Advertisement

ಕೋವಿಡ್ ರೋಗಿ ಕರೆದೊಯ್ಯಲು 1.20 ಲಕ್ಷ ರೂ.ಬಿಲ್: ಆ್ಯಂಬುಲೆನ್ಸ್ ಧನ ದಾಹಕ್ಕೆ ನಲುಗಿದ ಕುಟುಂಬ

04:55 PM May 08, 2021 | Team Udayavani |

ಚಂಡೀಗರ: ಕೋವಿಡ್ ಸಂದರ್ಭದಲ್ಲಿ ಜನರು ಪ್ರಾಣ ಉಳಿಸಿಕೊಳ್ಳಲು ಪರದಾಡುತ್ತಿದ್ದರೆ, ಆ್ಯಂಬುಲೆನ್ಸ್ ನವರು ಹಣ ಮಾಡುವ ದಂಧೆಗೆ ಇಳಿದಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ. ಈ ಆರೋಪಕ್ಕೆ ಇದೀಗ ದೆಹಲಿಯಲ್ಲಿ ನಡೆದ ಘಟನೆಯೊಂದು ಜೀವಂತ ಸಾಕ್ಷಿಯಾಗಿದೆ.

Advertisement

ಗುರುಗಾಂವ್‍ನಿಂದ ಪಂಜಾಬ್‍ನ ಲೂಧಿಯಾನಕ್ಕೆ ( 350 ಕಿ.ಮೀ) ಕೋವಿಡ್ ರೋಗಿಯನ್ನು ಕರೆದುಕೊಂಡು ಹೋಗಲು ಖಾಸಗಿ ಆ್ಯಂಬುಲೆನ್ಸ್ ಏಜೆನ್ಸಿಯೊಂದು ಬರೋಬ್ಬರಿ 1.20 ಲಕ್ಷ ರೂಪಾಯಿ ಬಿಲ್ ಮಾಡಿದೆ.

ಘಟನೆ ಹಿನ್ನೆಲೆ :

ಕೋವಿಡ್ ಸೋಂಕಿನಿಂದ ನರಳುತ್ತಿದ್ದ ವಯಸ್ಸಾದ ವೃದ್ಧೆಯೋರ್ವಳಿಗೆ ಗುರುಗಾಂವ್‍ ಆಸ್ಪತ್ರೆಗಳಲ್ಲಿ ಬೆಡ್ ದೊರೆತಿರಲಿಲ್ಲ. ಎಷ್ಟೇ ಪ್ರಯತ್ನ ಪಟ್ಟರೂ ಬೆಡ್ ಸಿಗದೆ ಇದ್ದಾಗ ಪಂಜಾಬ್‍ನ ಲೂಧಿಯಾನಕ್ಕೆ ಕರೆದೊಯ್ಯಲು ನಿರ್ಧರಿಸಲಾಗಿತ್ತು. ಈ ವೇಳೆಯೂ ಆ್ಯಂಬುಲೆನ್ಸ್ ಕೊರತೆ ಎದುರಾಗಿತ್ತು. ಕೊನೆಗೆ ದೆಹಲಿ ಮೂಲದ ಖಾಸಗಿ ಆ್ಯಂಬುಲೆನ್ಸ್ ಸಿಕ್ಕಿತು. ಆದರೆ, 350 ಕಿ.ಮೀ ಪ್ರಯಾಣಕ್ಕೆ ಆ್ಯಂಬುಲೆನ್ಸ್ ಆಪರೇಟರ್ ಅವರು 1 ಲಕ್ಷ 40 ಸಾವಿರ ರೂಪಾಯಿ ಪಾವತಿಸುವಂತೆ ಕೇಳಿದ್ದಾರೆ. ಕೊನೆಗೆ ಮನವಿ ಮಾಡಿಕೊಂಡಾಗ 20 ಸಾವಿರ ರೂಪಾಯಿ ಕಡಿಮೆ ಮಾಡಿದ್ದಾರೆ.

ಪ್ರಯಾಣ ಆರಂಭಕ್ಕೂ ಮುನ್ನವೇ 95,000 ರೂಪಾಯಿ ಕಟ್ಟಲಾಗಿದೆ. ಆಸ್ಪತ್ರೆ ತಲುಪಿದ ಬಳಿಕ ಬಾಕಿ ಮೊತ್ತವನ್ನು ಸಂದಾಯ ಮಾಡಲಾಗಿದೆ. ಹಣ ಪಡೆದಿದ್ದಕ್ಕೆ ಆ್ಯಂಬುಲೆನ್ಸ್ ನವರು ಪಾವತಿಯನ್ನು ನೀಡಿದ್ದಾರೆ. ಲೂಧಿಯಾನದಲ್ಲಿ ವೃದ್ಧೆಗೆ ಬೆಡ್ ದೊರೆತಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

Advertisement

ಇನ್ನು ಆ್ಯಂಬುಲೆನ್ಸ್ ನವರಿಗೆ ನೀಡಲಾದ 1.20 ಲಕ್ಷ ರೂ. ಬಿಲ್‍ನ್ನು ವೃದ್ಧೆಯ ಕುಟುಂಬದವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಇದು ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಪೊಲೀಸರು ಆ್ಯಂಬುಲೆನ್ಸ್ ವಿರುದ್ಧ ದೂರು ದಾಖಲಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next