Advertisement
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ಹೋಟೆಲ್ ಮಾಲಿಕರು, ಕಲ್ಯಾಣ ಮಂಟಪಗಳುಹಾಗೂ ಸಿನಿಮಾ ಮಂದಿರಗಳ ಮಾಲಿಕರೊಂದಿಗೆ ಸೋಮವಾರ ನಡೆದ ಕೋವಿಡ್ ನಿಯಂತ್ರಣ ಸಭೆಯಲ್ಲಿ ಅವರು ಮಾತನಾಡಿದರು. ಕಳೆದ ಬಾರಿ ಕೋವಿಡ್ ಸೋಂಕು ನಿಯಂತ್ರಣದಲ್ಲಿ ಜಿಲ್ಲೆ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿತ್ತು. ಪ್ರಸ್ತುತ ಜಿಲ್ಲೆಯ ಪರಿಸ್ಥಿತಿ ಇತರೆ ಜಿಲ್ಲೆ, ರಾಜ್ಯಗಳಿಗೆ ಹೊರತಾಗಿಲ್ಲ. ಕೋವಿಡ್ ಸೋಂಕು ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಈ ನಿಟ್ಟಿನಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ತಿಳಿಸಿದರು.
Related Articles
Advertisement
ಸ್ವಯಂ ನಿಯಂತ್ರಣ: ಜಿಲ್ಲೆಯ ಎಲ್ಲ ವರ್ತಕರು, ಲಾರಿ, ಆಟೋ ಮಾಲಿಕರು ಹಾಗೂ ಚಾಲಕರು, ಖಾಸಗಿ ಬಸ್‌ಮಾಲಿಕರು ತಾಲೂಕುಮಟ್ಟದ ಸಂಘಗಳ ಸಭೆ ಕರೆದುಕೋವಿಡ್ ಶಿಷ್ಟಾಚಾರ ಆದೇಶ, ಪಾಲನೆ ನಿಯಮಗಳ ಬಗ್ಗೆ ಸೂಚನೆ ನೀಡಬೇಕು. ಹೊರಗೆ ಅನಾವಶ್ಯಕವಾಗಿಓಡಾಡಬಾರದು. ಸ್ವಯಂ ನಿಯಂತ್ರಣಗಳನ್ನು ನಾವೇ ಹಾಕಿಕೊಳ್ಳಬೇಕು. ಕೋವಿಡ್ ಲಸಿಕೆ ನಮ್ಮ ಜೀವರûಾ ಕವಚವಾಗಿದ್ದು, 45 ವರ್ಷ ತುಂಬಿದ ಎಲ್ಲರೂ ಲಸಿಕೆ ಹಾಕಿಸಿಕೊಳ್ಳಬೇಕು ಎಂದರು.
ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಂ.ಸಿ. ರವಿ, ಸಣ್ಣ ಕೈಗಾರಿಕೆಗಳ ಸಂಘದ ಜಿಲ್ಲಾಧ್ಯಕ್ಷರಾದಜಯಸಿಂಹ, ಜಿಲ್ಲೆಯ ವಿವಿಧ ಹೋಟೆಲ್, ಸಿನಿಮಾಮಂದಿರಗಳ ಮಾಲಿಕರು ಸಭೆಯಲ್ಲಿ ಹಾಜರಿದ್ದರು.
ಕಚೇರಿಗಳಿಗೆ ಅನಗತ್ಯ ಭೇಟಿ ನೀಡಬೇಡಿ: ಡಾ|ರವಿ :
ಕೋವಿಡ್ 2ನೇ ಅಲೆ ತೀವ್ರವಾಗಿ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾ ಹಾಗೂ ತಾಲೂಕು ಮಟ್ಟದ ಕಚೇರಿಗಳಿಗೆ ಸಾರ್ವಜನಿಕರು ಅನಗತ್ಯವಾಗಿ ಭೇಟಿ ನೀಡದಂತೆ ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಮನವಿ ಮಾಡಿದ್ದಾರೆ. ಕೋವಿಡ್ ಸೋಂಕು ತೀವ್ರವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಪ್ರಸ್ತುತ ಸಂದರ್ಭದಲ್ಲಿ ಮುಂಜಾಗ್ರತಾ ಕ್ರಮ ಗಳನ್ನು ಪಾಲಿಸಬೇಕು. ಹೀಗಾಗಿ ಜಿಲ್ಲೆಯ ಕಚೇರಿಗಳು, ತಾಲೂಕು ಕಚೇರಿಗಳು, ತಾಲೂಕು ಪಂಚಾಯಿತಿ ಕಚೇರಿ ಸೇರಿದಂತೆ ಹೆಚ್ಚು ಜನ ಸಂದಣಿಯಾಗುವ ಕಚೇರಿಗಳಿಗೆ ಅಗತ್ಯ ಇರುವವರು ಮಾತ್ರ ಬರಬೇಕು. ಅನವಶ್ಯಕವಾಗಿ ಕಚೇರಿಗಳಿಗೆ ಭೇಟಿ ನೀಡಬಾರದು. ತುರ್ತು ಕೆಲಸಗಳಿಗೆ ಮಾತ್ರ ಕಚೇರಿಗೆ ಬರಬೇಕು. ತುರ್ತು ಕೆಲಸಗಳಿಗೆ ಕಚೇರಿಗೆ ಬರುವವರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಅಂತರ ಕಾಯ್ದುಕೊಳ್ಳಬೇಕು ಎಂದು ತಿಳಿಸಿದ್ದಾರೆ.