Advertisement
ಬಸ್ ಢಿಕ್ಕಿಯಾದ ಸ್ಥಳದಲ್ಲಿ ಆಳವಾದ ಪ್ರದೇಶವಿದ್ದು, ಪ್ರಯಾಣಿಕರು ಸ್ವಲ್ಪದರಲ್ಲೇ ಅಪಾಯದಿಂದ ಪಾರಾಗಿದ್ದಾರೆ. ಢಿಕ್ಕಿಯ ರಭಸಕ್ಕೆ ತಡೆಗೋಡೆ ಕುಸಿದಿದೆ. ಸ್ಥಳದಲ್ಲಿ ಬಣಕಲ್ ಪೊಲೀಸರು ತಾತ್ಕಾಲಿಕವಾಗಿ ಬ್ಯಾರಿಕೇಡ್ ಅಳವಡಿಸಿದ್ದಾರೆ.
ಚಾರ್ಮಾಡಿ ಘಾಟಿ ಹತ್ತನೇ ತಿರುವಿನ ಸಮೀಪ ಉಡುಪಿಗೆ ತೆರಳುತ್ತಿದ್ದ ಕೆಎಸ್ಸಾರ್ಟಿಸಿ ಬಸ್ ಮತ್ತು ಶಿವಮೊಗ್ಗ ಕಡೆ ಸಾಗುತ್ತಿದ್ದ ಕಾರು ಮುಖಾಮುಖಿ ಢಿಕ್ಕಿ ಹೊಡೆದಿದ್ದು ಕಾರಿನಲ್ಲಿದ್ದವರು ಅಲ್ಪಸ್ವಲ್ಪ ಗಾಯಗಳೊಂದಿಗೆ ಪ್ರಾಣಪಾಯದಿಂದ ಪಾರಾಗಿದ್ದಾರೆ. ಘಾಟಿ ಪರಿಸರದಲ್ಲಿ ಮಂಜು ಕವಿದ ವಾತಾವರಣ ಹಾಗೂ ಮಳೆ ಇತ್ತು.
Related Articles
Advertisement