ಸಿಎ(ಚಾರ್ಟೆರ್ಡ್ ಅಕೌಂಟೆಂಟ್) ರಾಜೇಶ್ ಅಗರ್ ವಾಲ್ ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಮಂಗಳವಾರ ಬಂಧಿಸಿದ್ದಾರೆ.
ಹಣ ಅವ್ಯವಹಾರ ಮತ್ತು ಕಪ್ಪು ಹಣದ ದಂಧೆಯಲ್ಲಿ ಶಾಮೀಲಾಗಿರುವ ಆರೋಪದಲ್ಲಿ ರಾಜೇಶ್ ಅಗರ್ ವಾಲ್ ಅವರನ್ನು ಬಂಧಿಸಲಾಗಿದೆ
ಎಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಐಎಎನ್ ಎಸ್ ಗೆ ತಿಳಿಸಿದ್ದಾರೆ.
Advertisement
ಎಸ್ ಕೆ ಜೈನ್ ಮತ್ತು ವಿಕೆ ಜೈನ್ ಸಹೋದರರ ನೆರವಿನೊಂದಿಗೆ ಕಪ್ಪು ಹಣ ದಂಧೆಯಲ್ಲಿ ಅಗರ್ ವಾಲ್ ತೊಡಗಿರುವುದಾಗಿ ಇಡಿ(ಜಾರಿನಿರ್ದೇಶನಾಲಯ) ಅಧಿಕಾರಿಗಳು ವಿವರಿಸಿದ್ದು, ಜೈನ್ ಸಹೋದರರನ್ನು ಮಾರ್ಚ್ 20ರಂದು ಬಂಧಿಸಲಾಗಿತ್ತು.