ಮುಂಬಯಿ: ಚಾರ್ಕೋಪ್ ಕನ್ನಡಿಗರ ಬಳಗದ ಮಹಿಳಾ ವಿಭಾಗದ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ವಾರ್ಷಿಕ ಕುಂಕುಮಾರ್ಚನೆ ಮತ್ತು ಅರಸಿನ ಕುಂಕುಮ ಕಾರ್ಯಕ್ರಮವು ಜ. 27 ರಂದು ಸಂಜೆ ಬಳಗದ ಸಭಾಗೃಹದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರಗಿತು.
ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಪದ್ಮಾವತಿ ಬಿ. ಶೆಟ್ಟಿ ಮತ್ತು ಸಂಚಾಲಕಿಯಳಾದ ಶಾಂತಾ ಭಟ್ ಇವರ ನೇತೃತ್ವದಲ್ಲಿ ಜರಗಿದ ಈ ಕಾರ್ಯಕ್ರಮಕ್ಕೆ ಭಾರತಿ ರಾವ್ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಸೇರಿದ್ದ ಸುಮಂಗಳೆಯರಿಂದ ಕುಂಕುಮಾರ್ಚನೆ ಮತ್ತು ಲಲಿತಾ ಸಹಸ್ರ ನಾಮಾರ್ಚನೆ ಪಠಿಸಲಾಯಿತು. ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಬಳಗದ ಮಹಿಳಾ ವಿಭಾಗದ ಕಾರ್ಯದರ್ಶಿ ಪದ್ಮಾವತಿ ನಾಯಕ್ ಮತ್ತು ಸದಸ್ಯೆರಾದ ರಾಜೀವಿ ಕೋಟ್ಯಾನ್, ಚೇತನಾ ಶೆಟ್ಟಿ, ವನಜಾ ಶೆಟ್ಟಿ, ರಾಜ್ ಕುಮಾರಿ ಶೆಟ್ಟಿ, ಸುಮಿತ್ರಾ ಕಾಂಚನ್, ಲಕ್ಷಿ¾ ಆಚಾರ್ಯ, ವನಜಾ ಕಾಂಚನ್, ಯಮುನಾ ಸಾಲ್ಯಾನ್ ಹಾಗೂ ಬಳಗದ ಸಹ ಕೋಶಾಧಿಕಾರಿ ಲತಾ ಬಂಗೇರ ಮತ್ತು ಸಾಂಸ್ಕೃತಿಕ ಕಾರ್ಯದರ್ಶಿ ರೂಪಾ ಭಟ್ ಮತ್ತು ತನುಜಾ ಭಟ್ ಮತ್ತು ಬಳಗದವರು ಸಹಕರಿಸಿದರು.
ವಿಜಯಲಕ್ಷಿ¾ ಶೆಟ್ಟಿ, ರಜನಿ ಶೆಟ್ಟಿ, ರಾಜೇಶ್ವರಿ ಶೆಟ್ಟಿ ಮತ್ತು ಅವರ ಸಹವರ್ತಿಗಳು ಲಘು ಉಪಾಹಾರವನ್ನು ಆಯೋಜಿಸಿದ್ದರು. ಬಳಗದ ಅಧ್ಯಕ್ಷರಾದ ಮಂಜುನಾಥ ಬನ್ನೂರು, ಕಾರ್ಯದರ್ಶಿ ರಘನಾಥ ಎನ್ ಶೆಟ್ಟಿ ಮತ್ತು ವಿಶ್ವಸ್ಥರಾದ ಎಂ. ಎನ್. ರಾವ್ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಉಪಾಧ್ಯಕ್ಷರಾದ ಕೃಷ್ಣ ಅಮೀನ್ ಮತ್ತು ಕೃಷ್ಣ ಶೆಟ್ಟಿ ಈ ಕಾರ್ಯಕ್ರಮಕ್ಕೆ ಸಹಕರಿಸಿದರು.
ವಿಶ್ವಸ್ಥರಾದ ಎಂ. ಎನ್. ರಾವ್ ಅವರು ಉಪಯುಕ್ತ ಸಲಹೆ ನೀಡಿದರು. ಅರಸಿನ ಕುಂಕುಮಕ್ಕೆ ಆಗಮಿಸಿದ್ದ ಪ್ರತಿಯೊಬ್ಬ ಮಹಿಳೆಯರಿಗೂ ಮಹಿಳಾ ವಿಭಾಗದ ವತಿಯಿಂದ ಅರಸಿನ ಕುಂಕುಮ ಹಣೆಗೆ ಹಚ್ಚಿ, ಹೂ ಮತ್ತು ಎಳ್ಳುಂಡೆ ನೀಡಲಾಯಿತು. ಪ್ರತಿಯೊಬ್ಬ ಮಹಿಳೆಗೂ ಬಳಗದ ವತಿಯಿಂದ ಕೊಡುಗೆಗಳನ್ನು ನೀಡಿ ಬೀಳ್ಕೊಡಲಾಯಿತು. ತುಳು-ಕನ್ನಡಿಗ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.