Advertisement
2 ಲಕ್ಷದಿಂದ 25 ಕೋಟಿ ರೂ.ವರೆಗೆ ಹೂಡಿಕೆ ಮಾಡಿರುವವರು 700ಕ್ಕೂ ಅಧಿಕ ಮಂದಿ ಇರುವುದು ಗೊತ್ತಾಗಿದೆ. ಆದರೆ, ಸದ್ಯ 90 ದೂರುಗಳು ಮಾತ್ರ ಬಂದಿದ್ದು, ಇನ್ನಷ್ಟು ಬರುವ ನಿರೀಕ್ಷೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Related Articles
Advertisement
ತಾವು ಹೂಡಿಕೆ ಮಾಡಿರುವ ದಾಖಲೆಗಳ ಜತೆಗೆ ಠಾಣೆ ಎದುರು ಜಮಾಯಿಸುತ್ತಿರುವ ಹೂಡಿಕೆದಾರರು ಕಂಪನಿ ವಿರುದ್ಧ ದೂರು ನೀಡಿ ಮೌಖೀಕವಾಗಿಯೂ ಲೆಕ್ಕ ಹೇಳುತ್ತಿದ್ದಾರೆ. ಅಲ್ಲದೇ, ಕಂಪೆನಿ ವಿರುದ್ದ ದೂರು ನೀಡಿದರೆ ಹಣ ವಾಪಸ್ ಬರುತ್ತದೆಯೇ? ಇಲ್ಲವೇ? ಅಥವಾ ನೇರವಾಗಿ ನ್ಯಾಯಾಲಯದ ಮೊರೆ ಹೋಗಬಹುದಾ ಎಂದು ಠಾಣೆ ಎದುರು ಚರ್ಚಿಸುತ್ತಿದ್ದ ದೃಶ್ಯ ಮಂಗಳವಾರ ಕಂಡು ಬಂತು.
150 ಮಂದಿ ದೂರು: ಸೋಮವಾರ ಒಂದೇ ದಿನ ಸುಮಾರು 65 ಮಂದಿ ಹೂಡಿಕೆದಾರರು ಬನಶಂಕರಿ ಠಾಣೆಗೆ ದೂರು ನೀಡಿದ್ದರು. ಮಂಗಳವಾರ ಇದರ ಸಂಖ್ಯೆ 150ಕ್ಕೆ ಏರಿಕೆಯಾಗಿದೆ. ಕಂಪನಿ ಹೂಡಿಕೆ ಮಾಡಿಸಿಕೊಂಡಿರುವ ಪ್ರಮಾಣ ಮತ್ತು ವಂಚನೆಯ ಪ್ರಮಾಣ ಎಷ್ಟು ಎಂದು ಸರಿಯಾದ ಲೆಕ್ಕ ಸಿಗುತ್ತಿಲ್ಲ. ಮತ್ತೂಂದೆಡೆ ಆರೋಪಿಗಳು ಸರಿಯಾದ ಮಾಹಿತಿ ನೀಡುತ್ತಿಲ್ಲ.
ಇನ್ನು ದೂರುದಾರರು ಹೂಡಿಕೆ ಮಾಡಿದ ಹಣದ ಲೆಕ್ಕ ಹೇಳುತ್ತಿದ್ದಾರೆಯೇ ಹೊರತು ವಾಪಸ್ ಪಡೆದ ಹಣದ ಲೆಕ್ಕ ಹೇಳುತ್ತಿಲ್ಲ. ಹೆಚ್ಚಿನದಾಗಿ ಮೌಖೀಕ ಮೊತ್ತ ಹೇಳುತ್ತಿದ್ದಾರೆ. ಗೊಂದಲ ಮೂಡುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆಯಾ ಠಾಣೆ ವ್ಯಾಪ್ತಿಯಲ್ಲೇ ದೂರು: ಬೆಂಗಳೂರು ಸೇರಿದಂತೆ ಹೊರ ಜಿಲ್ಲೆಗಳಲ್ಲಿ ನೆಲೆಸಿರುವ ಹೂಡಿಕೆದಾರರೂ ಬನಶಂಕರಿ ಠಾಣೆಗೆ ದೌಡಾಯಿಸುತ್ತಿದ್ದಾರೆ. ಆದರೆ, ಎಲ್ಲಾ ಭಾಗದವರ ದೂರುಗಳನ್ನು ದಾಖಲಿಸಿಕೊಳ್ಳಲು, ತನಿಖೆ ನಡೆಸಲು ತಾಂತ್ರಿಕವಾಗಿ ಕೆಲವೊಂದು ತೊಂದರೆಯಾಗುತ್ತದೆ. ಹೀಗಾಗಿ ದೂರುದಾರರು ನೆಲೆಸಿರುವ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸುವಂತೆ ಸೂಚಿಸಲಾಗಿದೆ.
ವಿದೇಶದಲ್ಲೂ ವಂಚನೆ: ಆರೋಪಿಗಳು ಬೆಂಗಳೂರು ಮಾತ್ರವಲ್ಲದೇ, ಮೈಸೂರು, ಉತ್ತರ ಕರ್ನಾಟಕ, ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ವಿದೇಶದಲ್ಲಿ ನೆಲೆಸಿರುವ ಭಾರತೀಯರಿಂದಲೂ ಕೋಟಿಗಟ್ಟಲೇ ಹೂಡಿಕೆ ಮಾಡಿಸಿರುವ ವಿಚಾರ ಬೆಳಕಿಗೆ ಬಂದಿದೆ. ಮೈಸೂರು ಮೂಲದ ಶೆಟ್ಟಿ ಎಂಬುವವರು ಅಮೆರಿಕಾದಲ್ಲಿ ನೆಲೆಸಿದ್ದಾರೆ.
