿನ ಭಾರತೀಯ ದೂತಾವಾಸದ ಟೆಲಿಫೋನ್‌ ಲೈನ್‌ಗಳನ್ನು ಬಳಸಿಕೊಂಡು ವಂಚಕರು ಅಮೆರಿಕದಲ್ಲಿ ಜನರಿಗೆ ಹಣ ವಂಚನೆ ಮಾಡುತ್ತಿದ್ದಾರೆ; ಆದುದರಿಂದ ಭಾರತೀಯ ದೂತಾವಾಸದ ಟೆಲಿಫೋನ್‌ ಲೈನ್‌ಗಳಿಂದ ಹೊರಟು ಬರುವ ಶಂಕಿತ ಕರೆಗಳ ಬಗ್ಗೆ ತೀವ್ರ ಎಚ್ಚರಿಕೆ ವಹಿಸುವಂತೆ ಸಲಹೆ ನೀಡಲಾಗಿದೆ.

Advertisement

ಈ ವಿಷಯವನ್ನು ಭಾರತೀಯ ದೂತಾವಾಸ ಅಮೆರಿಕ ಸರಕಾರಕ್ಕೂ ತಿಳಿಸಿದೆಯಲ್ಲದೆ ಸ್ವತಃ ತಾನೇ ಖುದ್ದಾಗಿ ಈ ಬಗ್ಗೆ ಆಂತರಿಕ ತನಿಖೆಯನ್ನು ಆರಂಭಿಸಿದೆ. 

ವಾಷಿಂಗ್ಟನ್‌ ನಲ್ಲಿನ ಭಾರತೀಯ ದೂತಾವಾಸದ ಕರೆಗಳೆಂದು ನಂಬಿ ಹಣ ಕಳೆದಕೊಂಡ ಅನೇಕರು ದೂರಿರುವ ಹಿನ್ನೆಲೆಯಲ್ಲಿ ಭಾರತೀಯ ದೂತಾವಾಸ ಜನರಿಗೆ ಎಚ್ಚರಿಕೆ ನೀಡಿದೆ. 

ಆದರೆ ವಂಚಕರು ಭಾರತೀಯ ದೂತಾವಾಸದ ಟೆಲಿಫೋನ್‌ ಲೈನ್‌ಗಳನ್ನು ಹಣ ವಂಚನೆಗಾಗಿ ದುರುಪಯೋಗಿಸುತ್ತಿರುವುದು ಇದೇ ಮೊದಲಲ್ಲ; ಈ ಹಿಂದೆಯೂ ಈ ರೀತಿಯ ಘಟನೆಗಳು ನಡೆದಿದ್ದವು ಎನ್ನಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next