Advertisement

ಅಪರೂಪದ ಕೆಂಗಂದು ಬಣ್ಣದ ಜೇನುಬಾಕ ಪ್ರತ್ಯಕ್ಷ

03:34 PM Oct 31, 2020 | Suhan S |

ಮೈಸೂರು: ಉಷ್ಣವಲಯದ ತೆರೆದ ಕಾಡು ಪ್ರದೇಶದಲ್ಲಿ ವಾಸಿಸುವ ಚೇಸ್‌ನಟ್‌ -ಹೆಡೆಡ್‌-ಬೀ ಈಟರ್‌ ಪಕ್ಷಿ ಇದೇ ಮೊದಲ ಬಾರಿಗೆ ಮೈಸೂರಿನಲ್ಲಿ ಕಾಣಿಸಿಕೊಂಡಿದೆ.

Advertisement

ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಕಾಣಿಸಿ ಕೊಂಡಿರುವ ಈ ಪಕ್ಷಿ ಬೀ-ಈಟರ್‌ ಪಕ್ಷಿ ಪ್ರಬೇಧದದಲ್ಲಿ ಈ ಪಕ್ಷಿಯೂ ಒಂದಾಗಿದ್ದು,ತೀರ ಅಪರೂಪ ಪಕ್ಷಿಯಾಗಿದೆ. ಆಹಾರವಾಗಿ ಜೇನು ನೊಣ, ಮಿಡತೆ ಹಾಗೂ ಕೀಟಗಳನ್ನು ಭಕ್ಷಿಸುತ್ತದೆ.

ಪಕ್ಷಿಯ ತಲೆ ಮತ್ತು ಕುತ್ತಿಗೆಯ ಬಳಿ ದಟ್ಟಕೆಂಗಂದು ಬಣ್ಣವಿರುವುದರಿಂದ ಹಾಗೂ ಜೇನು ನೊಣವನ್ನು ಪ್ರಧಾನ ಆಹಾರ ಮಾಡಿ ಕೊಂಡಿರುವುದರಿಂದ ಚೇಸ್‌ನಟ್‌ – ಹೆಡೆಡ್‌-ಬೀ ಈಟರ್‌ ಎಂದು ಕರೆಯಲಾಗುತ್ತದೆ. ಮೈಸೂರು ಭಾಗದಲ್ಲಿ ಲಾರ್ಜ್‌ ಬ್ಲೂé ಗ್ರೀನ್‌ ಬೀ ಈಟರ್‌ ಹಾಗೂ ಸ್ಮಾಲ್‌ ಗ್ರೀನ್‌ -ಬೀ ಈಟರ್‌ ಪಕ್ಷಿಗಳು ಹೆಚ್ಚು ಕಾಣಿಸಿಕೊಳ್ಳುವುದು ಸಾಮಾನ್ಯವಾಗಿತ್ತು.

ಆದರೆ, ಇದೇ ಮೊದಲ ಬಾರಿಗೆ ಚೇಸ್‌ನಟ್‌ -ಹೆಡೆಡ್‌-ಬೀ ಈಟರ್‌ (ಅಪರೂಪದ  ಕೆಂಗಂದು ಬಣ್ಣದ ಜೇನುಬಾಕ) ಪಕ್ಷಿ  ವೀಕ್ಷಕರಿಗೆ ಕಾಣಿಸಿಕೊಂಡಿದೆ.

ಮೈಸೂರು ಸಂಸ್ಥಾಪಕರ ಸಂಸ್ಮರಣೆ :

Advertisement

ಮೈಸೂರು: ಮೈಸೂರು ಕನ್ನಡ ವೇದಿಕೆ ವತಿಯಿಂದ ಶುಕ್ರವಾರ ಪತ್ರಕರ್ತರ ಭವನದಲ್ಲಿ ಆಯೋಜಿಸಿದ್ದ ಮೈಸೂರು ಸಂಸ್ಥಾಪಕರ ಸ್ಮರಣೆ ಕಾರ್ಯಕ್ರಮವನ್ನು ದೂರದರ್ಶನದ ವಿಶ್ರಾಂತ ಹೆಚ್ಚುವರಿ ಮಹಾ ನಿರ್ದೇಶಕ ಡಾ.ಮಹೇಶ್‌ ಜೋಶಿ ಉದ್ಘಾಟಿಸಿದರು.

ಈ ವೇಳೆ ಮಾಜಿ ಶಾಸಕ ಎಂ.ಕೆ.ಸೋಮಶೇಖರ್‌ ಅವರು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ 8 ಮಂದಿ ಸಾಧಕರಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್‌ ಮತ್ತು ಜಯಚಾಮರಾಜ ಒಡೆಯರ್‌ ಪ್ರಶಸ್ತಿ ನೀಡಿ ಸನ್ಮಾನಿಸಿದರು. ಆಯುರ್‌ಮಟಂ ಸಂಸ್ಥಾಪಕ ಡಾ. ಮನು ಬಿ. ಮೆನನ್‌, ಕ್ರೀಡಾ ತರಬೇತುದಾರ ಶ್ರೀಶಾಭಟ್‌, ಹಿರಿಯ ಪತ್ರಕರ್ತ ಕಮಲ್‌ ಗೋಪಿನಾಥ್‌, ರೋಟರಿ ಸಂಘದ ಅಧ್ಯಕ್ಷ ರಾಜೀವ್‌, ಪತ್ರಕರ್ತ ಬಿ. ರಾಘವೇಂದ್ರ, ಸಮಾಜ ಸೇವಕ ಎಚ್‌.ದಾಸ್‌, ಶಿವಂ ಅಕಾಡೆಮಿಯ ಡಿ.ಆಯುಷ್ಮಾನ್‌, ಚಿರಬಾಂಧವ್ಯ ಟ್ರಸ್ಟ್‌ನ ಕೆ.ಆರ್‌.ರವಿಕುಮಾರ್‌ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಈ ವೇಳೆ ಉಪಮೇಯರ್‌ ಪಿ. ಶ್ರೀಧರ್‌, ಇತಿಹಾಸ ತಜ್ಞ ಪ್ರೊ.ನಂಜರಾಜೇ ಅರಸು, ಮೈಸೂರು ಕನ್ನಡವೇದಿಕೆ ಅಧ್ಯಕ್ಷ ಎಸ್‌.ಬಾಲಕೃಷ್ಣ, ಹೋರಾಟಗಾರ ನಾಲಾಬೀದಿ ರವಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next