Advertisement

ಚಾರ್ಮಾಡಿ: ಸುಟ್ಟು ಕರಕಲಾದ ಕಾರು; ನಾಲ್ವರು ಪಾರು

03:49 PM Dec 19, 2021 | Team Udayavani |

ಚಿಕ್ಕಮಗಳೂರು: ಚಾರ್ಮಾಡಿ ಘಾಟ್ ನ ಮಲಯ ಮಾರುತ ಬಳಿ ಬೆಂಕಿ ಹೊತ್ತಿ ಕಾರೊಂದು ಸುಟ್ಟು ಕರಕಲಾದ ಘಟನೆ ಭಾನುವಾರ ನಸುಕಿನ 2 ಗಂಟೆ  ಸಮಯದಲ್ಲಿ ನಡೆದಿದೆ.

Advertisement

ಮಂಗಳೂರಿನ ದೇರಳಕಟ್ಟೆಯಿಂದ ಜಾವಗಲ್ ಗೆ ಪ್ರವಾಸಕ್ಕೆ ತೆರಳುವಾಗ  ಘಟನೆ ನಡೆದಿದ್ದು, ಕಾರಿನಲ್ಲಿದ್ದ ನಾಲ್ವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮಹೇಂದ್ರ ಲೋಗನ್ ಕಾರು ಸಂಪೂರ್ಣ ಸುಟ್ಟು ಕರಕಲಾಗಿದೆ. ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಬಣಕಲ್ ಸಬ್ ಇನ್ಸ್ಪೆಕ್ಟರ್ ಗಾಯತ್ರಿ ಮತ್ತು ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಮೂಡಿಗೆರೆ ತಾಲ್ಲೂಕಿನ ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next