Advertisement

Guledgudda ರಾಜ್ಯದ ಏಕೈಕ ಜಗನ್ನಾಥ ದೇಗುಲದ ರಥೋತ್ಸವ ಸಂಭ್ರಮ

07:14 PM Jul 07, 2024 | Team Udayavani |

ಗುಳೇದಗುಡ್ಡ: ಪಟ್ಟಣದಲ್ಲಿ ಪುರಿ ಶ್ರೀ ಜಗನ್ನಾಥ ಸ್ವಾಮಿ ದೇವರ ಭವ್ಯ ರಥೋತ್ಸವ ಪಟ್ಟಣದಲ್ಲಿ ಬಹಳಷ್ಟು ಸಡಗರ, ಸಂಭ್ರಮದಿಂದ ಜರುಗಿತು.

Advertisement

ರಾಜ್ಯದಲ್ಲಿಯೇ ಏಕೈಕ ಜಗನ್ನಾಥ ದೇವಾಲಯ ಇದಾಗಿದೆ. ಪಟ್ಟಣದ ಶ್ರೀ ಜಗದೀಶ ರಾಧಾಕೃಷ್ಣ ಮಂದಿರದಿಂದ ಪುರಿ ಜಗನ್ನಾಥಸ್ವಾಮಿ ದೇವರ ಭವ್ಯ ರಥೋತ್ಸವ ಆರಂಭಗೊಂಡು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಅದ್ದೂರಿ ಮೆರವಣಿಗೆ ನಡೆಯಿತು.

ಮೆರವಣಿಗೆಯಲ್ಲಿ ಮಾರವಾಡಿ ಸಮಾಜದ ಮಹಿಳೆಯರು, ಯುವಕ, ಯುವತಿಯರು ದಾಂಡಿಯಾ ನೃತ್ಯ ಹಾಗೂ ದೇವರ ಭಜನೆ ಮಾಡಿ ಸಂಭ್ರಮಿಸಿದರು.

ರಾಜ್ಯದ ಏಕೈಕ ದೇವಸ್ಥಾನ: ಪುರಿಯಲ್ಲಿ ನಡೆಯುವ ಜಗನ್ನಾಥ ರಥೋತ್ಸವಕ್ಕೆ ಲಕ್ಷಾಂತರ ಭಕ್ತರು ಅಲ್ಲಿ ಭಾಗಿಯಾಗ್ತಾರೆ. ಆದರೆ ಅದೇ ಜಗನ್ನಾಥ ಮಂದಿರ ಕರ್ನಾಟಕ ರಾಜ್ಯದಲ್ಲೂ ಸಹ ಇದೆ. ದೇಶದಲ್ಲಿ ಜಗನ್ನಾಥ ಮಂದಿರ ಇರೋದು ಪುರಿಯಲ್ಲಿ,ನಂತರ ಅಹಮದಾಬಾದ್ ನಲ್ಲಿ ಅದು ಬಿಟ್ಟರೆ ಕರ್ನಾಟಕದ ಬಾಗಲಕೋಟೆ ಜಿಲ್ಲೆ ಗುಳೇದಗುಡ್ಡ ಪಟ್ಟಣದಲ್ಲಿ ಎಂಬುದು ವಿಶೇಷ.

ಇದು ಬಹಳ ಜನರಿಗೆ ಗೊತ್ತಿರಲಿಕ್ಕಿಲ್ಲ. ಇನ್ನೊಂದು ವಿಶೇಷ ಅಂದರೆ ಪುರಿಯಲ್ಲಿ ಜಗನ್ನಾಥನ ರಥೋತ್ಸವ ದಿನವೇ ಗುಳೇದಗುಡ್ಡ ಪಟ್ಟಣದಲ್ಲಿರುವ ಜಗನ್ನಾಥನ ರಥೋತ್ಸವ ಅದ್ಧೂರಿಯಾಗಿ ನಡೆಯುತ್ತದೆ.

Advertisement

ಪುರಿ ಜಗನ್ನಾಥ ಸ್ವಾಮಿ ದೇವರ ಈ ಸಂಭ್ರಮದ ರಥೋತ್ಸವದಲ್ಲಿ ಇಚ್ಚಲಕರಂಜಿ, ಪುನಾ, ನಾಸಿಕ, ಬಾಗಲಕೋಟೆ, ಹುಬ್ಬಳ್ಳಿ, ಸಾಂಗ್ಲಿ, ಇಲಕಲ್, ಅಮಿನಗಡ, ಧಾರವಾಡ ಸೇರಿದಂತೆ ಅನೇಕ ನಗರ ಪಟ್ಟಣಗಳ ಅಪಾರ ಭಕ್ತರು ರಥೋತ್ಸವಕ್ಕೆ ಸಾಕ್ಷಿಯಾದರು.

ಪುರಿ ಶ್ರೀ ಜಗನ್ನಾಥ ಸ್ವಾಮಿ ದೇವರ ಭವ್ಯ ರಥೋತ್ಸವದ ನಿಮಿತ್ತವಾಗಿ ಶ್ರೀ ಜಗದೀಶ ರಾಧಾಕೃಷ್ಣ ಮಂದಿರ ಹಾಗೂ ಬಾಲಾಜಿ ಮಂದಿರವನ್ನು ಅಂದ ಚಂದವಾಗಿ ಶೃಂಗಾರ ಮಾಡಲಾಗಿತ್ತು.

ಈ ಸಂಭ್ರಮದ ಪುರಿ ಜಗನ್ನಾಥ ಸ್ವಾಮಿ ದೇವರ ಭವ್ಯ ರಥೋತ್ಸವದಲ್ಲಿ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ನಾರಾಯಣದಾಸ ಮುಂದಡಾ, ಕಿಶನಗೋಪಾಲ ಸೋನಿ, ಸುರೇಶ ಇನಾನಿ,ಸೂರಜ್ ದರಕ, ಸತ್ಯನಾರಾಯಣ ರಾಠಿ, ಮುರುಳಿ ತಿವಾರಿ, ಪಂಕಜ್ ಝಂವರ, ಘನಶ್ಯಾಮದಾಸ ಇನಾನಿ, ಗೋಪಾಲ ಭಟ್ಟಡ, ಅಶೋಕ ಕಾಬ್ರಾ, ಕಮಲು ಮಾಲಪಾಣಿ, ಜುಗಲ ಮರ್ದಾ, ವೇಣುಗೋಪಾಲ ಸೋನಿ, ರಾಧೇಶ್ಯಾಮ ಮುಂದಡಾ, ಶ್ರೀಕಾಂತ ಸೋನಿ,ಗೋಪಾಲ ಮಾಲಪಾಣಿ, ದಾಮು ಮಾಲಪಾಣಿ,ಗೋವಿಂದ ಬೂತಡಾ, ಅನುಪ ತಾಪಡಿಯಾ, ಜುಗಲ ವರ್ಮಾ, ಜಗದೀಶ ರಾಠಿ, ಭರತ್ ಧೂತ್ ಈಶ್ವರ ಸೋನಿ,ದೀಪಕ ಧೂತ,ಸಂಪತ್ ಮಾಲಪಾಣಿ ದೇವಸ್ಥಾನ ಅರ್ಚಕ ಜಗದೀಶ ಪುರೋಹಿತ, ಶ್ಯಾಮಜಿ ಪುರೋಹಿತ, ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next