Advertisement
ಗುರುವಾರನ ವಿಶ್ವ ಚಾಂಪಿಯನ್ ಆಸ್ಟ್ರೇಲಿಯದ 381ರನ್ನುಗಳ ಬೃಹತ್ ಮೊತ್ತಕ್ಕೆ ದಿಟ್ಟ ಜವಾಬು ನೀಡಿದ ಬಳಿಕ ಬಾಂಗ್ಲಾ ಕೇವಲ 48 ರನ್ನುಗಳ ಸೋಲನುಭವಿಸಿತ್ತು.“ನಾನು ಸ್ಕೋರ್‌ಬೋರ್ಡ್ ಗಮನಿಸುತ್ತಲೇ ಆಡುತ್ತಿದ್ದೆ. ಮೊದಲ 30 ಓವರ್‌ಗಳಲ್ಲಿ 180-200 ರನ್ ಗಳಿಸಿದ್ದೇ ಆದರೆ ಕೊನೆಯ 20 ಓವರ್‌ಗಳಲ್ಲಿ ಮೇಲುಗೈ ಸಾಧಿಸಬಹುದಿತ್ತು. ನಮ್ಮ ಆಟ ಬಿರುಸಿನಿಂದಲೇ ಕೂಡಿತ್ತು. ಹೀಗಾಗಿ 20 ಓವರ್‌ಗಳಲ್ಲಿ ಟಿ20 ಶೈಲಿಯಲ್ಲಿ ಬ್ಯಾಟ್ ಬೀಸಿದರೆ 160-170 ರನ್ ಪೇರಿಸುವುದು ಭಾರೀ ಸವಾಲಾಗುತ್ತಿರಲಿಲ್ಲ. ಇದಕ್ಕೆ ನಾವು ಪ್ರಯತ್ನಿಸಿದೆವಾದರೂ ಯಶಸ್ವಿ ಆಗಲಿಲ್ಲ’ ಎಂದು ತಮಿಮ್ ಹೇಳಿದರು.