Advertisement
ಈಗಾಗಲೇ ಶಿರಾಡಿ ಘಾಟಿ ರಸ್ತೆ ಕುಸಿತದಿಂದ ಅಲ್ಲಿ ಸಂಪೂರ್ಣ ಸಂಚಾರ ನಿರ್ಬಂಧಿಸಲಾಗಿದ್ದು, ಚಾರ್ಮಾಡಿ ಹಾಗೂಸಂಪಾಜೆ ಮೂಲಕ ರಸ್ತೆ ಅನಿವಾರ್ಯ ವಾಗಿತ್ತು. ಇದೀಗ ಚಾರ್ಮಾಡಿ ರಸ್ತೆಯ ದ.ಕ. ವಿಭಾಗದಲ್ಲಿ 6ನೇ ತಿರುವಿನಲ್ಲಿ ಕುಸಿತ ಭೀತಿ ಉಂಟಾದ್ದರಿಂದ ತತ್‌ಕ್ಷಣ ಉಭಯ ಜಿಲ್ಲಾಧಿಕಾರಿಗಳು ರಾತ್ರಿ ಸಂಚಾರವನ್ನು ನಿರ್ಬಂಧಿಸಿದ್ದಾರೆ.
ಮಣ್ಣು ತೆರವು ಮಾಡಲಾಗುತ್ತಿದೆ. ಮರಳಿನ ಚೀಲ ಕಸಿತ ಪ್ರದೇಶದಲ್ಲಿ ಅಳವಡಿಸುವ ಕಾರ್ಯ ಬಹುತೇಕ ಪೂರ್ಣಗೊಂಡಿದೆ. ಶಾಶ್ವತ ಕಾಮಗಾರಿಗೆ ಅಂದಾಜು ಪಟ್ಟಿ ತಯಾರಿಸಿ ಸರಕಾರಕ್ಕೆ ಕಳುಹಿಸಲಾಗುವುದು ಎಂದು ರಾಷ್ಟ್ರೀಯ ಹೆದ್ದಾರಿ ಇಲಾಖೆಯ ದ.ಕ. ಜಿಲ್ಲಾ ವಿಭಾಗದ ಎಇಇ ಕೃಷ್ಣ ಕುಮಾರ್ ತಿಳಿಸಿದ್ದಾರೆ.