ಹೊಡೆಯುವ ಶಿಕ್ಷೆ ನೀಡಬೇಕು ಎಂದು ವಚನಗಳ ಮೂಲಕ ಹೇಳಿದ್ದರು ಎಂದು ಬಿಜೆಪಿ ರಾಜ್ಯ ಒಬಿಸಿ ಮೋರ್ಚಾ ಉಪಾಧ್ಯಕ್ಷ ರಾಜಗೋಪಾಲರೆಡ್ಡಿ ಮುದಿರಾಜ ಹೇಳಿದರು.
Advertisement
ನಗರದ ಎನ್‌ಇಕೆಆರ್‌ಟಿಸಿ ವಿಭಾಗೀಯ ಕಚೇರಿ ಸಭಾಂಗಣದಲ್ಲಿ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಕೋಲಿ ಸಮಾಜ ನೌಕರರ ಸಂಘ ಹಮ್ಮಿಕೊಂಡಿದ್ದ ನಿಜಶರಣ ಅಂಬಿಗರ ಚೌಡಯ್ಯ ಅವರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮೌಡ್ಯ, ಅಪಚಾರ, ಡಾಂಬಿಕತನ, ದ್ರೋಹ ಮಾಡುವ ಮನಸ್ಸುಗಳನ್ನು ತಮ್ಮ ವಚನಗಳ ಮೂಲಕ ಪರಿವರ್ತಿಸುವ ಮಾಡುವ ನಿಟ್ಟಿನಲ್ಲಿ ಭಕ್ತಿಯ ಗೆರೆ ದಾಟುವ ಲೊಟ್ಟಿ ಮೂಗಳ ಕಂಡರೆ ಎಡಗಾಲು ಪಾದರಕ್ಷೆ ತಗೊಂಡು ಲಟಲಟನೆ ಹೊಡೆದು ಬಿಡಬೇಕು ಎನ್ನುವ ದಿಟ್ಟತನದ ತೀರ್ಪು ನೀಡಿದ್ದಾರೆ. ಇದನ್ನು ನಾವು ಅರ್ಥ ಮಾಡಿಕೊಂಡು ಹೆಜ್ಜೆ ಇಡಬೇಕಿದೆ ಎಂದು ಹೇಳಿದರು.
Related Articles
ಹೇಳಿದರು.
Advertisement
ವಿಧಾನ ಪರಿಷತ್ ಮಾಜಿ ಸದಸ್ಯ ಅಲ್ಲಂಪ್ರಭು ಪಾಟೀಲ ಮಾತನಾಡಿ, ಕೋಲಿ ಸಮಾಜದ ಯುವಕರು ಈಗ ತುಂಬಾ ಚಟುವಟಿಕೆಯಿಂದ ಇದ್ದಾರೆ. ಸಾರಿಗೆ ಸಂಸ್ಥೆಯಲ್ಲಿ ಬಹಳಷ್ಟು ಜನರಿದ್ದಾರೆ. ಅವರಲ್ಲಿ ಒಗ್ಗಟ್ಟು ಇದೆ ಎಂದು ಹೇಳಿದರು.
ಎನ್‌ಇಕೆಆರ್‌ಟಿಸಿ ಅಧ್ಯಕ್ಷ ಇಲಿಯಾಸ್ ಬಾಗವಾನ್ ಸೇಠ್ಠ್… ಕಾರ್ಯಕ್ರಮ ಉದ್ಘಾಟಿಸಿದರು. ಸಂಸ್ಥೆ ವಿಭಾಗ 2ರ ಅಧಿಕಾರಿ ಎ.ಎಚ್. ನಾಗೇಶ, ಕಾಂಗ್ರೆಸ್ ಹಿರಿಯ ಮುಖಂಡ ಶಿವಶರಣಪ್ಪ ಕೋಬಾಳ, ಜಿಪಂ ಮಾಜಿ ಸದಸ್ಯೆ ಶೋಭಾ ಬಾಣಿ, ಶಂಕರ ಕಟ್ಟಿಸಂಗಾವಿ, ವಿಜಯಕುಮಾರ ಹದಗಲ್, ವಿವೇಕಾನಂದಗೌಡ ಪಾಟೀಲ, ಸಿದ್ದಪ್ಪ ಪಾಲ್ಕಿ,ಚಂದ್ರಕಾಂತ ಗದಗಿ ಇದ್ದರು. ಭೀಮಾಶಂಕರ ಹಾಗರಗುಂಡಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಘದ ಅಧ್ಯಕ್ಷ ಸುಭಾಶ್ಚಂದ್ರ ಆಲೂರು ಸ್ವಾಗತಿಸಿದರು. ಕೆ.ಬಿ.ಅಂಬಿಗೇರ ವಂದಿಸಿದರು. ಪ್ರಧಾನ ಕಾರ್ಯದರ್ಶಿ ಪಾಂಡುರಂಗ
ಅಪಚಂದ ಹಾಗೂ ಇತರರು ಇದ್ದರು. ಇದಕ್ಕೂ ಮುನ್ನ ಅಂಬಿಗರ ಚೌಡಯ್ಯನವರ ಭಾವಚಿತ್ರದ ಮೆರವಣಿಗೆ ನಡೆಯಿತು.