ಬೆರ್ಹಾಂಪುರ: ಬೀದಿ ನಾಯಿಗಳು ಅಪ್ರಾಪ್ತ ಮಕ್ಕಳ ಮೇಲೆ ದಾಳಿ ಮಾಡಿದ ಹಲವಾರು ಘಟನೆಗಳನ್ನು ನೀವು ನೋಡಿರಬಹುದು, ಇದು ಖಂಡಿತವಾಗಿಯೂ ಬೆಚ್ಚಿ ಬೀಳಿಸುವ ಘಟನೆಯಾಗಿದ್ದು, ಬೀದಿ ನಾಯಿಗಳ ಹಿಂಡು ಹಿಂಬಾಲಿಸಿದ ನಂತರ ಸ್ಕೂಟರ್ ನಲ್ಲಿದ್ದ ಇಬ್ಬರು ಮಹಿಳೆಯರು ಮತ್ತು ಅವರ ಮಗು ಕಂಗಾಲಾಗಿ ನಿಂತಿದ್ದ ಕಾರಿಗೆ ಢಿಕ್ಕಿ ಹೊಡೆದು ನೆಲಕ್ಕೆ ಬಿದ್ದಿದ್ದಾರೆ, ಆದರೆ ಅದೃಷ್ಟವಷಾತ್ ಮೂವರೂ ಪಾರಾಗಿದ್ದಾರೆ. ಒಡಿಶಾದ ಬೆರ್ಹಾಂಪುರದ ಗಾಂಧಿನಗರ ಲೇನ್ 7 ರಿಂದ ಆಘಾತಕಾರಿ ಘಟನೆ ವರದಿಯಾಗಿದೆ. ಸಿಸಿಟಿವಿ ದ್ರಶ್ಯಾವಳಿಯ ವಿಡಿಯೋ ವೈರಲ್ ಆಗಿದೆ.
ಘಟನೆಯಲ್ಲಿ ಮೂವರಿಗೂ ಹಲವು ಗಾಯಗಳಾಗಿವೆ. ಸ್ಥಳದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸಂಪೂರ್ಣ ಘಟನೆ ಹಾಗೂ ಅಪಘಾತದ ದೃಶ್ಯ ಸೆರೆಯಾಗಿದೆ. ಗಾಯಾಳುಗಳನ್ನು ಸುಪ್ರಿಯಾ, ಸಸ್ಮಿತಾ ಮತ್ತು ಆಕೆಯ ಮಗು ಎಂದು ಗುರುತಿಸಲಾಗಿದೆ.
“ನಾವು ಬೆಳಗ್ಗೆ 6 ಗಂಟೆಗೆ ದೇವಸ್ಥಾನಕ್ಕೆ ಹೋಗುತ್ತಿದ್ದಾಗ ಸುಮಾರು ಆರರಿಂದ ಎಂಟು ನಾಯಿಗಳು ನಮ್ಮನ್ನು ಹಿಂಬಾಲಿಸಲು ಪ್ರಾರಂಭಿಸಿದವು. ಆಗ, ಸ್ಕೂಟರ್‌ನ ವೇಗವನ್ನು ಹೆಚ್ಚಿಸಲು ನಾನು ನಿರ್ಧರಿಸಿದೆ, ಇಲ್ಲದಿದ್ದರೆ ನಾಯಿಗಳು ಹಿಂಬದಿಯಲ್ಲಿದ್ದವಳನ್ನು ಕಚ್ಚುತ್ತಿದ್ದವು ಎಂದು ಗಾಯಗೊಂಡ ಮಹಿಳೆ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಏತನ್ಮಧ್ಯೆ, ಪಟ್ಟಣದಲ್ಲಿ ಗಂಭೀರ ಪ್ರಮಾಣದಲ್ಲಿ ಕಂಡುಬರುವ ಬೀದಿ ನಾಯಿಗಳ ಹಾವಳಿಯನ್ನು ಪಳಗಿಸಲು ಬರ್ಹಾಂಪುರ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಯ ಭಾಗವಾಗಿ ಸ್ಥಳೀಯ ನಿವಾಸಿಗಳು ಕಠಿಣ ಕ್ರಮಕ್ಕಾಗಿ ಒತ್ತಾಯಿಸಿದ್ದಾರೆ.