ಇವರಿಗೆ ಪರಿಚಯವಿದ್ದ ನರಸಿಂಹಮೂರ್ತಿ ಹೂಡಿಕೆ ಮಾಡುವಂತೆ ದುಂಬಾಲು ಬಿದ್ದಿದ್ದ. ಇದಕ್ಕೆ ಮಣಿದ ಶೆಟ್ಟಿ ಅವರು ತಮ್ಮ ಸಹೋದರ ಜನಾರ್ದನ ಶೆಟ್ಟಿ ಜತೆ ಸೇರಿಕೊಂಡು 1.18 ಕೋಟಿ ರೂ. ಅನ್ನು ಜುಲೈನಲ್ಲಿ ಹೂಡಿಕೆ ಮಾಡಿದ್ದಾರೆ. ಆದರೆ, ಇದುವರೆಗೂ ಹಣ ವಾಪಸ್ ಬಂದಿಲ್ಲ.
ಬ್ಯಾಂಕ್ ಲೋನ್ ತೆಗೆದು ಕೊಟ್ಟೆ: 13 ವರ್ಷಗಳಿಂದ ನರಸಿಂಹಮೂರ್ತಿ ಪರಿಚಯವಿತ್ತು. ವಿಮೆ ಮಾಡಿಸಿದ್ದೇವು. 10 ವರ್ಷಗಳಿಂದ ವಿಕ್ರಂ ಕಂಪೆನಿಗೆ ಹೂಡಿಕೆ ಮಾಡುವಂತೆ ನಿರಂತರವಾಗಿ ಸಂದೇಶ ಕಳುಹಿಸಿದ್ದ. ಆದರೆ, ಮಣಿದಿರಲಿಲ್ಲ. ಕೆಲ ವರ್ಷಗಳ ಹಿಂದೆ ಹೂಡಿಕೆ ಒಂದೆರಡು ಲಕ್ಷ ಹೂಡಿಕೆ ಮಾಡಿದ್ದೆ. ಆದರೆ, ಮನೆ ಕಟ್ಟುವ ಸಂದರ್ಭದಲ್ಲಿ ಬಡ್ಡಿ ಅಸಲು ಸಮೇತ ಹಣ ವಾಪಸ್ ನೀಡಿದ್ದರು.
ಮನೆ ಕಟ್ಟಿದ ಬಳಿಕ ಮತ್ತೂಮ್ಮೆ ನರಸಿಂಹಮೂರ್ತಿ ಒತ್ತಾಯಿಸಲು ಆರಂಭಿಸಿದ. ಅಲ್ಲದೇ ವಿದೇಶದಲ್ಲಿದ್ದ ನನ್ನ ಸಹೋದರನಿಗೂ ಒತ್ತಾಯಸಿದ್ದ. ಕೊನೆಗೆ ಸಹೋದರನ ಹಣದ ಜತೆಗೆ ಬ್ಯಾಂಕ್‌ನಿಂದ 35 ಲಕ್ಷ ರೂ. ಸಾಲ ಪಡೆದು 1.18 ಕೋಟಿ ಹೂಡಿಕೆ ಮಾಡಿದ್ದೇವೆ ಎಂದು ತಮ್ಮ ಅಳಲು ತೋಡಿಕೊಂಡರು ಮೈಸೂರಿನ ಜನಾರ್ದನಶೆಟ್ಟಿ.
ಸಂದೇಶಗಳ ಮೂಲಕ ಆಮಿಷ: ಒಮ್ಮೆ ಹೂಡಿಕೆ ಮಾಡಿದರೆ 6 ತಿಂಗಳ ಅಥವಾ ಒಂದು ವರ್ಷದವರಗೆ ಹಣ ಹಿಂದಿರುಗಿಸುವುದಿಲ್ಲ. ಬಳಿಕವೇ ಹಣ ವಾಪಸ್ ಕೊಡುತ್ತಾರೆ. ಇನ್ನು ಪರಿಚಯಸ್ಥ ಗ್ರಾಹಕರಿಗೆ ಸಂದೇಶಗಳ ಮೂಲಕ ಷೇರು ಖರೀದಿಗೆ ಒತ್ತಾಯಿಸುತ್ತಿದ್ದರು.
ಹೊಸ ಸ್ಕೀಂಗಳ ಬಗ್ಗೆ ಮಾಹಿತಿ ನೀಡುತ್ತಿದ್ದರು. ಉದಾಹರಣೆಗೆ ಆಯಿಲ್ ಅಥಲಾ ಚಿನ್ನ ಖರೀದಿ ಮಾಡಿ ಅಲ್ಲಿಯೇ ಬಿಡಬಹುದು. ಅಗತ್ಯಬಿದ್ದಾಗ ಮಾರಾಟ ಮಾಡಬಹುದು. ಹೀಗೆ ಹತ್ತಾರು ಸ್ಕೀಂಗಳ ಬಗ್ಗೆ ಸಂದೇಶಗಳಲ್ಲಿ ಮಾಹಿತಿ ನೀಡಿ ಹೂಡಿಕೆ ಮಾಡಿಸುತ್ತಿದ್ದರು ಎಂಬುದು ಗೊತ್ತಾಗಿದೆ ಎಂದು ಅಧಿಕಾರಿ ವಿವರಿಸಿದರು.