Advertisement

ಚಾರ್ಮಾಡಿ ಘಾಟ್ ಗೆ ತ್ಯಾಜ್ಯ ಸುರಿದವರಿಂದಲೇ ತ್ಯಾಜ್ಯ ತೆರವು

05:18 PM Oct 14, 2021 | Team Udayavani |

ಕೊಟ್ಟಿಗೆಹಾರ: ಚಾರ್ಮಾಡಿ ಅರಣ್ಯದಲ್ಲಿ ತ್ಯಾಜ್ಯ ತಂದು ಸುರಿದವರಿಂದಲೇ ತ್ಯಾಜ್ಯ ತೆರವು ಮಾಡಿಸಿದ ಘಟನೆ ಚಾರ್ಮಾಡಿ ಘಾಟ್ ನಲ್ಲಿ ಗುರುವಾರ ನಡೆದಿದೆ.

Advertisement

ಕಡೂರು ಮೂಲದ ತರಕಾರಿ ವಾಹನವೊಂದು ಮಂಗಳೂರಿನಲ್ಲಿ  ತರಕಾರಿ ವ್ಯಾಪಾರ ಮಾಡಿ ಉಳಿದ ಕೊಳೆತು ಹೋದ ತರಕಾರಿಗಳನ್ನು ಹಿಂದಿರುಗುವ ವೇಳೆ ಚಾರ್ಮಾಡಿ ಘಾಟ್ ನಲ್ಲಿ ತರಕಾರಿ ತ್ಯಾಜ್ಯ ವನ್ನು ಸುರಿದಿದ್ದಾರೆ.

ಉಜಿರೆ ಕಡೆಗೆ ಹೋಗುತ್ತಿದ್ದ ಮೂಡಿಗೆರೆಯ ಧರ್ಮಸ್ಥಳ ವಿಪತ್ತು ನಿರ್ವಹಣಾ ತಂಡದ ಕಸಾಪ ಹೋಬಳಿ ಸಂಯೋಜಕ ಪ್ರವೀಣ್ ಪೂಜಾರಿ ಇದನ್ನು ಗಮನಿಸಿ ತರಕಾರಿ ತ್ಯಾಜ್ಯ ಸುರಿಯುತ್ತಿದ್ದವರಿಂದಲೇ ತೆರವು ಮಾಡಿಸಿದ್ದಾರೆ. ಕಸವನ್ನು ಎಲ್ಲೆಂದರಲ್ಲಿ ಎಸೆಯಬೇಡಿ. ಇದರಿಂದ ಸಾಂಕ್ರಾಮಿಕ ರೋಗಗಳು ಹೆಚ್ಚುತ್ತವೆ. ಅರಣ್ಯ ಪ್ರದೇಶ ಮಲೀನಗೊಳ್ಳುತ್ತವೆ. ಎಲ್ಲೆಂದರಲ್ಲಿ ಕಸ ಎಸೆಯಬೇಡಿ ಎಂದು ತರಕಾರಿ ವಾಹನದವರಿಗೆ ಎಚ್ಚರಿಕೆ ನೀಡಿ ಕಳಿಸಲಾಯಿತು.

ಅರಣ್ಯ ಇಲಾಖೆ‌ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ತ್ಯಾಜ್ಯ ತಂದು ಸುರಿಯುವವರ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ‌.

Advertisement

Udayavani is now on Telegram. Click here to join our channel and stay updated with the latest news.

Next