Advertisement
ಹಿಂಜಾವೇ ಕಾರ್ಯದರ್ಶಿ ಕಾರ್ತಿಕ್ ಸುವರ್ಣ ಮೇರ್ಲ ಹತ್ಯೆಗೆ ಪ್ರತೀಕಾರವಾಗಿ ಈ ಕೊಲೆ ನಡೆದಿದ್ದು, ಪ್ರಕರಣದ ಪ್ರಮುಖ ಸೂತ್ರಧಾರಿ ರೌಡಿಶೀಟರ್ ಕಿಶೋರ್ ಪೂಜಾರಿ ಕಲ್ಲಡ್ಕ (34) , ಸಹಚರರಾದ ರಾಕೇಶ್ ಮಡಿವಾಳ (27), ರೇಮಂತ್ ಗೌಡ (26) ನನ್ನು ಜೂ. 6 ರಂದು ಸೋಮವಾರಪೇಟೆಯಲ್ಲಿ ಬಂಧಿಸಲಾಗಿದೆ
ಕೊಲೆ ಮಾಡಿದ ಬಳಿಕ ಆರೋಪಿ ರೇಮಂತ್‌ನ ಬೈಕ್‌ನಲ್ಲಿ ಬೆಳ್ಳಾರೆಯ ನಿಂತಿಕಲ್‌ಗೆ ಬಂದು ಬೈಕ್ ಅಲ್ಲಿರಿಸಿ ಆಟೋ ವೊಂದನ್ನು ಬಾಡಿಗೆಗೆ ಗೊತ್ತು ಮಾಡಿಕೊಂಡು ಸುಬ್ರಹ್ಮಣ್ಯಕ್ಕೆ ತೆರಳಿದ್ದರು. ಸುಬ್ರಹ್ಮಣ್ಯದಿಂದ ಬಾಡಿಗೆ ಕಾರಿನಲ್ಲಿ ಬಿಸಿಲೆ ಮಾರ್ಗವಾಗಿ ಸಕಲೇಶಪುರದ ಹತ್ತೂರು ಎನ್ನುವಲ್ಲಿಗೆ ತಲುಪಿದ್ದಾರೆ. ಅಲ್ಲಿ ಎರಡು ದಿನಗಳ ಕಾಲ ಸುತ್ತಾಡಿಕೊಂಡು ಬಾಡಿಗೆ ಕಾರಿನಲ್ಲಿ ಸೋಮವಾರಪೇಟೆ ಕಡೆಗೆ ಬರುತ್ತಿದ್ದ ಬಗ್ಗೆ ಪೊಲೀಸರಿಗೆ ಮಾಹಿತಿ ದೊರೆತಿತ್ತು. ಸುಳ್ಯ ಎಸ್ಸೆ„ ದಿಲೀಪ್ ನೇತೃತ್ವದ ತಂಡ ಆರೋಪಿಗಳನ್ನು ವಶಕ್ಕೆ ಪಡೆದಿದೆ. ಹಾಸನ, ಕೊಡಗು ಪೊಲೀಸರು ಕಾರ್ಯಾಚರಣೆಗೆ ಸಹಕರಿಸಿದ್ದಾರೆ.
Related Articles
ಕಾರ್ತಿಕ್ ಕೊಲೆ ಪ್ರಕರಣದಲ್ಲಿ ಬಂಧಿತನಾಗಿದ್ದ ಪ್ರೀತೇಶ್ ಶೆಟ್ಟಿ ಪರ ಕಾರ್ತಿಕ್ ಕುಟುಂಬಸ್ಥರು ಸಾಕ್ಷಿ ಹೇಳಬೇಕು ಎಂದು ತಾರಿಗುಡ್ಡೆಯ ರಾಧಾಕೃಷ್ಣ ಪೂಜಾರಿ ಡೀಲ್ ಕುದುರಿಸಲು ಮುಂದಾಗಿದ್ದ ವಿಚಾರ ದಲ್ಲಿ ದರ್ಬೆ ಪೆಟ್ರೋಲ್ ಬಂಕ್ ಬಳಿ ರಾಧಾಕೃಷ್ಣ ಪೂಜಾರಿಯ ಕೊಲೆಗೆ ಯತ್ನಿಸಿದ ಕೇಸಿನಲ್ಲಿ ಕಿಶೋರ್ ಪೂಜಾರಿ ಕಲ್ಲಡ್ಕ, ರಾಕೇಶ್ ಪಂಚೋಡಿ, ರೇಮಂತ್ ಮತ್ತಿತರರು ಜೈಲು ಸೇರಿದ್ದರು. ಅಲ್ಲೇ ಕಾರ್ತಿಕ್ ಕೊಲೆಗೆ ಪ್ರತೀಕಾರ ತೀರಿಸಲು ಸಂಚು ಮಾಡಿದ್ದರು. ಜಾಮೀನು ಪಡೆದು ಜೈಲಿನಿಂದ ಹೊರ ಬಂದು ಈ ಕೃತ್ಯ ನಡೆಸಿದ್ದಾರೆ.
Advertisement
ಆರೋಪಿಗಳಿಂದಲೇ ಮಾಹಿತಿ ಸಂಗ್ರಹ!ಚರಣ್‌ರಾಜ್ ರೈ ಕೊಲೆ ಪ್ರಕರಣದಲ್ಲಿ ರವಿವಾರ ಬಂಧಿತರಾಗಿದ್ದ ಕೆಯ್ಯೂರು ನೂಜಿ ನಿವಾಸಿ ನರ್ಮೆàಶ್ ರೈ (29), ಕೆಯ್ಯೂರು ಗ್ರಾಮದ ಮಾಡಾವು ನಿವಾಸಿ ನಿತಿಲ್ ಶೆಟ್ಟಿ (23) ಕಡಬ ತಾಲೂಕಿನ ಬೆಳಂದೂರು ಮರಕಲ ನಿವಾಸಿ ವಿಜೇಶ್ (22) ನನ್ನು ತನಿಖೆಗೆ ಒಳಪಡಿಸಿ ಉಳಿದ ಮೂವರು ಆರೋಪಿಗಳ ಬಂಧನಕ್ಕೆ ಪೊಲೀಸರು ಕಾರ್ಯಪ್ರವೃತ್ತರಾಗಿದ್ದರು. ಬಂಧಿತ ಆರೋಪಿಗಳು ನೀಡಿದ ಮಾಹಿತಿಯ ಆಧಾರದಲ್ಲಿ ಕಿಶೋರ್ ಪೂಜಾರಿ ಕಲ್ಲಡ್ಕ, ರಾಕೇಶ್ ಪಂಚೋಡಿ ಮತ್ತು ರೇಮಂತ್‌ನನ್ನು ಪೊಲೀಸರು ಬಂಧಿಸಿದ್ದಾರೆ.