Advertisement

‘ಏಕ್ ಲವ್ ಯಾ’ಮೇಲೆ ರೀಷ್ಮಾ ನಿರೀಕ್ಷೆ

11:22 AM Feb 24, 2022 | Team Udayavani |

ರೀಷ್ಮಾ ನಾಣಯ್ಯ- ಈ ಹೆಸರು ಕನ್ನಡ ಚಿತ್ರರಂಗದಲ್ಲಿ ಎರಡ್ಮೂರು ವರ್ಷಗಳಿಂದ ಕೇಳಿಬರುತ್ತಲೇ ಇತ್ತು. ಅದಕ್ಕೆ ಸರಿಯಾಗಿ ರೀಷ್ಮಾ ಕೂಡಾ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಲೇ ಇದ್ದರು. ಆದರೆ, ಆಕೆಯ ಯಾವ ಸಿನಿಮಾಗಳು ಕೂಡಾ ಬಿಡುಗಡೆಯಾಗಿರಲಿಲ್ಲ. ಈಗ ರೀಷ್ಮಾ ಎಕ್ಸೈಟ್‌ ಆಗಿದ್ದಾರೆ. ಅವರ ಮೊದಲ ಸಿನಿಮಾ ಇಂದು ಬಿಡುಗಡೆಯಾಗುತ್ತಿದೆ. ಅದು “ಏಕ್‌ ಲವ್‌ ಯಾ’.

Advertisement

ಪ್ರೇಮ್‌ ನಿರ್ದೇಶನದ “ಏಕ್‌ ಲವ್‌ ಯಾ’ ಚಿತ್ರ ಇಂದು ತೆರೆ ಕಂಡಿದೆ. ಈ ಮೂಲಕ ರೀಷ್ಮಾ ಕೂಡಾ ತೆರೆಮೇಲೆ ಅಧಿಕೃತವಾಗಿ ಲಾಂಚ್‌ ಆಗುತ್ತಿದ್ದಾರೆ. ಸಹಜವಾಗಿಯೇ ರೀಷ್ಮಾ ಎಕ್ಸೆಟ್‌ ಆಗಿದ್ದಾರೆ. ಅದಕ್ಕೆ ಕಾರಣ ಪ್ರೇಮ್‌ ನಿರ್ದೇಶನ. ದೊಡ್ಡ ಗ್ಯಾಪ್‌ನ ನಂತರ ಪ್ರೇಮ್‌ ಔಟ್‌ ಅಂಡ್‌ ಔಟ್‌ ಲವ್‌ಸ್ಟೋರಿ ಸಿನಿಮಾ ಮಾಡಿದ್ದು, ಈಗಾಗಲೇ ಚಿತ್ರದ ಹಾಡುಗಳು ಹಿಟ್‌ ಆಗಿವೆ. ಈ ಮೂಲಕ ಸಿನಿಮಾದ ನಿರೀಕ್ಷೆ ಕೂಡಾ ಹೆಚ್ಚಿದೆ. ಎಲ್ಲರ ಕಣ್ಣು ಈಗ ಸಿನಿಮಾ ಮೇಲೆ ಇರುವುದರಿಂದ ಜನ ಹೇಗೆ ಸ್ವೀಕರಿಸುತ್ತಾರೋ ಎಂಬ ಕಾತರ ಕೂಡಾ ರೀಷ್ಮಾಗಿದೆ.

ಇದಲ್ಲದೇ “ಪೊಗರು’ ನಂತರ ನಂದಕಿಶೋರ್‌ ನಿರ್ದೇಶಿಸುತ್ತಿರುವ ಈ ಚಿತ್ರದಲ್ಲಿ ಶ್ರೇಯಸ್‌ ಹೀರೋ. ಈ ಚಿತ್ರದಲ್ಲಿ ರೀಷ್ಮಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಈಗಾಗಲೇ ಬಹುತೇಕ ಚಿತ್ರೀಕರಣ ಮುಗಿದಿದೆ. ಈ ಚಿತ್ರದಲ್ಲೂ ರೀಷ್ಮಾ ಪಾತ್ರ ವಿಭಿನ್ನವಾಗಿದೆಯಂತೆ.

ಇವತ್ತು ಬೇರೆ ಬೇರೆ ಭಾಷೆಯ ಚಿತ್ರರಂಗದಲ್ಲಿ ಬಿಝಿಯಾಗಿರುವ ಅದೆಷ್ಟೋ ನಾಯಕಿ ನಟಿಯರಿಗೆ ಮೊದಲ ಅವಕಾಶ ಕಲ್ಪಿಸಿರೋದು ಮಾಡೆಲಿಂಗ್‌ ಹಾಗೂ ಕಾಲೇಜಿನಲ್ಲಿ ನಡೆಸುವ ಬ್ಯೂಟಿ ಕಾಂಪಿಟೇಶನ್‌.

ರೀಷಾಗೂ “ಏಕಲವ್ಯ’ ಚಿತ್ರದಲ್ಲಿ ಅವಕಾಶ ನೀಡಿದ್ದು ಬ್ಯೂಟಿ ಕಾಂಪಿಟೇಶನ್‌. ರೀಷಾ ಭಾಗವಹಿಸಿದ್ದ ಬ್ಯೂಟಿ ಕಾಂಪಿಟೇಶನ್‌ವೊಂದನ್ನು ನೋಡಿದ ಪ್ರೇಮ್‌, ಆಡಿಷನ್‌ ಮಾಡಿ ಚಿತ್ರಕ್ಕೆ ನಾಯಕಿಯನ್ನಾಗಿ ಆಯ್ಕೆ ಮಾಡಿದರಂತೆ. ಚಿತ್ರಕ್ಕೆ ಆಯ್ಕೆಯಾದ ನಂತರ ರೀಷ್ಮಾ ನಾಗತಿಹಳ್ಳಿ ಟೆಂಟ್‌ ಸ್ಕೂಲ್‌ಗೆ ಸೇರಿ ನಟನೆಯ ತರಬೇತಿ ಕಲಿತರಂತೆ. ಜೊತೆಗೆ ಪ್ರೇಮ್‌ ಕೂಡಾ ತಮ್ಮ ಚಿತ್ರಕ್ಕೆ ಬೇಕಾದ ದೃಶ್ಯಗಳ ರಿಹರ್ಸಲ್‌ ನಡೆಸಿ ರೆಡಿ ಮಾಡಿಸಿದರಂತೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next