ಕಠ್ಮಂಡು: ಇಂಡೋ-ಫ್ರೆಂಚ್ ಸರಣಿ ಹಂತಕ ಚಾರ್ಲ್ಸ್ ಶೋಭರಾಜ್ ಬಿಡುಗಡೆಗೆ ನೇಪಾಳದ ಸುಪ್ರೀಂ ಕೋರ್ಟ್ ಆದೇಶ ನೀಡಿದೆ.
ವಯಸ್ಸಿನ ಆಧಾರದಲ್ಲಿ ಚಾರ್ಲ್ಸ್ ಶೋಭರಾಜ್ ಅವರನ್ನು ಬಿಡುಗಡೆ ಮಾಡಲಾಗಿದೆ ಎಂದು ಕೋರ್ಟ್ ಹೇಳಿದೆ. ಇಬ್ಬರು ಅಮೇರಿಕನ್ ಪ್ರವಾಸಿಗರನ್ನು ಕೊಂದ ಆರೋಪದ ಮೇಲೆ ಚಾರ್ಲ್ಸ್ 2003 ರಿಂದ ನೇಪಾಳದ ಜೈಲಿನಲ್ಲಿದ್ದರು. ಈ ನಡುವೆ ಬಿಡುಗಡೆಗೆ ಆದೇಶ ನೀಡಿದ ಸುಪ್ರೀಂ ಕೋರ್ಟ್ ಬಿಡುಗಡೆಯಾದ 15 ದಿನಗಳಲ್ಲಿ ಅವರನ್ನು ಗಡಿಪಾರು ಮಾಡುವಂತೆಯೂ ಕೋರ್ಟ್ ಆದೇಶಿಸಿದೆ.
ಭಾರತೀಯ ಮತ್ತು ವಿಯೆಟ್ನಾಂನ ಪೋಷಕರನ್ನು ಹೊಂದಿದ ಶೋಭರಾಜ್, 1975 ರಲ್ಲಿ ನಕಲಿ ಪಾಸ್ ಪೋರ್ಟ್ ಬಳಸಿ ನೇಪಾಳಕ್ಕೆ ಬಂದಿದ್ದ ಇಲ್ಲಿ ಅಮೆರಿಕನ್ ಪ್ರಜೆಯಾದ ಕೋನಿ ಜೋ ಬೊರೊಂಜಿಚ್ ಮತ್ತು ಅವನ ಕೆನಡಾದ ಗೆಳತಿ ಲಾರೆಂಟ್ ಕ್ಯಾರಿಯರ್ ಎಂಬ ಇಬ್ಬರನ್ನು ಕೊಂದು ತಲೆಮರೆಸಿಕೊಂಡಿದ್ದ ಶೋಭರಾಜ್ ಬರೋಬ್ಬರಿ 28 ವರ್ಷದ ಬಳಿಕ 2003ರಲ್ಲಿ ಬಂದನವಾಗಿತ್ತು. ಸದ್ಯ 19 ವರ್ಷಗಳ ಜೈಲು ವಾಸ ಅನುಭವಿಸಿದ ಆರೋಪಿಯನ್ನು ವಯಸ್ಸಿನ ಆಧಾರದ ಮೇಲೆ ಬಿಡುಗಡೆಗೊಳಿಸಲು ನೇಪಾಳದ ಸುಪ್ರೀಂ ಕೋರ್ಟ್ ಆದೇಶ ನೀಡಿದ್ದು ಬಿಡುಗಡೆಯಾದ 15 ದಿನಗಳಲ್ಲಿ ಅವರನ್ನು ಗಡಿಪಾರು ಮಾಡುವಂತೆಯೂ ಕೋರ್ಟ್ ಆದೇಶಿಸಿದೆ.
ಇದನ್ನೂ ಓದಿ: ಜೋಡೋ ಯಾತ್ರೆಯಲ್ಲಿ ಕೋವಿಡ್ ಪ್ರೋಟೋಕಾಲ್ ಅನುಸರಿಸಬೇಕು: ಕೇಂದ್ರ ಸೂಚನೆ