Advertisement

ಚಾರ್ಕೋಪ್‌ ಕನ್ನಡಿಗರ ಬಳಗ ಕಾಂದಿವಲಿ: ನವರಾತ್ರಿ ಮಹಾಪೂಜೆ

04:17 PM Sep 27, 2017 | |

ಮುಂಬಯಿ: ಚಾರ್‌ಕೋಪ್‌ ಕನ್ನಡಿಗರ ಬಳಗದ 18ನೇ ವಾರ್ಷಿಕೋತ್ಸವ, ಶಾರದಾ ಮಹಾಪೂಜೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವು ಸೆ. 24ರಂದು ಕಾಂದಿವಲಿ ಪಶ್ಚಿಮದ ಸೆಕ್ಟರ್‌ ನಂಬರ್‌-6ರಲ್ಲಿರುವ ಹರಿಯಾಣ ಭವನದಲ್ಲಿ ಜರಗಿತು.

Advertisement

ಧಾರ್ಮಿಕ ಕಾರ್ಯಕ್ರಮವಾಗಿ ಬೆಳಗ್ಗೆ 8 ರಿಂದ ಪೂಜೆ, ಬಳಗದ ಭಜನ ಮಂಡಳಿಯವರಿಂದ ಭಜನೆ, ಪೂರ್ವಾಹ್ನ 10ರಿಂದ ಮಂಗಳಾರತಿ, ತೀರ್ಥ ಪ್ರಸಾದ ವಿತರಣೆ, ಪೂರ್ವಾಹ್ನ 11 ರಿಂದ ಪ್ರಶಸ್ತಿ ಪ್ರದಾನ, ಗೌರವಾರ್ಪಣೆ, ಸಭಾ ಕಾರ್ಯಕ್ರಮ, ಮಧ್ಯಾಹ್ನ 1ರಿಂದ ಭೋಜನ ಹಾಗೂ ಅಪರಾಹ್ನ 2ರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ನೂರಾರು ಸಂಖ್ಯೆಯಲ್ಲಿ ತುಳು-ಕನ್ನಡಿಗರು, ಸದಸ್ಯ ಬಾಂಧವರು ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

ಬಳಗ ಗೌರವಾಧ್ಯಕ್ಷ ಹಾಗೂ ಸಂಸದ ಗೋಪಾಲ್‌ ಸಿ. ಶೆಟ್ಟಿ ಹಾಗೂ ಸಂಸ್ಥೆಯ ಅಧ್ಯಕ್ಷ ಮಂಜುನಾಥ ಜಿ. ಬನ್ನೂರು ಅವರ ನೇತೃತ್ವದಲ್ಲಿ ನಡೆದ ಈ ಶಾರದಾ ಮಹಾಪೂಜೆಯಲ್ಲಿ ಕಲಾಜಗತ್ತು ವಿಜಯ ಕುಮಾರ್‌ ಶೆಟ್ಟಿ, ಸಂಸ್ಥೆಯ ಗೌರವ ಪ್ರಧಾನ ಕಾರ್ಯದರ್ಶಿ ರಘುನಾಥ ಎನ್‌. ಶೆಟ್ಟಿ, ಗೌರವ ಕೋಶಾಧಿಕಾರಿ ಗೌರಿ ಡಿ. ಪಣಿಯಾಡಿ, ಜತೆ ಕಾರ್ಯದರ್ಶಿಗಳಾದ ವಿಜಯ ಡಿ. ಪೂಜಾರಿ ಮತ್ತು ವಸಂತಿ ಯು. ಸಾಲ್ಯಾನ್‌, ಉಪಾಧ್ಯಕ್ಷರಾದ ಕೃಷ್ಣ ಟಿ. ಅಮೀನ್‌ ಮತ್ತು ಎಂ. ಕೃಷ್ಣ ಎನ್‌. ಶೆಟ್ಟಿ, ಜತೆ ಕೋಶಾಧಿಕಾರಿಗಳಾದ ಸದಾಶಿವ ಸಿ. ಪೂಜಾರಿ ಮತ್ತು ಲತಾ ವಿ. ಬಂಗೇರ, ಟ್ರಸ್ಟಿಗಳಾದ ಜಯ ಸಿ. ಶೆಟ್ಟಿ, ಭಾಸ್ಕರ ಬಿ. ಸರಪಾಡಿ, ಎಂ. ಎಸ್‌. ರಾವ್‌, ಸಂಚಾಲಕರು, ವಿವಿಧ ಉಪಸಮಿತಿಗಳ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರ ನೇತೃತ್ವದಲ್ಲಿ ಸಮಾರಂಭವು ಜರಗಲಿದ್ದು, ತುಳು-ಕನ್ನಡಿಗರು ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿ

ದರು. ಸಾಂಸ್ಕೃತಿಕ ಕಾರ್ಯಕ್ರಮವಾಗಿ ಸಂಸ್ಥೆಯ ಸದಸ್ಯ ಬಾಂಧವರಿಂದ, ಮಕ್ಕಳಿಂದ ನೃತ್ಯ ವೈವಿಧ್ಯ ನಡೆಯಿತು. 

Advertisement

Udayavani is now on Telegram. Click here to join our channel and stay updated with the latest news.

Next